ಶತ). ವೆಂಕಟನಾಥ - ಅಹಹ! ಇದೋ! ಸುಂದರಿಯರ ಕಣ್ಣುಗಳು ಆದೀರ್ಘವಾಗಿ ಕಿವಿಯ ವರೆಗೆ ವ್ಯಾಪಿಸಿ ಕಾಂತಿಯಲ್ಲಿ ನೈದಿಲೆಯನ್ನು ಮೀರಿಸಿದೆ. ಅವರ ಅವಯವಗ ಳಾದರೆ ಮೂಾನಕೇತನನಿಂದ ಉಪದೇಶಿತವಾದ ಭಾವಗಳಿಂದ ಕೂಡಿ ರಮ್ಯವಾ ಗಿವೆ ಅವರ ಯಾವನವು ಪ್ರಶಂಸಾಯೋಗ್ಯವಾದವುಗಳಾಗಿ ಲೋಕವನ್ನು ಜೈಸಲು ಆತುರಗೊಳ್ಳುವದಾಗಿದೆ. ಅವರ ವಯೊಧರ್ಮವದಂತಿರಲಿ! ಅವರ ವಿಲಾಸಗ ಳನ್ನು ನೋಡು! ಪುರುಷಾರ್ಥ ಮುಖ್ಯಸೂಚಿತವಾದ ಹುಬ್ಬುಗಳು, ಅರ್ಚಿರಾದಿ ಗತಿಯನ್ನು ಕೂಡಾ ಜರೆಯುವ ವೈಯ್ಯಾರದ ನಡಿಗೆಗಳು, ಮದ ಮದಿಸಿದ ಚಂಚಲತಾರಕೆಗಳುಳ್ಳ ಕಣ್ಣುಗಳು ಮನ್ಮಥಾದೈತೋಪನಿಷತ್ತು ಅಥವಾ ಕಾಮಾ ಗಮ ರಹಸ್ಯವನ್ನು ವಿಶದೀಕರಿಸುವುವಾಗಿವೆ. ಕಾಷಾಯ ದಂಡಶರಣರಾದ ಕಲಿಯುಗದ ಸನ್ಯಾಸಿಗಳ ವಿಚಾರವಾಗಿ:- ಭಿಕ್ಷೇತಿಶಿಷ್ಯ ಜನರಕ್ಷಣ ದಕ್ಷಿಣೇತಿ ತುಟೀತಿ ಶಾಶ್ವತವಲೋಪರಿಕಲ್ಪನೇತಿ ಗ್ರಂಥೋಪಸಂಗ್ರಹಣವಲ್ಯ ಮಿತಿಬ್ರುವಾಣಾಃ ಸನ್ಯಾಸಿನೋಪಿದಧತೇ ಸತತಂಧನಾಯಾಂ || ೫-೨೭ ಎಂದು ಹೇಳಿರುವುದರಿಂದ ಆ ಕಾಲದಲ್ಲಿಯೂ ಶಿಷ್ಯಜನರ ಕ್ಷಣೆಗೆಂದೂ, ಮಠ ಗಳನ್ನು ಕಟ್ಟಿಸುವೆನೆಂದೂ, ಗ್ರಂಥೋಪಸಂಗ್ರಹಕ್ಕಾಗಿ ಧನಸಹಾಯವನ್ನೂ ಮಾಡಿ ರೆಂದೂ, ಧನಕ್ಕಾಗಿ ಬಾಯಿ ಬಾಯಿ ಬಿಡುವ ಸನ್ಯಾಸಿಗಳು ಇದ್ದು ರಾಗಿ ಬೋಧೆ ಯಾಗುತ್ತದೆ. ಡಂಭನ ಹೇಳಿಕೆಯು ಹೀಗಿರುವುದು:- ನಿರ್ಜಿತ್ಯಕೃತಿಮಂಡಲಂ ಭ್ರಗುಪತಿರ್ವಹಂ ಪ್ರದಾತುಂ ಪುನಃ - ಪ್ರಹ್ನಃ ಪ್ರಾರ್ಥಯತನ್ಯ ಷೇಧಿ ಚ ಮಯಾ ವಿಶ್ವಂ ತೃಣೀಕುರ್ವತಾ ಅಸಾಧೈಭವದೃಷ್ಟಿ ಸಂಭತಚಮತ್ಕಾರೆ ರಮ೯ಶಿ: ದತ್ತ ಧಿಕೃತವಾನಹಂ ಶಮಧನಃ ಸ್ವರ್ಗಾಪವರ್ಗಾವಪಿ || ೫ ೨ ಎಲೆ! ಕುಹನೆ! ನಾನು ಎಂತಹ ನಿಸ್ಸಹನೆಂಬುದನ್ನು ನೀನು ಬಲ್ಲೆ ಯಾ ನೋಡು! ಮಹಾಪರಾಕ್ರಮಿಯಾದ ಪರಶುರಾಮನು ಭೂಮಂಡಲವೆಲ್ಲವನ್ನೂ ಜಯಿಸಿ ನನಗೆ ಕೊಡುವುದಕ್ಕೆ ಎಷ್ಟೋ ವಿಧದಿಂದ ತಲೆವಾಗಿ ಪ್ರಾರ್ಥಿಸಿದರೂ ವಿಶ್ವವನ್ನೇ ತೃಣವಾಗಣಿಸಿರುವ ನಾನು ನಿರಾಕರಿಸಿಯೇ ಬಿಟ್ಟೆನು. ತಿಳಿಯಿತೆ! ಇದಲ್ಲದೆ ನನ್ನ ವೈಭವಾತಿಶಯಗಳನ್ನು ನೋಡಿ ಅಚ್ಚರಿಗೊಂಡ ದೇವತೆಗಳು ಸ್ವರ್ಗಾಪವರ್ಗಗಳನ್ನು ಕೂಡಾ ಕೊಡಲು ಬಂದರಾದರೂ ಶನಧನನಾದ ನಾನು ಅದನ್ನು ನಿರಾಕರಿಸಿದೆನು.
ಪುಟ:ಸಂಸ್ಕೃತ ಕವಿ ಚರಿತೆ ದ್ವಿತೀಯ ಸಂಪುಟ.djvu/೩೧೧
ಈ ಪುಟವನ್ನು ಪರಿಶೀಲಿಸಲಾಗಿಲ್ಲ.