ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

14 ನಂದೇಶದ ಕಧೆಗಳು ಮಾತನಾಡಬೇಕು ಅನುಗ್ರಹಿಸಬೇಕು ನನ್ನ ಮೇಲೆ ಕೃಪೆ ಮಾಡಬೇಕು ಎಂದೆಲ್ಲವರಿವರಿಯಾಗಿ ಪ್ರಾರ್ಥಿಸಿದ ರಹೂಗಣ ಆ ಅವಧೂತರಿಗೆ ದಯೆ ಮೂಡಿತು 'ರಹೂಗಣ, ಯಾರು ಈ ಮೇನೆಯ ಭಾರ ಹೊತ್ತವರು? ಮೇನೆ ಬೆತದ ಮೇಲಿದೆ ಬೆತ್ತ ಹೆಗಲ ಮೇಲೆ ಹೆಗಲು ಎದೆಯ ಮೇಲೆ ಎದೆ ಉದರದ ಮೇಲೆ ಉದರ ತೊಡೆಗಳ ಮೇಲೆ ತೊಡೆಯ ಭಾರ ಮೊಣಕಾಲ ಮೇಲೆ ಕಾಲು ನೆಲದ ಮೇಲೆ ಆ ನೆಲ ಹೀಗೆ ಈ ಎಲ್ಲ ಭಾರ ಹೊತ್ತವನು ಯಾರು? ಆ ಭಗವಂತ ಮಾತ್ರ ಈ ದೇಹ, ಅದರಲ್ಲಿ ನನ್ನದೆಂದು ಅಂಟಿಕೊಂಡ ಜೀವ, ಇದೆಲ್ಲ ನಿಮಿತ್ತ ಮಾತ್ರ ಜೀವನಿಗೆ ಯಾವ ವಿಧವಾದ ಸ್ವಾತಂತ್ರ್ಯವೂ ಇಲ್ಲ. ಬರೀ ಮಿಧ್ಯಾಭಿಮಾನ! ನಾನು ನನ್ನದೆಂಬ ಬಿಗುಮಾನ ಇದೇ ಈ ಸಂನಾರದ ಮೂಲ ನಾನು ಭರತ ಈ ಮೊದಲು ಅನೇಕ ಜನ್ಮಗಳನ್ನೆತ್ತಿ ಈಗ ಈ ಶರೀರದಲ್ಲಿರುವೆ ಇದೆಲ್ಲ ಮಾಯೆಯಂದು ನನಗೆ ತಿಳಿದಿದೆ ಹೀಗಾಗಿ ನೀನು ಹೇಳಿದ ಯಾವ ಮಾತೂ ನನ್ನಲ್ಲಿ ಉದ್ವೇಗ ಉಂಟು ಮಾಡಲಿಲ್ಲ ನೋಡು ರಹೂಗಣ, ನಿನಗೂ ಈ ನಂನಾರದಿಂದ ಮುಕ್ತಿಯ ಬಯಕೆ ಇದ್ದರೆ, ಈ ಎಲ್ಲ ಅಭಿಮಾನಗಳನ್ನು ತೊರೆದು ಸ್ವತಂತ್ರನಾದ ಭಗವಂತನನ್ನು ಶರಣುಹೊಂದು ಎಂದೆಲ್ಲ ತನ್ನ ಪೂರ್ವಜನ್ಮ ವೃತ್ತಾಂತಗಳನ್ನೆಲ್ಲ ತಿಳಿಸಿ ಉಪದೇಶಿಸಿದ ರಹೂಗಣ ಅವಧೂತ ಭರತರಿಂದ ಬ್ರಹ್ಮಜ್ಞಾನ ವಡೆದು ಕೃತಾರ್ಧನಾದ “ಯಾವ ಹುತ್ತದಲ್ಲಿ ಯಾವ ಹಾವೋ? ಎಂಬಂತೆ ನಮಗೆ ಯಾವ ರೂವದಲ್ಲಿ ಜ್ಞಾನಿಗಳು ಇರುವರು ಎಂಬುದು ತಿಳಿಯಲಾರದು ಆದುದ ರಿಂದ ಎಲ್ಲರ ಜೊತೆ ನೌಜನ್ಯ - ಪ್ರೇಮದಿಂದ ವ್ಯವಹಿಸುವುದನ್ನು ಕಲಿಯಬೇಕು ಭಾಗವತ 'ನಮೋ ಮಹದ್ಯೋ5ನ್ನು ನಮಃ ಶಿಶುಲ್ಕೂ ನಮೋ ಯುವಬ್ರೂ ನಮ ಆ ವಟುಭ್ಯಃ!!