ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Ms ಸಂಸ್ಕೃತಕವಿಚರಿತೆ ಎಂಬಿವೇ ಮೊದಲಾದವುಗಳನ್ನು ಹೇಳುವುದರಿಂದ ವಿಷಯೋದ್ದೀಪನ ಮಾಡಿ ರುವನಾದರೂ ನಾಯಿಕಾ ನಾಯಕರ ಪ್ರಣಯ ಸಂಭಾವ್ಯ ರೀತಿಯನ್ನನುಸರಿಸಿ ವಿಷಯ ಚಾಂಚಲ್ಯಕ್ಕೆಡೆಗೊಡದೆ ಅಸೀಮಚತುರತೆಯಿಂದ ಶೃಂಗಾರರಸಪೊಷಣೆ ಯನ್ನು ಮಾಡಿ ಇಂತಹ ಅಮೋಘ ಕಾವ್ಯವನ್ನು ರಚಿಸಿರುವನಾದುದರಿಂದಲೇ ಅವನ ಕಾವ್ಯವು ಲೋಕಾದರ್ಶಕವಾಗಿ ಈಹೊತ್ತಿಗೂ ರಸಿಕರುತಲೆದೂಗುವಂತೆ ಬೆಳಗುತ್ತಿದೆ' ಹಾಗಲ್ಲದಿದ್ದರೆ ವಿಷಯ ಸುಖ ಅಥವಾ ಪಶುವೃತ್ತಿಯೇ ಪ್ರಧಾನವಾಗಿ ಹೇಳುವುವಾದ ಇತರ ಕುಲ್ಲಕಗ್ರಂಥಗಳಂತೆ ಕಾಲಧರ್ಮದಲ್ಲಿ ಲಯವಾಗಿಹೋಗುತ್ತಿದ್ದಿತು. ಅಲ್ಲದೆ ಮೇಘಸಂದೇಶಕಾರನ ಕಾಲಕ್ಕೆ ಸಮಾಜವು ವಿಷಯ ಲೋಲುಪತೆಯಲ್ಲಿದ್ದು ದ ಗಿಯೂ, ಇಂತಹಸರಳವಿಚಾರಗಳೇ ಜೀವಿತದಧೇಯವಾಗಿದ್ದಿತಾಗಿ ಭಾಸವಾಗ ಇದೆ. ಹಂಸಂದೇಶದಲ್ಲಿ ವರ್ಣನಾದಿಗಳು ಇಲ್ಲದೆ ಇಲ್ಲಿ ಎಲ್ಲಿಯೋಸಮಯಕ್ಕೆ ತಕ್ಕಂತೆ, ಚಂಚಲ ಮನಸ್ಸು ಉದ್ವಿಗ್ನವಾಗದಂತೆ, ಕೆಲವು ಮಾತ್ರವೇ (ಸೊಕೊ ನಗ್ನ ಸ್ಟುರಿತಪುಳಿನಾಂತ್ವನಿವಾಸೇಚ್ಛಯವ ” ಎಂಬ ಇಂತಹವುಗಳು ಅಲ್ಲಲ್ಲಿ ದೊರಕಬಹುದು. ಇವುಗಳಿಂದ ಕಾವ್ಯಸೌಂದರಕ್ಕೆ ಮೆರಗುಕೊಟ್ಟಂತಾಗಿರುವುದ ಲ್ಲದೆ ಚೇತನವನ್ನು ವಿಷಯಾವಾಸನೆಗೆ ಎಳೆಯುವುವಾಗಿಲ್ಲ. ಹೀಗಾಗಿ ವೆಂಕಟನಾಥನು ಹೇಳುವುದಕ್ಕೆ ಬೇಕಾದವಿಷಯಗಳನ್ನು ರಾಮಾಯಣದಿಂದ ತೆಗೆದುಕೊಂಡು ಮಾದರಿ ಗಾಗಿ ಮೇಘ ದೂತವನ್ನಿಟ್ಟುಕೊಂಡು ಬರೆದಿರುವುದು ನೈಜವಾಗಿದೆ. ಮೇಘ ಸಂದೇಶಕಾರನು ತನ್ನ ಕಾವ್ಯಕ್ಕೆ ಸೊಗಯಿಸುವ ವರ್ಷತರ್ುವನ್ನು ಕುರಿತು ಹೇಳಿರು ವನು. ವೆಂಕಟನಾಥನು ತನ್ನ ಕಾವ್ಯಕ್ಕೆ ಅನುಗುಣವಾದ ಶರದೃತುವನ್ನು ಕೊಂ ಡಾಡಿರುವನು. ಶ್ರೀರಾಮನು ಶರದೃತುವು ಪ್ರಾರಂಭವಾದುದನ್ನು ನೋಡಿ ಯುದ್ದ ಕ್ಕೋಸ್ಕರ ಸೈನ್ಯದೊಡನೆ ಹೊರಟುದಾಗಿಹೇಳಿದೆ. ಏಕೆಂದರೆ ದಂಡಯಾತ್ರೆಗೆ ಶರದೃತುವು ಅನುಕೂಲಸಮಯ, ಅಲ್ಲದೆ ಈ ಋತುವಿನಲ್ಲಿಯೇ ಹಂಸಗಳು ಹಿಮಾಲಯದೊಳಗಿರುವ ಮಾನಸರೋವರದಿಂದ ಹೊರಟು ದಕ್ಷಿಣಕ್ಕೆ ಬರುವುದಾ ಗಿಯೂ ಹೇಳಿದೆ ಆಂಜನೇಯನು ಅಶೋಕವನದಲ್ಲಿರುವ ವಿರಹಕ್ಷಾಂತಳಾದ ಸೀತೆಗೆ ರಾಮ ಸಂದೇಶವನ್ನು ತಿಳಿಸಿ ಅವಳಿಂದ ಕೊಡಲ್ಪಟ್ಟ ಚೂಡಾಮಣಿಯನ್ನು ತೆಗೆದುಕೊಂಡು ಬಂದು ಮಲಯಪರ್ವತಕ್ಕೆ ಹಿಂತಿರುಗಿ ಶ್ರೀರಾಮನಿಗೆ ಚೂಡಾಮಣಿಯನ್ನು ಕೊಟ್ಟು ಈ ಹೊತ್ತಿನಿಂದ ಒಂದು ತಿಂಗಳೊಳಗಾಗಿ ಬಂದು ತನ್ನನ್ನು ಕರೆದು ಕೊಂಡು ಹೋಗದಿದ್ದರೆ, ಉಳಿಯೆನೆಂಬರ್ಥವುಳ್ಳ ಧಾರಖುಷ್ಯಾ ವಿಮಾಸಂತು ಜೀವಿಂಶತ್ರುಸೂದನ ಮಾಸ'ದೂರ್ಧ೦ನಶೀ ವಿಷ್ಯ ತಯಾಹೀನಾನ ಪಾತ್ಮಜ ||