೨೨೨ ಸಂಸ್ಕೃತಕವಿಚರಿತೆ ೧೩ನೆಯ ಶತಮಾನ ಶ್ರೀ ಧ ಕ ದಾ ಸ ಇವನು ಕ್ರಿ. ಶ. ೧೨೦೫ರಲ್ಲಿ “ಸದುಕ್ತಿಕರ್ಣಾಮೃತ ಎಂಬ ಗ್ರಂಥವನ್ನು ಬರೆದಿರುವನು. ಇದರಲ್ಲಿ ೪೪೬ ಕವಿಗಳ ಶ್ಲೋಕಗಳು ಬರೆಯಲ್ಪಟ್ಟು ಹೆಚ್ಚಾಗಿ ವಂಗಕವಿಗಳ ಹೆಸರುಗಳೇ ಹೇಳಲ್ಪಟ್ಟಿವೆ. ಗ್ರಂಥಪರಿಶೀಲನದಿಂದ ಗ್ರಂಥಕಾ ರನ ತಂದೆಯು ರಾಜನಾದಲಕ್ಷಣಸೇನನಲ್ಲಿದ್ದು ದಾಗಿ ಬೋಧೆಯಾಗುತ್ತದೆ : ಮ ಹ ಶ್ವ ರ ಇವನು ಕ್ರಿ. ಶ. ೧೨೧೧ರಲ್ಲಿ ವಿಶ್ವ ಪ್ರಕಾಶ'ವೆಂಬ ಕೋಶವನ್ನು ರಚಿಸಿದ ದಾಗಿ CC ಇತಿ ಸಕಲವೈದ್ಯರಾಜಿ ಚಕ್ರಮುಕ್ತಾಶಿಖರಸ್ಯ ಗದ್ಯಪದ್ಯವಿದ್ಯಾನಿಧೇಃ ಮಹೇಶ್ವರಸ್ಯಕೃತ ವಿಶ್ವಪ್ರಕಾಶಾಭಿದಾನೇ.............” ಎಂಬುದರಿಂದ ಖಂಡಿತ ವಾಗುತ್ತದೆ. ಇದಕ್ಕೆ ಶಬ್ದ ಭೇದಪ್ರಕಾಶ” ಎಂದೂ ಹೆಸರು. ಇದರಲ್ಲಿ ಮೂರುವರಿ ಚ್ಛೇದಗಳಿರುವುವು.# ಅ ರಿ ಸಿ೦ ಪ ಇವನು ಶೈತಾಂಬರ ಜೈನಪಂಗಡಕ್ಕೆ ಸೇರಿದವನು. ಲಾವಣ್ಣ ಸಿಂಹ ಅಥವಾ ಲವಣಸಿಂಹನ ಮಗನು. ಅವರ ಚಂದ್ರನಮಿತ್ರನು. ಇವನು ವಿಸಂ. ೧೨೭೬ ೧೨೯೭ ಅಥವಾ ಕ್ರಿ. ಶ. ೧೨೧೯-೧೨೪೦ರಲ್ಲಿದ್ದವನು ಇವನು ತನಗೆ ಆಶ್ರಯ ದಾತನಾದ ವಸ್ತು ಪಾಲನ ಹೆಸರಿನಲ್ಲಿ ಸುಕೃತಸಂಕೀರನ ಎಂಬ ಗ್ರಂಥವನ್ನು ಬರೆದಿರುವನು. ಇದು ಅಲಂಕಾರ ಗ್ರಂಥ. ಇದಕ್ಕೆ ಕಾವ್ಯ ಕಲ್ಪಲತಾಎಂಬಾ ಪರ ನಾಮವೂ ಇರುವುದು. ಇವನು ತನ ಗ್ರಂಥಕ್ಕೆ (ಕಾವ್ಯಕಲ್ಪಲತಾಶಿಕ್ಷಾವೃತ್ತಿ' ಎಂಬ ವ್ಯಾಖ್ಯಾನವನ್ನೂ ಬರೆದಿರುವನು.! - History of Classical Sanskrit Literature P, 122 $ Descriptive Catalogue of Sanskrit Manuscripts Tanjaore P. 3886. & Dictionary of Jain Biography P. 95 ↑ S. K. De's Sanskrit Poetics P. 210
ಪುಟ:ಸಂಸ್ಕೃತ ಕವಿ ಚರಿತೆ ದ್ವಿತೀಯ ಸಂಪುಟ.djvu/೨೪೦
ಈ ಪುಟವನ್ನು ಪರಿಶೀಲಿಸಲಾಗಿಲ್ಲ.