ಈ ಪುಟವನ್ನು ಪರಿಶೀಲಿಸಲಾಗಿಲ್ಲ.

-- --. .. " ೧೦ ಸಂಸ್ಕೃತಕವಿಚರಿತೆ


- -

ರ್ಥವಾಗಿ ನಿನ್ನು ದರದಲ್ಲಿ ಜನಿಸುವನು ಎಂದು ಕಾಲಕ್ರಮದಲ್ಲಿ ಸಾಕ್ಷಾದ ಗವಂತನಾದ ಪರಮ ಜಿನೇಶ್ವರನು ಸುವ್ರತೆಯ ಉದರದಲ್ಲಿ ಮಾನವಲೀಲೆಗೆ ತಕ್ಕಂತೆ ಜನಿಸಿದುದನ್ನು ನೋಡಿ ಇಂದ್ರನು ಭಗವಂತನಾದತೀರ್ಥಂಕರನಿಗೆ ಮೆರು ಶಿಖರದಲ್ಲಿ ಜನ್ಮಾಭಿಷೇಕಮಹೋತ್ಸವವನ್ನು ಮಾಡಬೇಕೆಂದೆಣಿಸಿ ಮಹಾಸಮಾರಾಧ ನೆಯನ್ನು ನಡೆಯಿಸಿ, ಧರ್ಮನಾಥನೆಂದುನಾಮಕರಣವನ್ನು ಮಾಡಿ ತಾಯಿಯಾದ ಸುವ್ರತೆಯ ಬಳಿಯಲ್ಲಿ ಮಲಗಿಸಿ ತನ್ನ ಲೋಕವನ್ನು ಕುರಿತು ತೆರಳಿದನು. ಧರ್ಮ ನಾಥನು ಬಾಲ್ಯವನ್ನು ಕಳೆದು ಚತುಃಷಷ್ಟಿಕಲಾಪ್ರವೀಣನಾಗಿ ಗುರುದಕ್ಷಿಣೆ ಯನ್ನು ಕೊಟ್ಟು ಯೋಗ್ಯಕಾಲದಲ್ಲಿ ವಿದರ್ಭರಾಜನ ಕುವರಿಯಾದ ಶೃಂಗಾರವತಿ ಯನ್ನು ವಿವಾಹಮಾಡಿಕೊಂಡು ಮಾತಾಪಿತೃಗಳ ಆಜ್ಞೆಯಂತೆ ನಡೆದುಕೊಳ್ಳು ತಿರಲು ಮಹಾಸೇನನು ಧರ್ಮನಾಥನಿಗೆ ರಾಜ್ಯಭಾರವನ್ನು ವಹಿಸಿ ರಾಜನೀತಿ ಗಳನ್ನು ಹೇಳಿ ತಪೊಯೋಗ್ಯವಾದ ದಿವ್ಯದೇಶವನ್ನು ಕುರಿತು ಹೊರಟುಹೋದನು. ಧರ್ಮನಾಥನು ಧರ್ಮದಿಂದ ಬಹುಕಾಲ ರಾಜ್ಯ ಪರಿಪಾಲನವನ್ನು ಮಾಡಿ ಕೊನೆಗೆ ವಿರಕ್ತನಾಗಿ ಜಿನದಿ? ಕೈಯನ್ನು ವಹಿಸಿ ತೀರ್ಥಂಕರತ್ವವನ್ನು ಹೊಂದಿದನು. ಇದೇ ಇವನ ಕಥೆ. ಇದರಲ್ಲಿ ಮಹಾಸೇನನು ಧರ್ಮನಾಥನಿಗೆ ಮಾಡಿದ ರಾಜ ನೀತಿಯ ನಾರಾಂಶವು ಹಿಗಿರುವದು: - ಧರ್ಮನಾಥ ! ಸುಗುಣಗಳಿಗೆ ಆಕರನಾದ ನೀನು ನಿನ್ನ ಸದ್ದು ಣಪ್ರಕಟನ ದಿಂದ ಹೆದೆಯಿಂದ ಕೂಡಿರುವ ಕೊದಂಡದಂತೆ ಸಕಲಕಾರ್ಯಗಳಲ್ಲಿಯೂ ಕೀರ್ತಿ ಯನ್ನು ಗಳಿಸಿ ಪ್ರಶಂಸಾರ್ಹನಾಗುವೆ ನೀನು ಸತ್ವಸಮೃದ್ದಿಯಿಂದಿರುವನಾದರೂ ಸನ್ಮಂತ್ರಿಗಳ ಸಾಮೂಾಸ್ಯವನ್ನೆ೦ದಿಗೂ ಬಿಡದಿರು, ಚಪಲಳಾದ ಲಕ್ಷ್ಮಿಯಿಂದ ಮತ್ತೆ ನಾಗಬೇಡ. ಯಾವಾಗಲೂ ಕೊಶವನ್ನು ವೃದ್ಧಿ ಹೊಂದಿಸುತ್ತಿರುವನಾಗು. ಏಕೆಂದರೆ ವಿಪುಲಧನಸನ್ನದ್ರನಾಗಿರುವ ರಾಜನನ್ನು ಯಾರೂ ಜೈಸಲಾರರು, ಆಶಿ ತಸಂರಕ್ಷಣದಿಂದ ಅವರ ಪ್ರೀತಿಯನ್ನು ಸಂಪಾದಿಸುವನಾಗು. ಇಲ್ಲದಿದ್ದರೆ ಅವರು ನಿನ್ನನ್ನು ಪ್ರೀತಿಸುವ ಬದಲು ಪ್ರತಿಭಟಿಸುವರು. ಅನಂತರ ಅವರನ್ನು ಅಡಗಿಸುವುದು ಅತಿಕಷ್ಟವಾಗುವದು. ಆದುದರಿಂದ ನಿನ್ನ ಸಾಪವರ್ತಿಗ ಳಾದ ಜನರಿಗೆ ಜಿಹಾನಾಸ್ಪದನಾಗದಿರು. ಪಾತಾಪಾತ್ರವನ್ನರಿತು ಅವರನ್ನು ತಕ್ಕ ಕೆಲಸಗಳಲ್ಲಿ ನಿಯೋಗಿಸು, ಅಮೂಲ್ಯವಾದ ಮಣಿಯನ್ನು ಅತ್ಯಂತ ಹೇಯವಾದ ಸೀಸದಲ್ಲಿ ಮೆಟ್ಟದ ಹಾಗೆ ಯೋಗ್ಯರಾದವರನ್ನು ಆಯುಕ್ತಕಾರ್ಯಗಳಲ್ಲಿ ನಿಯಮಿ ಸದಿರು. ರಾಜನು ಯಾವಾಗಲೂ ಪ್ರಜಾಪಕನಾಗಿದ್ದುಕೊಂಡು ಸರಿಯಾದ ಬೆಂಬಲದಿಂದ ಕೂಡಿ ಶತ್ರುನಿಗ್ರಹವನ್ನು ಮಾಡತಕ್ಕದ್ದು. ಆದುದರಿಂದ ಮೊದಲು ಅಂತಃಶತ್ರುಗಳನ್ನು ಸರಿಪಡಿಸಿಕೊಂಡು ಅಥವಾ ನಿರ್ಮೂಲಮಾಡಿ ಅನಂತರ ಇತರ ಶತ್ರುಗಳನ್ನು ಜಯಿಸಲು ಹವಣಿಸಬೇಕು. ಲೋಕದಲ್ಲಿ ರಾಜ್ಯವನ್ನು ಗಳಿಸಿ