ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಂದೇಶದ ಕಧೆಗಳು 62 ಕೊನೆಗಾಲದ ನೆನಪು ಅವನು ಹಾಸಿಗೆಯಲ್ಲಿ ಮಲಗಿದ್ದಾನೆ ಸುತ್ತ ಬಂಧು ಜನರು ನೆರೆದಿದ್ದಾರೆ “ನಾವು' ಎನ್ನುತ್ತಿದ್ದಾರೆ “ ಅಂತಿಮ ಆಸೆ ಈಡೇರಿಸಿಬಿಡಿ' ಹಾಸಿಗೆಯ ಬಳಿ ಕುಳಿತ ಮಗನಿಗೆ ಹೇಳುತ್ತಿದ್ದಾರೆ ಎಲ್ಲರೂ ಆ ವ್ಯಕ್ತಿಯ ಕೊನೆಯುಸಿರಿನ ಕ್ಷಣಕ್ಕೆ ಕಾಯುತ್ತಿದ್ದಾರೆ ಅಷ್ಟು ಹೊತ್ತಿಗೆ, ಆ ಮುದುಕ ಅಪ್ಪ ಮೆಲ್ಲನೆ ಕಣೆರೆದ ಎಲ್ಲರಿಗೂ ಕುತೂಹಲ ಮೆಲ್ಲನೆ ಏನೋ ಕೈ ಮಾಡಿದ ಕೈಯ್ಯನನ್ನೋ ತೋರಿಸಿ ನನ್ನೆ ಮಾಡಿದ ಯಾರಿಗೂ ಏನೊಂದೂ ಅರ್ಥವಾಗಲಿಲ್ಲ ಮಗ ಹತ್ತಿರ ಬಂದು ಕಿವಿಯೊಡ್ಡಿದ ಆ ವ್ಯಕ್ತಿಗೆ ಏನೂ ಹೇಳಲಾಗಲಿಲ್ಲ ಆದರೆ ಏನನ್ನೋ ಹೇಳಲು ತವಕಿಸುತ್ತಿರುವುದು ಸ್ಪಷ್ಟವಾಗಿತ್ತು ಕೊನೆಗೆ ಕೈಸನ್ನೆ ಮಾಡಿ ಮಗನಿಗೆ ಏನೋ ಹೇಳಿದ ಮಗನಿಗೆ ತಕ್ಷಣ ಅರ್ಧವಾಯಿತು ಕೋಣೆಯಲ್ಲಿ ಉರಿಯುತ್ತಿದ್ದ ದೀವವನ್ನು ಆದಷ್ಟು ಚಿಕ್ಕದಾಗಿ ಉರಿಸಲು ಆ ಮುದುಕ ಹೇಳುತ್ತಿದ ದೊಡ್ಡದಾಗಿ ಉರಿಯುವ ದೀವದಿಂದ ಎಣ್ಣೆ ಹೆಚ್ಚು ಖರ್ಚಾಗುವುದೆಂಬ ಭೀತಿ ಆ ಲೋಭಿ ಮುದುಕನಿಗೆ ! ಅದೇ ಅವನ ಕೊನೆಯ ಮಾತು ಮರುಕ್ಷಣ ಆ ಮುದುಕ ಕೊನೆಯುಸಿರು ಎಳೆದಿದ್ದ ಮನುಷ್ಯ ಇಡಿಯ ಬದುಕಿನಲ್ಲಿ ಯಾವುದರ ಬಗೆಗೆ ಹಗಲಿರುಳು ಚಿಂತನೆ ನಡೆಸುವನೋ, ಕೊನೆಯ ಗಳಿಗೆಯಲ್ಲೂ ಅವನಿಗೆ ಅದೇ ನೆನಪಿಗೆ ಬರುವುದು ಬದುಕಿನುದ್ದಕ್ಕೂ ನಾವು ಗಳಿಸಿದ ಸಂಸ್ಕಾರಗಳು ಕೊನೆಗಾಲ ದಲ್ಲಿ ಮಹತ್ವದ್ದಾಗುತ್ತವೆ ಆದ್ದರಿಂದ, ಭಗವಚ್ಚಿಂತನೆಯನ್ನು ಕೊನೆಗಾಲದಲ್ಲಿ ನಡೆದ ಬೇಕಾದರೆ, ಜೀವನವಿಡೀ ಅದನ್ನು ಅಭ್ಯಸಿಸಬೇಕಾಗುತ್ತದೆ ಅದಕ್ಕಾಗಿ ನಿರಂತರ ಪ್ರಯತ್ನ ನಡೆಯಬೇಕು ಸಂತತಂ ಚಿಂತಯೇನಂತಂ ಅಂತಕಾಲೇ ವಿಶೇಷತಃ