494 ಸಂಸ್ಕೃತಕವಿಚರಿತ ಕಾಕತೀಯರೆಂದರೆ ಕಾಕತಿರ್ನಾಮರ್ದುರ್ಗಾಶಕ್ತಿ ಕಿಕಶಿಲಾನಗರೇಶ್ವರಾ ಸಾಂಕುಲದೇವತಾಸಾಶಕ್ತಿರ್ಭಜನೀಯಸ್ಕೃತಿ ಕಾಕತೀಯ” ಕಾಕತಿ ಎಂಬ ಬುರ್ಗಿಯನ್ನೇ ಕುಲದೇವತೆಯನ್ನಾಗಿ ಪೂಜಿಸುವವರೇ ಕಾಕತೀಯರು ಇವರಧ್ವಜ ದಲ್ಲಿ ವರಾಹದ ಗುರುತಿರುವುದಾಗಿ:- ಮಾಧಾನಾಚಲಮೂಲಮೇಚಕ ಶಿಲಾಸಂಘಟೈನಮಿತಾ ಕಾರಂಯತ್ತು ಹಿನದ್ಯುತ್‌ಸ್ಸುರತಿತತ್ಸಾರಂಗಮಾಚಕ್ಷತೆ ಮನೇನನ್ನಿಹವೀರ ರುದ್ರನೃಪತೇಃ ಕೀರಿಯಾನಿರ್ಜಿತ ಸ್ತನ್ನು ದ್ರಾಂಕ ವರಾಹಮಿಂದುಮುರಖಾಬಿಭ್ರತೃಮುಂಭತೇ* || ಎಂಬುದರಿಂದ ಗೊತ್ತಾಗುತ್ತದೆ.:- ಇವನು ಯಯಾತಿ ಚರಿತವೆಂಬ ಏಳು ಅಂಕಗಳುಳ್ಳನಾಟಕವನ್ನು ಬರೆದಿರು ವದಾಗಿಯೂ ಯಯಾತಿಶರ್ಮಿಷ್ಠೆಯರ ಪರಿಣಯ ವಿಚಾರವು ಹೇಳಿರುವುದಾಗಿ ಯಂ, ಕೃಷ್ಣಮಾಚಾರರವರ ಒಕ್ಕಣಿಕೆಯು ಇರುವುದು.$ ಆದರೆ ಗ್ರಂಥವು ಅನು ಪಲಬ್ದವು. ವಿ ದ್ಯಾ ನಾ ಥ ಇವನು ಬ್ರಾಹ್ಮಣನು, ಓರಂಗಲ್ಲಿ (warrangal) ನಲ್ಲಿ ಆಳಿದ ಪ್ರತಾಪ ರುದ್ರನ ಆಸ್ಥಾನಪಂಡಿತನು. ಇವನು ತನ್ನ ಆಶ್ರಯದಾತನ ಹೆಸರಿನಲ್ಲಿ ಅಲಂಕಾರ ಗ್ರಂಥವನ್ನು ಬರೆದು ಅದನ್ನು ಪ್ರತಾಪರುದ್ರೀಯವೆಂದೇ ಕರೆದಿರುವನು. ಈ ವಿಚಾರವು:- ಪ್ರತಾಪರುದ್ರದೇವಸ್ಯ ಗುಣಾನಾಶ್ರಿತ್ಯ ನಿರ್ಮಿತಃ ಅಲಂಕಾರಪ್ರಬಂಧೋsಯಂ ಸಂತಃ ಕರ್ಣೋತ್ಸವೋsಸ್ತು ನಃ || ೯ ಕಾಕತೀಯನರೇಂದ್ರಸ್ಯ ಯಶೋಭೂಷಯಿತುಂತಾ ವಿದ್ಯಾನಕಕತಶ್ಲೇಯಂ ಸ್ವಯಂಕೇನವಿಭೂಷ್ಯತೇ || ೧೦ || ಎಂದು ಹೇಳಿರುವ ಪ್ರತಾಪರುದ್ರೀಯ ಶ್ಲೋಕಗಳಿಂದ ವ್ಯಕ್ತವಾಗುತ್ತದೆ. ಇದಕ್ಕೆ ಪ್ರಸಿದ್ಧ ವ್ಯಾಖ್ಯಾನಕಾರನಾದ ಮಲ್ಲಿನಾಥನ ಮಗ ಕುಮಾರಸ್ವಾಮಿ ಕೃತ ರತ್ನಾ ಪಣವೆಂಬ ವ್ಯಾಖ್ಯಾನವಿರುವುದು. ಈ ಅಲಂಕಾರಗ್ರಂಥಕ್ಕೆ ಪ್ರತಾಪರುದ್ರ ಯಶೋಭೂಷಣವೆಂಬ ನಾಮಾಂತರವಿರುವುದಾಗಿ ಆಯಾ ಪ್ರಕರಣಾಂತ್ಯದಲ್ಲಿ + ಪ್ರತಾಪ ರುದ್ರೀಯ ಪುಟ ೭, F. N.
- ಪ್ರತಾಪರುದ್ರೀಯ P. 37
$ Classical Sanskrit Lateratuta P. 103.