ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಂದೇಶದ ಕಥೆಗಳು ರಂತಿದೇವನ ವ್ರತ ಅಂದಿಗೆ ರಂತಿದೇವನ ಉಪವಾಸ ವ್ರತದ ನಲವತ್ತೆಂಟು ದಿನಗಳು ಮುಗಿದಿದ್ದವು ಒಂದು ತೊಟ್ಟು ನೀರೂ ಮುಟ್ಟದ ಕರಿಣ ಉಪವಾನ! ವ್ರತದ ಕೊನೆಯಾಗಿ, ಆ ದಿನ ಬೆಳಿಗ್ಗೆ ಪಾರಣೆಯ ಹೊತ್ತು ಪಾರಣೆಗಾಗಿ ಎಲ್ಲ ಅಣಿಯಾಗಿದೆ ನಲವತ್ತೆಂಟು ದಿನಗಳ ದೀರ್ಘ ಉಪವಾಸದ ಆಯಾಸ, ಹಸಿವು-ನೀರಡಿಕೆಗಳ ಸಂಕಟದ ನಡುವೆ ಎಲ್ಲ ಪೂಜಾದಿ ಕಲಾವ ಮುಗಿಸಿದ ಪರಮಾನ್ನ-ನೀರನ್ನು ಭಗವಂತನಿಗೆ ಅರ್ಪಿಸಿ, ತಾನೂ ಸ್ವೀಕರಿಸಬೇಕೆಂದು ಸಜ್ಜಾದ ಸಮಯಕ್ಕೆ ಸರಿಯಾಗಿ ಬ್ರಾಹ್ಮಣನೋರ್ವ ಅವನ ಬಳಿ ಬಂದ ತುಂಬು ಶ್ರದ್ಧಾ-ಭಕ್ತಿಗಳಿಂದ ರಂತಿದೇವ ಅವನನ್ನು ಸತ್ಕರಿಸಿದ , ಉಣಬಡಿಸಿದ ದಾನ-ದಕ್ಷಿಣೆ ನೀಡಿ ಕಳುಹಿಸಿದ ನಂತರ ತಾನು ಪಾರಣೆ ಮಾಡಬೇಕೆನ್ನುವಷ್ಟರಲ್ಲಿ ಹಸಿದ ಶೂದ್ರನೋರ್ವ ಅತಿಥಿಯಾಗಿ ಮನೆಗೆ ಬಂದ ಅವನಿಗೂ ನತ್ಕರಿಸಿ ಅನ್ನ ನೀಡಿದ ರಂತಿದೇವ ಮತ್ತೆ ಉಳಿದ ಆಹಾರವನ್ನು ಸ್ವೀಕರಿಸುವ ಕ್ಷಣ ಮತ್ತೋರ್ವ ಅತಿಧಿ ಪ್ರತ್ಯಕ್ಷ! ಅವನ ಜೊತೆ ಅವನ ನಾಯಿಗಳ ಪರಿವಾರ ಬೇರೆ!! “ನನಗೆ, ನನ್ನ ಪರಿವಾರಕ್ಕೆ ತುಂಬ ಹಸಿವಾಗಿದೆ ನಮಗೆಲ್ಲ ಅನ್ನ ನೀಡು ಎಂದು ಬೇಡಿದ ಬೇಡಿ ಬಂದವರಿಗೆ “ಇಲ್ಲ' ಎಂಬ ಉತ್ತರ ರಂತಿದೇವನ ಬಳಿ ಇಲ್ಲವೇ ಇಲ್ಲ ಸರಿ! ತನ್ನ ಬಳಿ ಇದ್ದ ಉಳಿದೆಲ್ಲ ಅನ್ನವನ್ನು ಆ ಪರಿವಾರಕ್ಕೆ ನೀಡಿದ ಕೊನೆಗೆ ರಂತಿದೇವನ ಪಾಲಿಗೆ ಪಾರಣೆಗಾಗಿ ಉಳಿದದ್ದು ನೀರು ಮಾತ್ರ! ಅಷ್ಟರಲ್ಲಿ ಚಾಂಡಾಲನೋರ್ವ ಬಾಗಿಲಿಗೆ ಬಂದು ನಿಂತ ತುಂಬ