ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಕೆ) ಭಟ್ಟ ಮುರಾರಿ | ಭ ಟ್ಟ ಮು ರಾ ರಿ ಇವನು ಬ್ರಾಹ್ಮಣನು, ತಂತುಮತಿ ಮತ್ತು ವರ್ಧಮಾನಭಟ್ಟನ ಪುತ್ರನು. ವದ್ಧಲ್ಯ ಗೋತ್ರದವನು ಎಂಬುದು “ ಅವಳದ್ದಲ್ಯ ಗೋತ್ರಸಂಭವಸ್ಯ ಮಹಾ ಕವೇರ್ಭಟ್ಟ ವರ್ಧಮಾನ ತನುಜನ್ಮನಃ ತಂತುಮತೀನಂದನಸ್ಯ ಮುರಾರೇಃ .... ..... .....” ಎಂಬುದರಿಂದ ಗೊತ್ತಾಗುತ್ತದೆ. * ಇವನು ನರ್ಮದಾತೀರವಾಸಿ ಯಾಗಿರಬಹುದು. ನರ್ಮದಾ ನದಿಯ ತೀರದಲ್ಲಿ ಈಗಣ ಮಾಂಧಾತವೆಂದು ಪ್ರಸಿದ್ಧವಾಗಿರುವ ಮಾಹಿಷ್ಮತಿ ನಗರದ ಕಲಚೂರಿವಂಶದ ಅರಸರು ಈತನ ಆಶ್ರ ಯದಾತರೆಂದು ಹೇಳುತ್ತಾನೆಇವನು ದೇಶಾಟನವನ್ನು ಮಾಡಿ ವಿಶೇಷ ಪಾಂಡಿತ್ಯ ವನ್ನೂ ವಿಪುಳಧನವನ್ನೂ ಸಂಪಾದಿಸಿರಬಹುದಾಗಿ ತೋರುತ್ತದೆ. ತಾನು ಸಂಚರಿ ಸಿದ ದೇಶಗಳನ್ನು ಬಹುಮಟ್ಟಿಗೆ ವರ್ಣಿಸಿರುವದು ಅಲ್ಲಲ್ಲಿ ಕಂಡುಬರುತ್ತದೆ. ಇವ ನಲ್ಲಿ ಸ್ವತಂತ್ರ ಕವಿತಾ ಸಾಮರ್ಥ್ಯವೂ ಉದ್ದಾಮ ಪಾಂಡಿತ್ಯವೂ ಇದ್ದು ದಾದರೂ ಇವನ ಕವಿತೆಯು ಇತರರ ಕವಿತ್ವದಂತೆ ಇಲ್ಲದುದರಿಂದ ಮುರಾರೇಸ್ಮತೀಯಃ ಪಂಥಾಃ” ಎಂದು ಲೋಕವು ಕರೆದಿರಬೇಕಾಗಿ ತೋರುತ್ತದೆ. ಇವನು ತನ್ನ ಗ್ರಂಥ ದಲ್ಲಿ 'ಮಹಾಕವಿ'ಯೆಂದೂ (“ಬಾಲವಾಲ್ಮೀಕಿ” ಎಂಬ ಹೆಸರನ್ನು ಆರೋಪಿಸಿಕೊಂಡಿ ದವನಲ್ಲದೆ ' ಆಪಾತಾಳನಿಮಗೂ ಸೀವರತನುಃ ಜಾನಾತಿನಂಥಾಚಲಃ ” ಎಂಬ ಉಪಮೇಯಪ್ರಯೋಗದಿಂದ ವಿದ್ಯಾವಂತರ ನಾರ ಕೌಶಲ ವಿಚಾರವು ತನಗೆಮಾತ್ರ ಗೊತ್ತಿರುವುದು ಹೊರ್ತು ಇತರರಿಗೆ ತಿಳಿಯದೆಂದು ಅಭಿಮಾನ ಪುರಸ್ಸರವಾಗಿ ಒಕ್ಕಣಿಸಿಕೊಂಡಿರುವನು. ಮುರಾರಿಯ ವಿಚಾರವಾಗಿ, (೧) ದೇವೀ೦ ವಾಚಮುಪಾಸತೇಹಿ ಬಹವಸ್ತಾರಂತು ಸಾರಸ್ಕತಂ ಜಾನೀತೇ ನಿತರಾಮಸ್‌ ಗುರುಕುಲಕ್ಲಿಷ್ಟೋ ಮುರಾರಿಃ ಕವಿ? ಎಂದೂ (೨) “ಮುರರಿಪದಚಿಂತಾಚೇತ್ರ ಥಾಮಾಘಮತಿ೦ಕುರು?” ಎಂದೂ . (೩) ಮುರಾರಿಪದಚಿಂತಾಯಾಂ ಭವಭೂತೇಸ್ತುಕಾಕಥಾ ಮುರಾರಿ ಮುರರಿ' ಕೃತ್ಯ ಭವಭೂತಿಂಪರಿತ್ಯಜ || ಎಂಬ ಲೋಕ ಹೇಳಿಕೆಯು ಬಳಕೆಯಲ್ಲಿರುವುದು, ಕಾಲ :-ಇವನ ಕಾಲವನ್ನು ನಿರ್ಣಯಿಸಿ ಹೇಳಲಾಗದಿದ್ದರೂ ಮುರಾರಿಯು ಮಹಾಕವಿಭವಭೂತಿಯ ಉತ್ತರ ರಾಮಚರಿತದ ಶ್ಲೋಕಗಳನ್ನು ಹೇಳಿಕೊಂಡಿರು

  • ಅನರ್ಘರಾಘವ ಪ್ರಸ್ತಾವನೆ. ಪು. ೨.

+ A, B, Keith's The Sanskrit Drama P. 226, (3)