ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ನಂದೇಶದ ಕಧೆಗಳು 13 'ರಾಜನ್, ಇದರಲ್ಲಿ ನಮ್ಮ ತಪ್ಪೇನೂ ಇಲ್ಲ ಈ ದಿನ ಮೇನೆಯ ಒಂದೆಡೆಯ ಭಾಗ ಹೊರಲು ಹೊಸಬನೊಬ್ಬನನ್ನು ನಿಯಮಿಸಲಾಗಿದೆ ನಮ್ಮ ನಡೆಗೆ ಈ ಹೊಸಬ ಹೊಂದಿಕೊಳ್ಳುತ್ತಿಲ್ಲ ಇವನ ಜೊತೆ ನಮಗೆ ಮೇನೆ ಹೊರುವುದೇ ಕಷ್ಟವಾದೆ' ಎಂದರು ರಹೂಗಣ ರಾಜ ಆ ತರುಣನತ್ತ ಬಗ್ಗಿ ನೋಡಿ ಅವನನ್ನು ಮೂದಲಿಸಿದ “ಅಯ್ಯೋ ಮಾವ? ತಮ್ಮ ತುಂಬ ದಣಿವಾಗಿರಬೇಕು ನಿನಗೆ! ಅಲ್ಲವೆ? ತುಂಬ ದೂರದಿಂದ ಮೇನೆಯನ್ನು ಒಬ್ಬನೇ ಹೊತ್ತಿರುವೆ ನೋಡುವಾವ ವಯಸ್ಸಾಗಿದೆ ಬೇರೆ!” ಎಂದೆಲ್ಲ ವ್ಯಂಗ್ಯವಾಡಿದ ಆ ತರುಣ ತಲೆಗೆ ಹಚ್ಚಿಕೊಂಡಂತೆ ತೋರಲಿಲ್ಲ. ಇಷ್ಟೆಲ್ಲ ಹೇಳಿದಾಗಲೂ ಮತ್ತದೇ ರೀತಿ ನಡೆದಾಗ ರಾಜನ ಸಹನೆ ಮೀರಿತ್ತು ಸ್ವಲ್ಪ ಕಟುವಾಗಿಯೇ ನುಡಿದಿದ್ದ ಆಗಲೂ ಆ ತರುಣನ ಮುಖದಲ್ಲಿ ಯಾವ ಭಾವವೂ ತೋರಲಿಲ್ಲ ಈ ಬಾರಿ ಅದೇಕೋ ಸ್ವಲ್ಪ ಬಾಯ್ದೆರೆದ ಆ ತರುಣ “ಹೇ ರಾಜನ್? ನೀನು ಹೇಳಿದುದೆಲ್ಲ ಸರಿಯೇ! ಆದರೆ ಈ ಮಾತೆಲ್ಲ ಯಾರಿಗೆ ಹೇಳುತ್ತಿರುವೆ? ಯಾರಿಲ್ಲಿ ಒಡೆಯ? ಯಾರು ಸೇವಕ? ಯಾರು ಹೊರುವವರು? ಯಾವ ಭಾರ? ನನಗೊಂದೂ ತಿಳಿಯುತ್ತಿಲ್ಲ ನಿರ್ವಿಕಾರ ಭಾವ ಹೊಂದಿರುವ ನನಗೆ ಯಾವ ಚಿಕಿತ್ಸೆ ನೀ ಮಾಡುವೆ? ಅದರಿಂದಾಗುವ ಪ್ರಯೋಜನವಾದರೂ ಏನು? " ಎಂದೆಲ್ಲ ಆ ತರುಣ ಹೇಳುತ್ತಲೇ ಇದ್ದ ರಹೂಗಣ ವಿದ್ವಾಂನ ಬ್ರಹ್ಮಜ್ಞಾನಿಗಳನ್ನು ಕಂಡವ ಅವನಿಗೆ ಗೊತ್ತು ಅವಧೂತರ ವರಿ ಈ ಮಾತನೆಲ್ಲ ಕೇಳಿದ ರಹೂಗಣ ಹೌಹಾ ರಿದ ಮೇನೆಯಿಂದ ತಕ್ಷಣ ಕೆಳಕ್ಕೆ ಹಾರಿದ ಆ ತರುಣ ಬ್ರಾಹ್ಮಣನ ವಾದ ಗಳಿಗೆ ಎರಗಿದ ಕ್ಷಮೆ ಬೇಡಿದ ತನ್ನ ರಾಜತ್ವ ಮರೆತ , ಕೈಮುಗಿದು ನಿಂತ “ಹೇ ಬ್ರಹ್ಮನ್, ಯಾರು ನೀನು? ಈ ಬ್ರಾಹ್ಮಣ ವೇಷದಲ್ಲಿ ಅಲೆಯುತ್ತಿರುವ ನಿನ್ನ ನಿಜ ಸ್ವರೂವವೇನು? ನಿನ್ನ ಗಂಭೀರವಾದ ನೂತ್ರಾಯ ಮಾತಿನ ಆಂತರ್ಯ ನನ್ನಂತಹ ಪಾಮರರಿಗೆ ಹೇಗೆ ತಿಳಿಯಲು ಸಾಧ್ಯ? ಆದ್ದರಿಂದ, ತಾವು ನಿಮ್ಮ ಒಗಟು ಮಾತನ್ನು ಬಿಡಿಸಿ