ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಂದೇಶದ ಕಥೆಗಳು ಶುಕ್ರಾಚಾರ್ಯರು ಓಡೋಡಿ ಬಂದರು ರಾಜನನ್ನು ಕರೆದು ಗುಟ್ಟಾಗಿ ಈ ವಾಮನ ವಟುವಿನ ಈ ಬೇಡಿಕೆಯ ಹಿಂದೆ ಏನೋ ನಂಚಿದೆ ಈ ಬೇಡಿಕೆಯನ್ನು ಪುರಸ್ಕರಿಸಬೇಡ ಮಾತು ತಪ್ಪಿದರೂ ಚಿಂತೆಯಿಲ್ಲ ಬದುಕು ಮುಖ್ಯ ಈ ವಟುವಿನ ಬಣ್ಣದ ಮಾತಿಗೆ ಬಲಿಯಾಗಿ ಮೋಸಹೋಗದಿರು ಎಂದೆಲ್ಲ ಉವದೇಶಿಸಿದರು ಯಾವುದಕ್ಕೂ ಬಲಿ ಕಿವಿಕೊಡಲಿಲ್ಲ ತಾನು ನೀಡಿದ ಮಾತಿಗೆ ಬದ್ದನಾದ ಮಾತಿನಂತೆ ದಾನ ನೀಡಲು ಸಿದ್ದನಾದ ಮೂರು ಹೆಜ್ಜೆಗಳ ಭೂಮಿಯನ್ನು ದಾನ ನೀಡಿ 'ಕೃಷ್ಣಾರ್ವಣ ಎಂದ ಯಜ್ಞಮಂಟಪದ ಎದುರು ಪುಟ್ಟ ಆಸನದಲ್ಲಿ ಕುಳಿತಿದ್ದ ವಾಮನಾಕಾರದ ವಟು ಎದ್ದು ನಿಂತ ನೋಡ ನೋಡುತ್ತಿದ್ದಂತೆಯೇ ತ್ರಿವಿಕ್ರಮರೂಪಿಯಾಗಿ ಬೆಳೆದು ನಿಂತ ಆಕಾಶವೆಲ್ಲ ವ್ಯಾಪಿಸಿ ಬೆಳೆದು ನಿಂತ ಆ ರೂವ ಕಂಡು ನೆರೆದ ಜನರೆಲ್ಲ ಬೆರಗಾಗಿ ನಿಂತರು ತ್ರಿವಿಕ್ರಮರೂಪದ ಭಗವಂತ ಹೆಜ್ಜೆಯೊಂದರಿಂದ ಭೂಲೋಕವನ್ನಿಡೀ ಅಳೆದ ಇನ್ನೊಂದು ಹೆಜ್ಜೆಯಿಂದ ದ್ಯುಲೋಕನ್ನೂ ವ್ಯಾಪಿಸಿದ ಬಲಿಚಕ್ರವರ್ತಿಯ ನಾಮ್ರಾಜ್ಯದ ವ್ಯಾಪ್ತಿಮುಗಿದೇ ಹೋಯಿತು! ಹೇ ಬಲೀಂದ್ರ ! ಎಲ್ಲಿಡಲಿ ನನ್ನ ಮೂರನೇ ಹೆಜ್ಜೆ?” ಬಲಿ ಯೋಚಿಸಲಿಲ್ಲ ತನ್ನ ತಲೆ ತಗ್ಗಿಸಿ ಕೈಮುಗಿದು ನಿಂತ ಭಗವಂತನ ಪಾದದಲ್ಲಿ ತನ್ನ ಸರ್ವಸ್ವ ಸಮರ್ಪಿಸಿ ತನ್ನನ್ನು ಅರ್ಪಿಸಿಕೊಂಡ ತ್ರಿವಿಕ್ರಮ ಇನ್ನೊಂದು ಹೆಜ್ಜೆಯನ್ನು ಬಲಿಚಕ್ರವರ್ತಿಯ ಶಿರಸ್ಸಿನ ಮೇಲಿರಿಸಿ, ಅವನನ್ನು ಪಾತಾಳಕ್ಕೆ ಒತ್ತಿ ಅವನ ಚಕ್ರಾಧಿಪತ್ಯ ಕಿತ್ತುಕೊಂಡು ಆದರೆ ಅವನ ಅನನ್ಯ ಭಕ್ತಿಗೆ ಮೆಚ್ಚಿ ಅವನಿಗೆ ವಾತಾಳಲೋಕ ಆಧಿವತ್ಯ ನೀಡಿ ತಾನು ಅವನ ಮನೆಯ ಬಾಗಿಲು ಕಾಯ್ದ ಇದು ಬಲಿಯ ಕತೆ ಬಲಿಚಕ್ರವರ್ತಿಯ ಬಲಿದಾನದ ಕತೆ ವಾಮನರೂಪದ ಭಗವಂತ ಇಂದ್ರನಿಗಾಗಿ ಬಲಿಯನ್ನು ಕೆಳಕ್ಕೆ ಒತ್ತಿದರೂ, ಬಲಿಯ ಆತ್ಮನಮರ್ಪಣೆಯ ಭಕ್ತಿಗೆ ಮೆಚ್ಚಿ ಅವನನ್ನು ಮೇಲಕ್ಕೆ ಎತ್ತಿದ | ಭಾಗವತ