ವಿಶ್ವನಾಥ (0) ೩೦೯ ಕಾಲ-ಇವನು ಕ್ರಿ ಶ ೧೩೩೦ ರಲ್ಲಿದ್ದು ದಾಗಿ ವೆಂಕಟರಾಜರ ವಂಶಾವಳಿ ಚರಿತದಿಂದ ಗೊತ್ತಾಗುತ್ತದೆ. ಆದುದರಿಂದ ಇವನನ್ನು ಕ್ರಿ. ಶ. ೧೪ನೆಯ ಶತ ಮಾನದ ಪೂರ್ವಾರ್ಧದವನೆನಬೇಕಾಗುವುದು. ಗ್ರಂಥ:-'ಇವನು ರಸಾರ್ಣವಸುಧಾಕರ' ಎಂಬ ಅಲಂಕಾರ ಗ್ರಂಥವನ್ನು ಬರೆದಿರುವನು. ಇದರಲ್ಲಿ ನಾವ್ಯಾಲಂಕಾರದಲ್ಲಿನ ರಂಜಿಕೊಲ್ಲಾಸವೆಂದೂ, ರಸಿಕೊಲಾಸವೆಂದೂ, ಭಾವೋಲ್ಲಾ ಸವೆಂದೂ, ಮೂರುತೆರನಾಗಿರುವುವು. ಪ್ರತಿ ಉಲ್ಲಾಸದಕೊನೆಯಲ್ಲಿ ( ಇತಿ ಶ್ರೀಮದಾಂಧ ಮಂಡಲಾಧೀಶ್ವರ ಪ್ರತಿಗಂಡ ಭೈರವ ಶ್ರೀಯನ್ನ ಪೊತನರೇಂದ್ರನಂದನ ಭುಜಬಲಭೀಮ ಶ್ರೀಸಿಂಗಭೂಪಾಲರ ಚಿತ್ರಸಾರ್ಣವಸುಧಾಕರನಾಮಿ ನಾವ್ಯಾಲಂಕಾರೇ ..........ಎಂದಿದೆ. ಇದರಲ್ಲಿ ನಾಯಕ ನಾಯಿಕಾ ಲಕ್ಷಣಗಳನ್ನು ಹೇಳಿ ಅವರವರ ಭಾವನಿರೂಪಣೆಯನ್ನು ಮನಮುಟ್ಟುವಂತೆ ತೋರಿಸಿರುವನು. ಇದರಲ್ಲಿ ಹೇಳಿರುವ ಅನೇಕಶ್ಲೋಕಗಳು ದಶರೂಪಕ ಶ್ಲೋಕಗಳನ್ನು ಹೋಲುವುವು. ಇವನ ಶ್ಲೋಕಗಳನ್ನು ಮಹಾ ವ್ಯಾಖ್ಯಾನಕಾರನಾದ ಮಲ್ಲಿನಾಥನು ತನ್ನ ವ್ಯಾಖ್ಯಾನದಲ್ಲಿ ಉದಾಹರಿಸಿ ಕೊಂಡಿ ರುವನು. ಇದಲ್ಲದೆ - ಸಂಗೀತ ರತ್ನಾಕರ ವ್ಯಾಖ್ಯಾ ” ಎಂಬ ಬೇರೊಂದು ಗ್ರಂಥ ವನ್ನು ಇವನು ಬರೆದಿರುವುದಾಗಿ ತಿಳಿಯಬರುತ್ತದೆ. ಗ್ರಂಥವು ಉಪಲಬ್ದವಿಲ್ಲ. ವಿ ಕೃ ನಾ ಹ (೧) ಇವನು ಬ್ರಾಹ್ಮಣನು, ಎರಡನೆಯ ಪ್ರತಾಪರುದ್ರನ ಸಮಕಾಲಿ ನನು. ಇವನು 'ಸೌಗಂಧಿಕಾಹರಣ' ಎಂಬ ನಾಟಕವನ್ನು ಬರೆದಿರುವನು, ಇದು ಪ್ರೇಕ್ಷಣಿಕ ಜಾತಿಗೆ ಸೇರಿದುದು. ಈ ವಿಚಾರವು:- ಅದ್ಯಖಲುನಿಖಿಲಾಜಿಕ ಮೌಳಿಮಾಣಿಕ್ಯಮಂಜರಿ ಪುಂಜಕಿಂಜಿತ ಚರಣಾರವಿಂದೇನವೃಂದಾರಕನಗರಕಾಮಿನೀಮುಖಾದಿವಾಸಚತುರಯಶಃ ಕರ್ಪೂರಚಾಲೇನವೇಲಾವನಾವಲಿ ವಿಶ್ರಾಂತನಿಜಬಲತುರಂಗನಿರ್ಘೋ ಷಣದುರವಲಿಪ್ತ ದಮನವೀರಭದ್ರೇಣ ರಾಜ್ಞಾ ಪ್ರತಾಪರುದ್ರಣ ಸಂಭಾ ವಿತೃರಶೇಷವಿದ್ಯಾವಿಶೇಷಸಾರಸರ್ವಜ್ಞ ಭೌರೇಯಮತಿಭಿಃ ಸಭಾಸದ್ದಿ ರಾಹೂಯಸಬಹುಮಾನವಾದಿಷ್ಟೋತಿ || | ಎಂಬ ಸೂತ್ರಧಾರನ ಹೇಳಿಕೆಯಿಂದಲೂ, ಕವಿಯು ತನ್ನ ಸೋದರ ಮಾವ ನಾದ ಅಗಸ್ಯನೆಂಬವನ ಬಳಿಯಲ್ಲಿದ್ದು ವಿದ್ಯಾಭ್ಯಾಸವನ್ನು ಮಾಡಿದ ಹಾಗೆ:-
ಪುಟ:ಸಂಸ್ಕೃತ ಕವಿ ಚರಿತೆ ದ್ವಿತೀಯ ಸಂಪುಟ.djvu/೩೨೭
ಈ ಪುಟವನ್ನು ಪರಿಶೀಲಿಸಲಾಗಿಲ್ಲ.