೩೧o 'ಸಂಸ್ಕೃತಕವಿಚರಿತ [ಕಿಸ್ತ ವಾಚಸ್ತಸ್ಯ ಕವೇರುದಾರಮಧುರಾ ಇತ್ಯತ್ರ ಚಿತ್ರ ಕಿವು ಪ್ರಖ್ಯಾತಃ ಸಕಲಾಸುದಿಕ್ಕುಗುಣಿಸು ಶ್ರೇಯಾನಗ.ಸುಧೀ… ? ವೇಧಶ್ಚಂದ್ರಮುಖೀಕರಾಂಗುಲಿದಲಾಸಂಗಕ್ಕಣದಲ್ಲ ಕೀ ವಾ ಚೈಯುಕ್ತಿಸಹೋದರ್ಶಿತಸುಧಾಜಾ ಸ ಯಾತುಲಃ || ಎಂಬ ಶ್ಲೋಕದಿಂದ ತಿಳಿಯಲಾಗುತ್ತದೆ, ಪಾಂಡವರು ಅಜ್ಞಾತವಾಸಿಗಳಾಗಿರುವಾಗ ಒಬ್ಬಾನೊಬ್ಬ ಗಂಧರ್ವನು ತಂದುಕೊಟ್ಟ ಸೌಗಂಧಿಕನೆಂಬ ಹೂವನ್ನು ನೋಡಿ, ದೌಪದಿಯು ಅಂತಹ ಹೂ ಗಳನ್ನು ತರಿಸಿಕೊಡಬೇಕೆಂದು ಭೀಮನನ್ನು ಪ್ರಾರ್ಥಿಸುವಳು, ಭೀಮನು ಅಂತೆಯೇ ಆಗಲೆಂದು ಹೂವನ್ನರಸುತ್ತಾ ಶೈಲಾಂತರಾಳವನ್ನು ಹೊಕ್ಕು ನೋಡುತ್ತ ಗಂಧಮಾದನ ಪರ್ವತದ ಬಳಿಗೈದಿ, ಅಲ್ಲಿದ್ದ ಗಂಧಮಾದನಾದಿ ಕಪಿಸೈನ್ಯವನ್ನು ನೋಡಿ ಅತೀತಭುಜಬಲವುಳ್ಳ ಅ೦ಜನಾನಂದನನಿಗಾನಂದವಾಗುವ ಹಾಗೆ ಶ್ರೀ ರಾಮ ಕಥೆಯನ್ನು ಹೇಳಲು, ಮಾರುತಿಯು ಆನಂದಗೊಂಡು ಭೀಮನಬಳಿ ಸಾರ್ದು ಬಂದ ಹದನಮಂ ವಿಚಾರಿಸಿ ಹೂವಿರುವ ಸ್ಥಳವನ್ನು ಹೇಳಲು ಭೀಮನು ಹೊರಟು ಅಲ್ಲಿರ್ದ ಕುಬೇರನಕಡೆಯವರಾದ ತೊಟಗಾರರನ್ನು ಮರ್ದಿಸಿ, ಸಮಾಧಾನ ಮಾಡಲು ಬಂದ ಕುಬೇರನೊಡನೆ ಮಾತನಾಡುತ್ತಿರುವಷ್ಟರಲ್ಲಿ ಭೀಮನನ್ನು ಹುಡುಕುತ್ತ ಬರುತಲಿದ್ದ ದೌಪದಿ ಮತ್ತು ಯುಧಿಷ್ಠಿರಾದಿಗಳನ್ನು ಘಟೋತ್ಕಚನು ಇಲ್ಲಿಗೆ ಕರೆತರಲು ಅವರೆಲ್ಲರೂ ಭೀಮನೊಡಗೊಂಡು ಹರ್ಷಚಿತ್ತನಾದ ಕುಬೇ ರನಿಂದ ಬೇಕಾದಷ್ಟು ಹೂಗಳನ್ನು ಸ್ವೀಕರಿಸಿ ನಡೆತಂದರೆಂಬುದೇ ಕಥೆಯ ಸಾರಾಂಶ. ಈ ನಾಟಕದ ಶೈಲಿಯು ಪಾಂಚಾಲೀ ರೀತಿಯಲ್ಲಿರುವುದು. ಇದರಲ್ಲಿ ಭೀಮನಿಗೂ ಹನುಮನಿಗೂ ನಡೆದ ವಿಚಾರಗಳು ಚೆಲುವಾಗಿರುವುವು. ಭಾಷಣವು ವೀರರಸೋತ್ಸಾಹದಿಂದ ಕೂಡಿಕೊಂಡಿರುವುದು ಮಾದರಿಗಾಗಿ ಕೆಲವು ಶ್ಲೋಕಗಳನ್ನು ಬರೆಯುವೆವು. ಹನುಮ ಮತ್ತು ಭೀಮನ ಸಂವಾದವನ್ನು ಕೇಳಿ ಸಾಶಂಕರಾಗಿ ಹನುಮನು ರಾಮಾಯಣ ಕಾಲದವ ನೆಂದೂ, ಭೀಮನು ಮಹಾಭಾರತದ ಕಾಲದವನೆಂದೂ, ಇವೆರಡರ ಕಾಲಕ್ಕೆ ಬಹಳ ಅಂತರವಿರುವುದೆಂದೂ ತರ್ಕಿಸುವ ಪಾಠಕರು ಹನುಮನು ಚಿರಜೀವಿ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳುವರಾಗಬೇಕು. ಸರೋವರ ವರ್ಣನ:- ಏತಾಸ್ತಾ: ಕದಲೀವನಾಂತರಭುವೋ ನೀರಂಧ್ರನದ್ದ ದ್ರುಮ - ಬಾಯಾಂತಃ ಶಿಶಿರೀಭವಲಗುಹಾನಿದ್ರಾಣಸಿದ್ದಾಧಗಃ ಯತ್ರ ಕ್ರೀಡತಿ ಪಾಕಜರ್ಜರಪತತ್ಕಾಶ್ಮೀರಗುಚ್ಛಾವಲೀ ಪೀಡಾಮೈಡನಪಿಂಜರೀಕತನಿಜಕ್ಕೂಡಂಕುರಂಗೀಕುಲ್ಲಂ || ೯೯
ಪುಟ:ಸಂಸ್ಕೃತ ಕವಿ ಚರಿತೆ ದ್ವಿತೀಯ ಸಂಪುಟ.djvu/೩೨೮
ಈ ಪುಟವನ್ನು ಪರಿಶೀಲಿಸಲಾಗಿಲ್ಲ.