ವಿದ್ಯಾಸಕ 6. (ಇತಿಶ್ರೀವಿದ್ಯಾನಾಥಕೃತಪ್ರತಾಪರುದ್ರಯಶೋಭೂಷಣಾಲಂಕಾರಶಾಸ್ತ್ರ' ಎಂದು ಹೇಳಿರುವುದರಿಂದ ಗೊತ್ತಾಗುತ್ತದೆ. ವಿದ್ಯಾನಾಥನವಿಚಾರವಾದ ಈ ಕಥೆ ಹೊಂದಿರುವುದು, ವಿದ್ಯಾನಾಥನು ಗರ್ಭಾಷ್ಟಮದಲ್ಲಿ ಉಪನೀತನಾಗಿ ಚಿಕ್ಕತನದಲ್ಲಿಯೇ ವೇದ ವಿದ್ಯೆಯನೋದಿ, ದುರ್ಯೊಗದಿಂದ ಕೊಂಚವಾಗಿದ್ದ ಪಿತರಾರ್ಜಿತವಿತ್ತಾಪಾರ ವೆಲ್ಲವೂ ದಾಯಾದಿಗಳಿಂದ ಅಪಹೃತವಾಗಲು ಬಹುಕಷ್ಟದಿಂದ ಜೀವನವನ್ನು ಸಾಗಿಸುತ್ತ ತನ್ನ ಹದಿನಾರನೆಯ ವಯಸ್ಸಿನಲ್ಲಿ ರಾಮಾಯಣಾದಿ ಸಂಸ್ಕೃತಗ್ರಂಥ ಗಳನ್ನೋದಿ, ಅದರಲ್ಲಿ ಹೇಳಿರುವ ಪ್ರಾಚೀನರಾಜರ ಜೀವನಚರಿತೆಯನ್ನು ಮನನ ಮಾಡುತ್ತ ತನ್ನ ನಾಲ್ವತ್ತನೆಯ ವಯಸ್ಸಿನಲ್ಲಿ ಸೃಷ್ಟಿ ಕ್ರಮವನ್ನು ಕುರಿತು ಉತ್ತಮ ಗ್ರಂಥವನ್ನು ಬರೆದು ಅದರಿಂದ ಕೊಂಚಮಟ್ಟಿಗೆ ದ್ರವ್ಯಸಹಾಯವಾದುದಾದರೂ ಮದುವೆಗೆ ನೆರದಿರುವ ತನ್ನೊಬ್ಬಳೇ ಮಗಳಿಗೆ ವಿವಾಹವನೆಸಗಲು ಉಪಪತ್ತಿ ಇಲ್ಲ ದುದಕ್ಕೆ ಪರಿತಪಿಸುತ್ತ, “ನಿರಾಶಯಾನಶೋಭಂತೇಪಂಡಿತಾವನಿತಾಲತಾ” ಎಂಬು ದನ್ನು ಜ್ಞಾಪಿಸಿಕೊಂಡು ಎಂತಾದರೂ ಯಾವುದಾದರೊಂದು ಕಾರಣದಿಂದ ರಾಜಾಶ್ರಯವನ್ನು ಸಂಪಾದಿಸಲುಜ್ಜುಗಿಸಿ ಒಂದಾನೊಂದು ದಿವಸ ಮಂತ್ರಿಯಬಳಿ ರಾಜಸಭೆಯಲ್ಲಿ ಕುಳಿತುಕೊಂಡಿರಲು ಏಲೇಶ್ವರಾಗ್ರಹಾರದಶಿವಯ್ಯನೆಂಬ ಕವಿ ಯೊಬ್ಬನು ರಾಜಸಮ್ಮುಖಕ್ಕೆ ಬಂದು ರಾಜವರ ! ಅಗ್ರಹಾರದವರ ದುಸ್ಥಿತಿಯ ನೇನೆಂದು ಹೇಳಲಿ: ನವಲಕೃಧನುರ್ಧರಾಧಿನಾಥ್ ಪೃಥಿವಿಂಶಾಸತಿವೀರಭದ್ರಭೂಪೇ ಅಭವತ್ಸರಮಾಗ್ರಹಾರಪಿ:ಡಾ ಎಂದು ಹೇಳಿದುದನ್ನು ಕೇಳಿ, ಅಹಹ ! ಎಂತಹ ಅಸಂಗತ ! ಹಾಗಾಗಲು ಕಾರಣವೇನು ? ಒಡನೆ ಬ್ರಾಹ್ಮಣರ ಭೂಮಿಕಾಣಿಗಳನ್ನು ಬಿಟ್ಟುಕೊಡತಕ್ಕು ದೆಂದು ಆಜ್ಞಾಪಿಸಿ ಕೋಪದಿಂದ ವಿದ್ಯಾನಾಥನಕಡೆ ನೋಡಲು ವಿದ್ಯಾನಾಥನು:- >, ಕುಚಕುಂಭೇಷು ಕುರಂಗಲೋಚನಾನಾಂ ಎಂದು ಶ್ಲೋಕಪೂರಿಯನ್ನು ಮಾಡಲು ರಾಜನು ಪಂಡಿತೋತ್ತಮ! ಕವಿ ಶಿವಯ್ಯನು ಹೇಳಿದುದೇನೆಂದು ಪುನಃ ಕೇಳಿದುದಕ್ಕೆ ವಿದ್ಯಾನಾಥನು:- ನವಲಕೃಧನುರ್ಧರಾಧಿನಾಥ್ ಪ್ರಥಿವಿಂಶಾಸತಿವೀರಭದ್ರಭೂಸ್ ಅಭವತ್ಸರಮಾಗ್ರಹಾರಪೀಡಾ ಕುಚಕುಂಭಮುಕುರಂಗಲೋಚನನಾಂ || (39)
ಪುಟ:ಸಂಸ್ಕೃತ ಕವಿ ಚರಿತೆ ದ್ವಿತೀಯ ಸಂಪುಟ.djvu/೩೨೩
ಈ ಪುಟವನ್ನು ಪರಿಶೀಲಿಸಲಾಗಿಲ್ಲ.