ಶಕ) ಹರಿಚಂದ್ರ -- - - - - - - - - ಪದಬಂಧೋ ಲೋ ಹಾರಿ ಕೃತವರ್ಣಕ್ರಮಸ್ಥಿತಿಃ | ಭಟ್ಟಾರಹರಿಚಂದ್ರಸ ಗದ್ಯಬಂಧೋ ಪಾಯತ್ || ಎಂದು ಹೇಳಿರುವ (ಭಟ್ಟಾರ) ಹರಿಚಂದ್ರನೊಬ್ಬ. (೨) ಧರ್ಮಶರ್ಮಾಭ್ಯುದಯಕಾವ್ಯಕಾರನಾದ ಹರಿಚಂದ್ರನೊಬ್ಬ. (೩) ಪರಮಾರರಾಜನಾದ ನವಸಾಹಸಾಂಕನ ಮಂತ್ರಿ ಮತ್ತು ವೈದ್ಯ ನಾಗಿದ್ದ ಹರಿಚಂದ್ರನೊಬ್ಬ, ಇವನು ಚರಕಸಂಹಿತೆಗೆ ಟೀಕೆಯನ್ನು ಬರೆದಿರುವು ದಾಗಿ ವಿಶ್ವಕೋಶಕಾರನಾದ ಮಹೇಶ್ವರನು- ಶ್ರೀಸಾಹನಾಂಕನೃಪತೇರನವದ್ಯ ವಿದ | ವೈದ್ಯಾಂತರಂಗಪದಪದ್ದತಿಮೇವ ಬಿಭ್ರತ್ || ಯಶ್ಚಂದ್ರಚಾರುಚರಿತೋ ಹರಿಚಂದ್ರನಾಮಾ || ಸ್ಮವ್ಯಾಖ್ಯಯಾ ಚರಕ ತಂತ್ರಮಲಂಚಕಾರ || ಎಂದು ಹೇಳಿರುವನು. ವಾಗ್ರಟನ ( ಅಷ್ಟಾಂಗಹೃದಯ ' ವೆಂಬ ವೈದ್ಯಗ್ರಂಥಕ್ಕೆ
- ಆಯುರ್ವೆದರಸಾಯನ' ವೆಂಬ ಟಿಕೆಯನ್ನು ಬರೆದಿರುವ ಹೇಮಾದ್ರಿಯು
ತಾನು ಬರೆದಿರುವ ಟಿಕೆಯಲ್ಲಿ, ಚರಕೇ ಹರಿಚಂದ್ರಾಃ ಸುಶ್ರುತೇ ಚೇಜ್ ಟಾದಿಭಿಃ | ಟೀಕಾಕಾರೆರ್ನ ನಿರ್ಣಿತಂ ಇಹ ಹೇಮಾದ್ರಿದಿತಂ || ಎಂದು ಹೇಳಿರುವನು. (೪) ಜೀವಂಧರಚಂಪೂಕಾರಹರಿಚಂದ್ರನೊಬ್ಬ. ಬಾಣಭಟ್ಟನು ಹೇಳುವ ಭಟ್ಟಾರಹರಿಚಂದ್ರನ ವಿಚಾರವೂ ಹಿಂದೆಯೇ ಹೇಳ ಲ್ಪಟ್ಟಿರುವುದು. ಈಗ ಎರಡನೆಯ ಹರಿಚಂದ್ರನ ವಿಚಾರವು ಬರೆಯಬೇಕಾಗಿರು ವುದು ಇವನ ತಂದೆಯ ಹೆಸರು ಆದ್ರ್ರದೇವ, ತಾಯಿಯ ಹೆಸರು ರಾಧೆ. ಇವನು ದಿಗಂಬರ ಜೈನನು. ಕಾಯಸ್ಥನು , ಇದೆ' ವಿಚಾರವಾಗಿ ಧರ್ಮಶರ್ಮಾ ಭ್ಯುದಯದಲ್ಲಿ ಹೇಳಿರುವ ಗ್ರಂಥಕತ್ತು ಪ್ರಶಸ್ತಿಯಲ್ಲಿ: -- ಶ್ರೀಮಾನಮೇಯಮಹಿಮಾಸ್ತಿ ಸ ಸೋಮಕಾನಾಂ ವಂಶಃ ಸಮಸ್ತ ಜಗತೀವಲಯಾವತಂಸ: || ಹಾವಲಂಬನಿಮವಾಪ್ಯ ಯಮುಲ್ಲ ನಂತೀ ವ್ಯಾಪಿ ನ ಸ್ಟಲತಿ ದುರ್ಗಪಥೇಷು ಲಕ್ಷ್ಮೀಃ ಮುಕ್ತಾಫಲಸ್ಥಿತಿರಲಂಕೃತಿಷು ಪ್ರಸಿದ್ಧ || ೧ ||
- Dictionary of Jaina Biography Addenda P. 15