ಸಂಸ್ಕೃತಕವಿಚರಿತ - - ಕ್ರಿಸ್ತ ಸ್ಪತ್ರಾದ್ರ್ರದೇವ ಇತಿ ನಿರ್ಮಲಮೂರ್ತಿರಾಯೇತ್ | ಕಾಯಸ್ಥ ಏವ ನಿರವದ್ಯ ಗುಣಗ್ರಹ: ಸ ಕೋsಪಿ ಯಃ ಕುಲಮಶೇಷವಲ ಚಕಾರ || ೨ || ಲಾವಣ್ಯಾಂಬುನಿಧಿಃ ಕಲಾಕುಲಗಪಂ ಸೌಭಾಗ್ಯ ಸದ್ದಾಗ್ಯ ಯೋಃ ಕ್ರಿಡಾವೇ ವಿಲಾಸವಾಸವಲಭೀ ಭೂಷಾಸ್ಪದಂ ಸಂಪದಾ | ಶೌಚಾಚಾರವಿವೇಕ ವಿಸ್ಮಯಮಹಿ: ಪ್ರಾಣಪ್ರಿಯಾ ಚೂಲಿನ, ಶರ್ವಾಣೀವ ಪತಿವ್ರತಾ ಪ್ರಣಯಿನೀ ರಥೋತಿ ತಸ್ಯಾಭವತ್ || ೩ || ಅರ್ಹತ್ಪದಾಂಭೋರುಹಚಂಚರೀಕಸ್ತಯೋ ಸುಶಃ ಶ್ರೀಹರಿಚಂದ್ರ ಆಸೀತ್ || - ಗುರುಪ್ರಸಾದಾದಮಲಾ ಬಭೂವು: ಸಾರಸ್ವತೀ ಸ್ತೋತಸಿ ಯಸ್ಯ ವಾಚ: ||೪|| - ಎಂದಿದೆ. ಮೇಲೆ ಹೇಳಿರುವುದರಲ್ಲಿ ಆರ್ದದೇವನ ಹೆಂಡತಿಯ ಹೆಸರು ರಾಧೆ ಯೆಂದು ಹೇಳಿದೆ. ಗ್ರಂಥಕರು: ಪ್ರಶಸ್ತಿಯಂತೆ ( ರಷ್ಯಾ ” ಎಂದು ಸ್ಪಷ್ಟವಾಗಿ ಹೇಳಬೇಕಾಗುತ್ತದೆ. ಇವೆರಡರಲ್ಲಾ ವುದು ಸರಿಯೆಂದು ಹೇಳಲಾಗದಾಗಿದೆ ರಥ್ಯಾ ಎಂದರೆ ರಾಧೆಯೆಂದು ಅರ್ಥಮಾಡುವದು ಬಹು ಸಾಹಸದ ಕೆಲಸ ಕಾಲ:-ಕ್ರಿ. ಶ. ಹತ್ತನೆಯ ಶತಮಾನದ ಆದಿಭಾಗದಲ್ಲಿದ್ದ ಮಹಾಕವಿ ರಾಜಶೇಖರನು 1 ಕರ್ಪೂರಮಂಜರಿ' ಯ ಮೊದಲನೆಯ ಅಂಕದಲ್ಲಿ ಇವನನ್ನು ಹೇಳಿರುವುದರಿಂದ ರಾಜಶೇಖರನಿಗಿಂತ ಹರಿಚಂದ್ರನು ಪ್ರಾಚೀನನಾಗಿರಬೇಕೆಂದೂ ಕ್ರಿ. ಶ ೯ನೆಯ ಶತಮಾನದಲ್ಲಿದ್ದಿರಬೇಕೆಂದೂ ವ್ಯಕ್ತವಾಗುವುದು. ಗ್ರಂಥ:-ಇವನು 'ಧರ್ಮಶರ್ವಾಭ್ಯುದಯ' ಎಂಬ ಚಂಪೂಮಹಾ ಕಾವ್ಯವನ್ನು ಬರೆದಿರುವನು. ಇದರಲ್ಲಿ ೨೧ ಸರ್ಗಗಳಿರುವುವು. ೨೪ ಮಂದಿ ತೀರ್ಥಂಕರರಲ್ಲಿ ೧೫ನೆಯವನಾದ ಧರ್ಮನಾಥನಜನಾರಭ್ಯ ನಿರ್ವಾಣಪರ್ಯಂತದ ಚರಿತೆಯು ವರ್ಣಿಸಲ್ಪಟ್ಟಿರುವುದು. ಕಾವ್ಯಶೈಲಿಯ ಶಿಶುಪಾಲವಧಕಾವ್ಯವನ್ನು ಹೋಲುವುದಾಗಿದೆ. ಪ್ರತಿಸರ್ಗಾಂತ್ಯದಲ್ಲಿಯೂ ( ಇತಿ ಮಹಾಕವಿಶ್ರೀ ಹರಿಚಂದ್ರ ವಿರಚಿತೇ ಧರ್ಮಶರ್ವಾಭ್ಯುದಯೇ ಮಹಾಕಾವ್ಯ” ಎಂದಿರುವುದು. ಕಥಾಸಾರಾಂಶ-ಸುಪ್ರಸಿದ್ದವಾದ ಭರತಖಂಡದಲ್ಲಿ ಉತ್ತರಕೋಸಲ ವೆಂಬ ದೇಶಕ್ಕೆ “ರತ್ನ ಪುರ”ವೆಂಬ ರಾಜಧಾನಿಯು ಇದ್ದಿತು. ಇದನ್ನು ಮಹಾ ಸೇನನೆಂಬ ರಾಜಚೂಡಾಮಣಿಯು ಆಳುತ್ತಿದ್ದನು. ಇವನಿಗೆ ಸುವ್ರತೆ ಎಂಬ ಪಟ್ಟದ ರಾಣಿಯು ಇದ್ದಳು. ಬಹುಕಾಲದವರೆಗೂ ಇವರಿಗೆ ಸಂತಾನವಿಲ್ಲದೆ ಚಿಂತಿಸುತ್ತಿರಲು ಹಠಾತ್ತಾಗಿ ರಾಜೋದ್ಯಾನದಲ್ಲಿ ಪ್ರಾಚೇತಸನೆಂಬ ಋಷಿಪುಂಗ “ ಧರ್ಮಶರ್ಮಭು ದಯ ಪುಟ ೧೬-೩.
ಪುಟ:ಸಂಸ್ಕೃತ ಕವಿ ಚರಿತೆ ದ್ವಿತೀಯ ಸಂಪುಟ.djvu/೨೪
ಈ ಪುಟವನ್ನು ಪರಿಶೀಲಿಸಲಾಗಿಲ್ಲ.