ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಸ್ಕೃತಕವಿಚರಿತೆ [ಕ್ರಿಕ ಪತ್ರುರ್ದೇವಿ ಪ್ರಣಯಸಚಿವಂ ವಿಧಿ ದಿರ್ಘಾಯುಷ್ ಮಾಂ ಜೀವಾತುಂ ತೇ ದಧತಮನಘಂ ತಸ್ಯ ಸಂದೇಶಮಂತಃ ಶರಾಣಾಂ ಯಃ ಶರದುಪಗಮೇ ವೀರಪವರಾಣಾಂ ಸಂಮಾನಾರ್ಹ೦ ಸಮಯಮುಚಿತಂ ಸೂಚಯೇಕ್ಕೂ ಜಿತ್ಸೆ ಓ: || ಹಂಸ, ಸು || ಪಾತ್ರವಿವೇಚನೆ. ಮಹಾ ಕವಿಕಾಳಿದಾಸನು ತನ್ನ ಮೇಘ ಸಂದೇಶಕಾವ್ಯಕ್ಕೆ:- ಕಶ್ಚಿತ್ (೧) ಕಾಂತಾವಿರಹಗುರುಣಾ (೨) ಸ್ವಾಧಿಕಾರಾತ್ಪಯತ್ತ (೩) ಶಾಪೇ ನಾಸ್ತ೦ಗಮಿತಮಹಿಮಾ..... ...... ಕತ್:-ಯಾವನೋ ಹೆಸರು ಕುಲ ಶೀಲ ಗೋತ್ರ ವಯೋರೂಪ ಪದವಿ ವಿಹೀನನಾದ ಅನಾಮಧೇಯನಾದ ಒಬ್ಬ ಯಕ್ಷ. ಕಾಂತಾವಿರಹಗುರುಣಾ:-( ಅವನಾದರೋ ಪ್ರಿಯತಮೆಯ ಅಗಲುವಿಕೆ ಯಿಂದ ಅನುಭವಿಸಲಶಕ್ಯವಾದ ವಿರಹದುಃಖದಿಂದ ಮಾನನಾಗಿರು ವವನು. ಸ್ವಾಧಿಕಾರಾತ್ಮ ಮತ್ತ:-ತನ್ನ ಕೆಲಸದಲ್ಲಿ ಅಜಾಗರೂಕತೆಯಿಂದ ಮೈಮರೆತಿ ರುವವನು. ಶಾಪೇನಾಸಂಗಮಿತಮಹಿಮಾ:-ಕುಬೇರನಶಾಪದಿಂದ ಹೋಗಲಾಡಿಸ ಲ್ಪಟ್ಟ ಮಹಿಮೆಯುಳ್ಳವನು, ಇಂತಹನಾಯಕನನ್ನು ಆರಿಸಿಕೊಂಡಿರು ವನು. ಹಂಸಸಂದೇಶಕಾರನು:- ವಂಶೇಜಾತಸ್ಸವಿತುರನಘ(0)ಮಾನರ್ಯಮಾನುಷತ್ವಂ ದೇವ(೨)ತೀರ್ಮಾ (೩)ಜನಕತನಯಾನ್ವೇಷಣೇಚಾಗರೂಕಃ (೪) || ವಂಶಜಾತಸ್ಸವಿತುರನ :-ಅತ್ಯಂತಪರಿಶುದ್ಧವಾದ ಸೂರಿಕುಲದಲ್ಲಿ ಹುಟ್ಟಿದವನು. ದೇವಃ:-ಪರಮಪುರುಷನಾದ ಶ್ರೀರಾಮನು, ಮಾನರ್ಯಮಾನುಷತ್ವಂ:--- ಲೋಕೋದ್ಧಾರಕ್ಕಾಗಿ ಮಾನವಲೀಲೆಯನ್ನು ಕೈಗೊಂಡವನು. ಶ್ರೀರ್ಮಾ:- ಸಕಲಗುಣಸಂಪದಸಮನ್ವಿತನು. ಜನಕತನಯಾನ್ವೇಷಣೆ ಜಾಗರೂಕಃ:-ಸೀತೆಯನ್ನು ಹುಡುಕುವುದರಲ್ಲಿ ಕೊಂಚವೂ ಅಲಸಿಕೆಯಿಲ್ಲದೆ ಯಾವಾಗಲೂ ಜಾಗರೂಕನಾಗಿರುವವನು. ಇಂತಹ ನಾಯಕನನ್ನು ತನ್ನ ಕಾವ್ಯಕ್ಕೆ ಆರಿಸಿಕೊಂಡಿರುವನು, ಮೇಘಸಂದೇಶಕಾರನ ನಾಯಕನು ಲಕ್ಷಣಶಾಸ್ವಾನುಸಾರ “ ಧೀರಲಲಿತ” ನೆನಿಸಿಕೊಳ್ಳುವನು, ಹಸ