ಈ ಪುಟವನ್ನು ಪ್ರಕಟಿಸಲಾಗಿದೆ
೨೯೪
ಸಂಸ್ಕೃತಕವಿಚರಿತೆ
[ಕ್ರಿ.ಸ್ತ

ಮನ್ಮಥನ ಹೇಳಿಕೆ-

ಇಕ್ಷುಃ ಪೇಶಲಖಾದೃಶಂ ಮಮಧನುಃ ಪುಷ್ಟಾಣ್ಯ ಮಿಾ ಸಾಯಕಾಃ
ತಂತ್ರೀ ಮಂಜುಲನಿಸ್ಟನಾ ಮಧುಕರ ಶುಭಾ ಶಿಂಜಿನೀ
ಭೀರುಃ ಸನ್ನ ಬಲಾಜನೋ ಮಮ ಬಲಂ ಕಥಂ ಪರಂ ಕಥ್ಯತೇ
ಸೋsಹಂ ನಿರ್ಜಿತಶೂಲಭ್ಯ ಕೃತಿಕಃ ಸಂಕಲ್ಪ ಸಿದ್ಯೋದಯ: ೪-೧

ಎಲೆ! ವಸಂತ! ಕೇಳು ನನ್ನ ಬಿಲ್ಲಾದರೋ ಸರಸರಸವಾದ ಮೃದುವಾದ ಇಕ್ಷುದಂಡವು. ನನ್ನ ಬಾಣಗಳೋ ಅತಿಕೋಮಲವಾದ ಪುಷ್ಟಂಗಳು, ಶಿಂಜಿನಿ ಯಾದರೋ ತಂತಿಯಂತೆ ಝೇಂಕರಿಸುವ ಭ್ರಮರಗಳು. ನನ್ನ ಸೈನ್ಯವಾದರೋ ಭೀರುಗಳಾದ ಅಬಲೆಯರು ಹೀಗೆ ಇದ್ದರೂ ಶೂಲಪಾಣಿಯೇ ಮೊದಲಾದವರನ್ನು ಜಯಿಸಿ ಸಂಕಲ್ಪ ಮಾತ್ರದಿಂದಲೇ ಸಿದ್ಧವಾದ ವಿಭವವುಳ್ಳವನಾಗಿರುವೆನು.

ಇತರ ಶ್ಲೋಕಗಳು:-

:ತರತುವಿವಿಯಾಬ್ಬಿ ಮಧಿರೋಹತುಶೈಲಂ

ಧಮತುಚಧಾತುವರ್ಗಮಧಿಗಚ ತುಶಸ್ತ್ರ ಮುಖಂ
ತದಿದವರುಂತುದಂಯದು ಬಹ್ನವಧಾಯಭಿಯಾ
ಧನಮದಮೇದುರಕ್ಷಿತಿ ಭದಣಚಂಕ್ರಮಣಂ || ೬-೩

ಹೆಚ್ಚಾಗಿ ಲಾಭದೊರಕುವುದೆಂದು ಸಮುದ್ರವನ್ನಾದರೂ ದಾಟಬಹುದು. ಧಾತುಗಳೆಲ್ಲವನ್ನೂ ಕರಗಿಸಿ ನೀರಾಗಿಸಬಹುದು, ಅತಿದುರ್ಗಮವಾದ ಬೆಟ್ಟವನ್ನಾ ದರೂ ಹತ್ತಬಹುದು, ಹಾಗಲ್ಲದಿದ್ದರೆ ರಣರಂಗದಲ್ಲಿ ಹೊಡೆದಾಡಬಹುದು. ಆದರೆ ಧನಮದಾಂಧತೆಯಿಂದ ಕೂಡಿ ಕೊಬ್ಬಿದ ರಾಜನಮನೆಯಲ್ಲಿ ಯಾವಕಾಲ ಹೈನುಬರುವುದೊ ಎಂದು ಪದೇಪದೇ ಚಿಂತಿಸುತ್ತಾ ಭೀತಿಯಿಂದಿರುವಿಕೆಯು ಮಾತ್ರ ಇವುಗಳೆಲ್ಲದಕ್ಕಿಂತಲೂ ಅತ್ಯಂತ ದುಃಖಕರವಾದುದು. ಅಯ್ಯೋ!

:ಪ್ರತ್ಯಂಗಕಂಶ ಪರಿಣರ್ತಿತ ಕಂಚುರ್ಕೇ

ಪರ್ಯಾಪ್ತ ರೂಢಪಲಿತೇ ಪರತಂತ್ರಪಿಂಡೇ
ಅಕ್ಷೀಣರಾಗಮುಜರಾಮರಜೀವಿತಾಶಂ
ಮಾಮೇನಹಂತ ! ಹಸತೀವನಮಾಂತರತ್ಮಾ || ೬.೪

ಇಗೋ! ಜರಾಪೀಡಿತನಾದ ನನಗೆ ವಯೋಧಿಕ್ಯದಿಂದ ಮೈಎಲ್ಲವೂ ನಡುಗುತಿರುವುದು. ನಾನು ತೊಟ್ಟಿರುವ ಕವಚವಾದರೋ ನಡುಗುತ್ತಿರುವ ಶರೀರದೊಂದಿಗೆ ತಾನೂ ನಡುಗುತ್ತಿರುವುದು. ಶರೀರದಲ್ಲಿರುವ ಕೂದಲುಗಳೆಲ್ಲವೂ ಬಿಳುಪಾಗಿ ಹೋಗಿರುವುವು. ಇಷ್ಟು ವಿಪನ್ನಾವಸ್ಥೆಯಲ್ಲಿರುವುದಾದರೂ ಪರ