ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

66 ನಂದೇಶದ ಕಧೆಗಳು ದುರ್ವಾಸನೆ ಅರಮನೆಗೆ ಬಂದ ಆ ದೊಡ್ಡ ಯೋಗಿಗಳನ್ನು ತನ್ನ ಅರಮನೆಯಲ್ಲೇ ಇರಿಸಿಕೊಳ್ಳಲು ರಾಜನಿಗೆ ಬಲು ಆನೆ ಆದರೆ, ಆ ಯೋಗಿಗಳು ಒಪ್ಪಲಿಲ್ಲ “ರಾಜನ್ನಿನ್ನ ಅರಮನೆಯ ದುರ್ವಾಸನೆಯನ್ನು ನನಗೆ ಸಹಿಸಲಾಗುತ್ತಿಲ್ಲ' ಎಂದರು ರಾಜನಿಗೆ ಅಚ್ಚರಿ! ಇಷ್ಟು ಶುದ್ಧವಾದ, ಸುಗಂಧ ದ್ರವ್ಯಗಳಿಂದ ನುಗಂಧಮಯವಾದ ಅರಮನೆಯಲ್ಲಿ ದುರ್ವಾಸನೆ ಎಲ್ಲಿಂದ? ಅಲ್ಲದೇ, ತನಗೆ ಅನುಭವಕ್ಕೆ ಬಾರದ ಈ ದುರ್ವಾಸನೆ ಯಾವುದು? ಯೋಗಿಗಳು ನಕ್ಕು, ರಾಜನನ್ನು ತಮ್ಮೊಂದಿಗೆ ಕರೆದೊಯ್ದರು ಚಮ್ಮಾರರ ಬೀದಿಯೊಳಗೆ ನಾಗಿದರು ಹಿಂಬಾಲಿಸಿದ ರಾಜನೂ ಅಲ್ಲಿ ಕಾಲಿಡುತ್ತಿದ್ದಂತೆಯೇ ಮೂಗಿಗೆ ಬಡಿಯುತ್ತಿದ್ದ ದುರ್ವಾಸನೆ ತಡೆಯಲಾರದೇ ನಿಂತುಬಿಟ್ಟ ಯೋಗಿಗಳು ಕೇಳಿದರು “ಏಕೆ? ಅಲ್ಲಿಯೇ ನಿಂತೆ? “ಯೋಗಿಗಳೇ, ತುಂಬ ದುರ್ವಾಸನ? ಹೇಗೆ ಬರಲಿ?' “ಇಲ್ಲಿ ಇಂತಹ ವಾತಾವರಣದಲ್ಲಿ ಚಮಾರರು ಬದುಕಿಲ್ಲವೆ? “ ಆದರೆ, ಅವರಿಗೆ ಈ ದುರ್ವಾಸನೆ ಒಗ್ಗಿ ಹೋಗಿದೆ 'ಹಾಗೆಯೇ, ನಿನ್ನ ಅರಮನೆಯ ತುಂಬ ವಿಷಯ ವದಾರ್ಥಗಳ ದುರ್ವಾಸನೆ ತುಂಬಿ ಹೋಗಿದೆ ಅದು ನಿನಗೂ ಒಗ್ಗಿಹೋಗಿದೆ ಅವುಗಳ ನಡುವೆಯೇ ಸದಾ ಬದುಕುತ್ತಿರುವ ನಿನಗೆ ಅದು ತಿಳಿಯುತ್ತಿಲ್ಲ ವಿಷಯ ಪದಾರ್ಥಗಳಿಂದ ದೂರವಿರುವ ನಮಗೆ ಅದರ ದುರ್ವಾಸನೆ ನಹಿನಲಾಗದು ” ಅಂತೆಯೇ ನಾವು ಈ ಸಂನಾರದ ವಿಷಯ ಸುಖದ ದುರ್ವಾಸನೆಯಲ್ಲಿಯೇ ಇದ್ದರೂ ಅದಕ್ಕೆ ಒಗ್ಗಿಕೊಂಡು ಬಿಟ್ಟಿದ್ದೇವೆ ಇದೇ ಸುಗಂಧ ಎಂದೇ ಬಗೆದಿದ್ದೇವೆ