ಜೀವದತ್ತ ಸೂರಿ, ಪ್ರಹ್ಲಾದನದೇವ ೨೨೩ ಜಿ ನ ದ 3 ಸೂರಿ ಇವನು ಕ್ರಿ.ಶ. ೧೩ ನೆಯ ಶತಮಾನದ ಪೂರ್ವಾರ್ಧದವನು, ಅಮರಚಂದ್ರನ ಆಚಾರನು. (ವಿವೇಕವಿಲಾಸ'ವೆಂಬ ಗ್ರಂಥವನ್ನು ಬರೆದಿರುವನು, ಪ್ರ ಕ್ಲಾ ದ ನ ದೆ ವ ಇವನು ಪರಮಾರವಂಶದವನು. ಇವನಿಗೆ ಪರಮಾರ ಪ್ರಹ್ಲಾದನ ದೇವ ನೆಂದೂ ಹೆಸರಿದ್ದಿತು. ಇವನು ಯಶೋಧವಳನ ಮಗನು, ಚಂದ್ರಾವತಿಯರಾಜ ನಾಗಿದ್ದ ಧಾರಾವರ್ಷನ ತಮ್ಮನು. ಧಾರಾವರ್ಷನು ಮಹಾ ಪರಾಕ್ರಮಶಾಲಿ ಯಾಗಿದ್ದುದರಿಂದ ವಸ್ತು ಪಾಲನಂತಹ ಪ್ರಮುಖರು ಅನೇಕ ಸಲ ಇವನ ಸಹಾಯ ವನ್ನು ಕೋರುತ್ತಿದ್ದರು, ಇವನು ಬಹುಕಾಲದವರೆಗೆ ರಾಜ್ಯವನಾಳುತ್ತಿದ್ದು ದ ರಿಂದ ಇವನ ತಮ್ಮನಾದ ಪ್ರಹ್ಲಾದನದೇವನಿಗೆ ರಾಜಪದವು ದೊರೆಯಲಿಲ್ಲವಾಗಿ ತೋರುತ್ತದೆ. ಕಾಲ:-ವಿ, ಸಂ ೧೨೨೦ ಅಥವಾ ಕ್ರಿ. ಶ. ೧೧೬೩ರ ವೇಳೆಗೆ ಪ್ರಹ್ಲಾದನ ದೇವನಿಗೆ ಯುವರಾಜ ಪದವಿಯು ದೊರೆತಿದ್ದಿ ತಾಗಿ ಶಾಸನಗಳಿಂದ ತಿಳಿಯಬರುತ್ತದೆ. ಇವನು ಸಂ ೧೨೬೫ ಅಥವಾ ಕ್ರಿ. ಶ. ೧೨೦೮ರ ವರೆಗೆ ಜೀವಿಸಿದ್ದನ್ನು, ತನ್ನ ಅಣ್ಣ ನಂತೆ ಇವನೂ ಮಹಾಪರಾಕ್ರಮಿಯಾಗಿದ್ದು ದಲ್ಲದೆ ಮಹಾಕವಿಯೂ ಆಗಿದ್ದನು. ಶಾರ್ಜಧರ ಪದ್ದತಿ'ಯಲ್ಲಿಯೂ ಜಲ್ಲಣನ ಸೂಕ್ತಿಮುಕ್ತಾವಳಿಯಲ್ಲಿಯೂ ಇವನ ಹೆಸರಿನ ಕೆಲವು ಶ್ಲೋಕಗಳು ದೊರೆಯುವುವು. ಇವನು ತನ್ನ ಅಣ್ಣನಮಗ ಸೋಮಸಿಂಹದೇವನಿಗೆ ಸಕಲಶಾಸ್ತ್ರ ವಿದ್ಯಾಭ್ಯಾಸವನ್ನು ಮಾಡಿಸಿದುದಾಗಿ (ಆಬೂ ಪ್ರಶಸ್ತಿಯಿಂದತಿಳಿಯಬರುತ್ತದೆ.… ಇವನು ತನ್ನ ಹೆಸರಿನಲ್ಲಿ ಪ್ರಹ್ಲಾದನಪುರವೆಂಬು ದನ್ನು ಸ್ಥಾಪಿಸಿದುದಾಗಿಯೂ ಈಗ ಇದನ್ನು ಪಾಲನಪುರವೆಂದು ಕರೆಯವು ಚಂದ್ರಾವತಿಯು ಮಾರವಾರದೇಶಕ್ಕೆ ಸೇರಿದಸಂನ್ಯಾನವಾಗಿದ್ದು ದಾದರೂ ಗುಜರಾತಿನ ರಾಜರಿಗೆ ಮಂಡಲೇಶ್ವರರಾಗಿದ್ದುಕೊಂಡು ಸಂದರ್ಭ ಬಿದ್ದಾಗ ಸೈನ್ಯವನ್ನು ನಡೆಯಿಸಿ ಕೊಡುತ್ತಿದ್ದರು. 1 ಸಾರ್ಧಪರಾಕ್ರಮದ ಮುನ್ನುಡಿ, ಪುಟ: ೨. $ ಧಾರಾವರ್ಷಸು ತೋಯಂ ಜಯತಿ ಶ್ರೀ ಸೋಮಸಿಂಹದೇವೋ ಯಃ ಪಿತ್ರತಃ ಶೌರಂ ವಿದ್ಯಾಂ ಪಿತೃವತೋ ಜ್ಞಾನಮುಭಯತೋ ಜಗೃಹೇ || ೩೯
ಪುಟ:ಸಂಸ್ಕೃತ ಕವಿ ಚರಿತೆ ದ್ವಿತೀಯ ಸಂಪುಟ.djvu/೨೪೧
ಈ ಪುಟವನ್ನು ಪರಿಶೀಲಿಸಲಾಗಿಲ್ಲ.