ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಂದೇಶದ ಕಧೆಗಳು ವಿಪತ್ತು ಬೇಡಿದ ಭಕ್ತ res ಮಹಾಭಾರತದ ಭೀಕರ ಸಂಗ್ರಾಮ ಮುಗಿದಿತ್ತು ಆ ಧರ್ಮ ಯುದ್ಧದ ಸೂತ್ರಧಾರ ಶ್ರೀಕೃಷ್ಣ ದ್ವಾರಕೆಗೆ ಹೊರಟು ನಿಂತ ಅವನನ್ನು ಬೀಳ್ಕೊಡಲು ಎಲ್ಲಾ ಬಾಂಧವರೊಡನೆ ವಾಂಡವ ಸೋದರರು ನಿಂತಿದ್ದಾರೆ ಕೃಷ್ಣ ಹಿರಿಯರಿಗೆಲ್ಲ ನಾಂತ್ವನ ಹೇಳಿ ಅಭಿವಂದಿಸಿದ ರಥವನೇರಿದ ಉತ್ತರೆ - ವಾಂಡವರ ಏಕೈಕ ಸೊಸೆ, ಅಭಿಮನ್ಯುವಿನ ಮಡದಿ, ತುಂಬು ಗರ್ಭಿಣಿ - ಓಡೋಡಿ, ಭಯದಿಂದ ಗಡಗಡನೆ ನಡುಗುತ್ತಾ ಬಂದಿದ್ದಾಳೆ ಬೆನ್ನಟ್ಟಿ ಬರುತ್ತಿರುವ ಬ್ರಹ್ಮಾಸ್ತ್ರದ ಉರಿಯಿಂದ ತನ್ನ ಗರ್ಭವನ್ನು ಕಾವಾಡುವಂತೆ ಭಗವಂತನ ಬಳಿ ಬೇಡಿ ಬಂದಿದ್ದಾಳೆ “ಹೇ ಜಗದೊಡೆಯ' ಜಗದ್ರಕ್ಷಕ! ದೇವದೇವ ಮೃತ್ಯು ಬೆನ್ನಟ್ಟಿ ಬಂದ ಈ ಸಮಯದಲ್ಲಿ ನಿನ್ನ ಹೊರತು ನನಗಾರು ರಕ್ಷಕರು? ಗೋವಿಂದ, ನನಗೆ ನನ್ನ ಕಂದಮ್ಮನನ್ನು ಉಳಿಸಿಕೊಡು ನನಗೆ ಏನಾದರೂ ಆಗಲಿ, ಚಿಂತೆ ಯಿಲ್ಲ ನನ್ನ ಉದರದಲ್ಲಿ ಬೆಳೆಯುತ್ತಿರುವ ನನ್ನ ಕಂದನಿಗೆ ಮಾತ್ರ ಏನೂ ಆಗದಿರಲಿ ಅವಳಿಗೆ ಗೊತ್ತು ವೀರಾಧಿವೀರರ ಮಣಿಸಿದ ತನ್ನ ಮಾವಂ ದಿರಾದ ಪಾಂಡವರೂ ಸಂಪೂರ್ಣ ರಕ್ಷೆ ನೀಡಲಾರರೆಂದು ಬಗೆದೇ ಅವಳು ಶ್ರೀಕೃಷ್ಣ ಪರಮಾತ್ಮನ ಮೊರೆಹೊಕ್ಕಳು | ಆ ತಾಯಿಯ ದೈನ್ಯದ ಕೂಗು ಭಗವಂತನ ಕರುಣಾಮಯ ಹೃದಯಕ್ಕೆ ಮುಟ್ಟಿತು ಶ್ರೀಕೃಷ್ಣ ತನ್ನ ಇನ್ನೊಂದು ರೂಪದಿಂದ ಗರ್ಭದೊಳಗೆ ಪ್ರವೇಶಿಸಿದ ಭಗವಂತನದು ಅಚಿಂತ್ಯ- ಅದ್ಭುತ ಶಕ್ತಿ ತನ್ನ ಸುದರ್ಶನವನ್ನು ಕೈಯ್ಯಲಿ ಧರಿಸಿ ಅಶ್ವತ್ಥಾಮನ ಬ್ರಹ್ಮಾಸ್ತ್ರವನ್ನು ಮಣಿಸಿದ ಅವಳ ಗರ್ಭವ ಉಳಿಸಿದ ಆರಿಹೋಗುತ್ತಿದ್ದ ಕುರುಕುಲದ ಕೊನೆಯ ದೀವದ ಕುಡಿ ವರೀಕ್ಷಿತನನ್ನು ಬದುಕಿಸಿದ, ಬೆಳಗಿಸಿದ ಶ್ರೀಕೃಷ್ಣ ಮತ್ತೆ ಹೊರಟು ನಿಂತ