ಶಕ] ಹರಿಚಂದ್ರ ದುದಕ್ಕೆ ಸುಖಸಡುವದೆ: ಪ್ರಯೋಜನವಾಗಿರುವದು. ಇಂತಹ ಸುಖ ಫಲವು ಅರ್ಥಮೂಲವಾಗಿರುವದು. ಇವೆರಡನ್ನು ಬಿಟ್ಟು ಧರ್ಮಮಾಗ್ರವನ್ನೇ ಕೋರುವ ನಿಗೆ ಈ ರಾಜ್ಯವು ನಿರರ್ಥಕವಾಗಿಹೊಗುವದು, ಗುರುಹಿರಿಯರಲ್ಲಿ ವಿನೀತ ನಾಗಿರು, ಈ ಲೋಕದಲ್ಲಿ ರಾಜನಾದವನು ಪ್ರಜೆಗಳಿಗೆ ಬುದ್ಧಿಯನ್ನು ಕಲಿಸಿ ಅವರನ್ನು ವಿನಯಸಂಪನ್ನರನ್ನಾಗಿ ಮಾಡುವುದಕ್ಕಿಂತಲೂ ಬೇರೆ ಕಾರ್ಯವಾ ವುದೂ ಇಲ್ಲ. ಹಣವನ್ನು ಕೊಟ್ಟು ಎಲ್ಲರನ್ನೂ ತೃಪ್ತಿಗೊಳಿಸಲಾಗುವದಿಲ್ಲ. ಹಾಗೆ ಆಗುವದೆಂದು ತೋರುವುದಾದರೂ ಆ ತೃಪ್ತಿಯು ಕ್ಷಣಮಾತ್ರವಿರುವುದು. ಆದುದ ರಿಂದ ಪ್ರಜೆಗಳಿಗೆ ವಿದ್ಯಾ ವಿನಯಸಂಪತ್ತುಗಳನ್ನುಂಟುಮಾಡಬೇಕು. ನೀನು ಯಾವಾಗಲೂ ಸರ್ವರನ್ನೂ ತನ್ನವರು ಪರರೆನ್ನದೆ ಸಮದೃಷ್ಟಿಯಿಂದ ಕಾಪಾಡುವ ನಾಗು. ಧನಪಿಶಾಚಗ್ರಸ್ತನಾಗಿ ಪ್ರಜೆಗಳ ಆದಾಯವನ್ನರಿಯದೆ ತೆರಿಗೆಗಳನ್ನು ಹೆಚ್ಚಿಸಿ ತೆರಿಸಿ ಹಿಂಸಿಸುತ್ತ ರಾಜಭಕ್ತಿ ಪರಾಹ್ಮುಖರನ್ನಾಗಿ ಮಾಡಬೇಡ. ಯಾವಾ ಗಲೂ ತಾಳ್ಮೆಯಿಂದಿರು. ಅರಿಷಡ್ವರ್ಗಗಳಿಗೆಡೆಗೊಡದಿರು. ದುಷ್ಟನಿಗ್ರಹ ಶಿಷ್ಟ ಪರಿಪಾಲನೆಯು ರಾಜನಕರ್ತವ್ಯವೆಂಬುದನ್ನು ಮರೆಯದಿರು. ದುರೂಹ ವಿಷಯಗ ಳನ್ನು ಜ್ಞಾನವೃದ್ಧರಾದ ಮಂತ್ರಿಗಳೊಡನೆ ಆಲೋಚಿಸಿ ನಡೆಯಿಸು. ಒಂದುವೇಳೆ ಕೈಗೊಳ್ಳುವ ವಿಷಯವು ನಿನಗೆ ತಿಳಿದುದಾಗಿರುವುದಾದರೂ ರಾಜ್ಯಕ್ಕೆ ಹಿತಾಕಾಂಕ್ಷಿಗ ಳಾದ ಮಂತ್ರಿಗಳಿಗೆ ತಿಳಿಸದೆ ಸ್ವತಂತ್ರಿಸಿ ಮಾಡದಿರು. ನಿಜವಾದ ಹಿತೋಕ್ತಿಗಳನ್ನು ಹೇಳುವರನ್ನು ಧಿಕ್ಕರಿಸಬೇಡ. ನಟಪಟಗಾಯಕರ ಮೋಹಕ್ಕೆ ಸಿಲುಕದಿರು, ಲಕ್ಷ್ಮೀನದವ ಎಂತಹ ವಿವೇಕಿಯನ್ನೂ ಅವಿವೇಕಿಯನ್ನಾಗಿ ಮಾಡದಿರದು. ಮದಾಂಧನಿಗೆ ಪ್ರಪಂಚವೂ ಕಾಣಿಸದು, ಗುರುಹಿರಿಯರು ಕಿರಿಯರಾಗಿ ತೋರು ವರು, ವಿವೇಕವು ಹೋಗಿ ಅವಿವೇಕಮಾರ್ಗವು ತಲೆದೋರಿ ಜನ್ಮವನ್ನು ಅಸಾರ್ಥ ಕಪಡಿಸುವದು. ಸಸ್ಮಿತರನ್ನು ಯಾವಾಗಲೂ ಸಂತೊಷಗೊಳಿಸುತ್ತಿರು, ಪ್ರಜೆಗೆ ಇನ್ನು ವೃಥಾ ಪಾತಕಕ್ಕೆ ಗುಗೊಳಿಸದಿರು, ನೃತ್ಯರನ್ನು ಅರ್ಥಸಂಪತ್ತಿಯಿಂದ ತುನ್ನಿ ಗೊಳಿಸು, ಪಂಡಿತರು ಯಾವಾಗಲೂ ತಮ್ಮ ಸೂಕ್ತಿಗಳಿಂದ ನಮ್ಮ ಕೀರ್ತಿಯನ್ನು ನೆಲೆಗೊಳಿಸುವರಾದುದರಿಂದ ಅವರನ್ನು ಎಲ್ಲರಿಗಿಂತಲೂ ಹೆಚ್ಚಾಗಿ ಗೌರವಿಸು. ಪ್ರಪಂಚವು ಸ್ಥಿರವೆಂದೂ ರಾಜಭೋಗವು ಸಿರನೆಂದೂ ರಾಜಭೋಗಭಾಗ್ಯವು ಸ್ಥಿರ ವೆಂದೂಸಂಬಿ ಧರ್ಮದಿಂದ ಪ್ರಮತ್ತನಾಗದಿರು, ಮುಖ್ಯವಾಗಿ ನೀನು ಸಕಲ ಕಲ್ಯಾಣಗುಣಾಶ್ರಯನಾಗಿದ್ದು ಪ್ರಜೆಗಳಿಗೂ ಇತರರಿಗೂ ಮಾರ್ಗದರ್ಶಕನಾಗಿ ಶಾಶ್ವತವಾದ ಕೀರ್ತಿಯನ್ನು ಪಡೆಯುವನಾಗು. ಶೃಂಗಾರವತಿಯ ಚಿತ್ರ ಪಠದ ಕೆಳಗೆ ಬರೆದಿರುವುದೆಂದು ಹೇಳುವ ಶ್ಲೋಕವು ಹೀಗಿರುವುದು -- ಧರ್ಮಶರ್ಮಭ್ಯುದಯ ಸರ್ಗ೧೮ ಶ್ಲೋಕ ೧೫-೧೦೦.
ಪುಟ:ಸಂಸ್ಕೃತ ಕವಿ ಚರಿತೆ ದ್ವಿತೀಯ ಸಂಪುಟ.djvu/೨೭
ಈ ಪುಟವನ್ನು ಪರಿಶೀಲಿಸಲಾಗಿಲ್ಲ.