ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಸ್ಕೃತಕವಿಚರಿತೆ fಕ್ರಿಸ್ತ -- - - - - ವುದರಿಂದ ಭವಭೂತಿಗಿಂತ ಈಚಿನವನೂ ಕ್ರಿ. ಶ. ೯ನೆಯ ಶತಮಾನದ ಪೂರ್ವಾ ರ್ಧದವನಾದ ರತ್ನಾಕರನು ಮುರಾರಿಯನ್ನು ಅನುಸಂಧಿಸಿ ಹರವಿಜಯದಲ್ಲಿ ಹೇಳಿ ಕೊಂಡಿರುವುದರಿಂದ ರತು ಕರನಿಗೆ ಪ್ರಾಚೀನನೂ ಕ್ರಿ, ಶ. ೯ನೆಯ ಶತಮಾನದ ಆದಿಭಾಗದವನೆಂದೂ ಹೇಳುವುದಾದರೆ ನ್ಯೂನತೆಯಾಗದು. ಗ್ರಂಥ:-ಇವನು ಬರೆದುದಾದ “ ಅನರ್ಘರಾಘವ” ಎಂಬ ಏಳು ಅಂಕಗಳುಳ್ಳ ನಾಟಕವು ಮಾತ್ರ ಪ್ರಕೃತ ದೊರೆತಿರುವುದು. ಇದರಲ್ಲಿ ದಶರಥನು ವಿಶ್ವಾಮಿತ್ರನ ಯಜ್ಞರಕ್ಷಣಾರ್ಥವಾಗಿ ರಾಮಲಕ್ಷ್ಮಣರನ್ನು ಕಳುಹಿದುದನ್ನು ಮೊದಲುಮಾಡಿಕೊಂಡು ರಾವಣ ವಧೆಯನ್ನು ಮಾಡಿ ಅನಂತರ ಅಯೋಧ್ಯೆಗೆ ಹಿಂತಿರುಗಿ ಶ್ರೀರಾಮನು ಪಟ್ಟಾಭಿಷಿಕ್ತನಾದನೆಂಬವರೆಗಿನ ರಾಮಾಯಣ ಕಥೆ ಯನ್ನು ತೆಗೆದುಕೊಂಡು ವರ್ಣಿಸಿರುವನು. ನಾಟಕವು ಶೋಭಿಸಬೇಕಾದರೆ ಶೃಂಗಾರ ಮತ್ತು ವೀರರಸಗಳಿ೦ದ ಕೂಡಿರಬೇಕೆಂದೂ ಭೀಭತ್ವ ರೌದ್ರ ಭಯಾನ ಕಾದಿ ಇತರ ರಸಗಳು ಕಳೆಕಟ್ಟಲರಿಯನೆಂದೂ ರುಚಿಸದೆಂದೂ ಹೇಳಿರುವುದು ಹೊರ್ತು ಇವನು ಆರಿಸಿಕೊಂಡು ಹೇಳಿರುವ ಈ ನಾಟಕವು ಮಹಾಕವಿ ಭವಭೂತಿ ಗಿಂತಲೂ ಮುರಾರಿಯು ಉತ್ತಮಕವಿಯಲ್ಲದುದರಿಂದ ಫಲಕಾರಿಯಾಗಲಿಲ್ಲ. ವೆಂದು ನನಗೆನಿಸುತ್ತದೆ, ಮಹಾ ವೀರಚರಿತೆಯಲ್ಲಿರುವಂತೆಯೆ ಇದರಲ್ಲಿಯೂ ಕಥಾವಸ್ತುಗಳು ಕಾಣಬರುತ್ತವೆಯಾದುದರಿಂದ ಅವು ಮುರಾರಿಯಿಂದ ಆದರಿಸಲ್ಪ, ಟೈವುಗಳೆಂದು ಹೇಳಬಹುದಾಗಿದೆ. (0) ಕಥೆಯನ್ನು ಬರೆದು ಹೇಳುವುದರಲ್ಲಿ ಕಾಲವ್ಯತ್ಯಾಸವನ್ನು ತೋರಿಸದೆ ಹೇಳಿರುವನು. (೨) ನಾಟಕಪಕ್ರಮದಲ್ಲಿ ಉದ್ದೇಶಭಂಗವು ತೋರುತ್ತದೆ.. ಮಧ್ಯಾಹ್ನ ವರ್ಣನವನ್ನು ಮಾಡಿದಕೂಡಲೆ ರಾತ್ರಿಯವರ್ಣನೆ ಚಂದ್ರೋದಯ ವರ್ಣನೆಗಳು ಇರುತ್ತವೆ. (೩) ಶ್ರೀರಾಮ ಸಂಬಂಧದ ಕಥೆಯನ್ನು ಆರಿಸಿ ತೆಗೆದು ಬರೆದಿದ್ದರೂ ಇತರರಂತೆ ಉತ್ತಮವಾಗಿಲ್ಲ. (೪) ಇದರಲ್ಲಿನ ಪಾತ್ರಗಳು ಅಚ್ಚಿನ ಬೊಂಬೆಗಳಂತೆ ಕಾಣಬರುತ್ತವೆ. (೫) ಪಾತ್ರರಚನೆಯಲ್ಲಿ ವ್ಯಕ್ತಿತ್ವವು ಕಾಣ ಬರುವುದಿಲ್ಲ. ಇದರಲ್ಲಿ ಅತಿಶಯೋಕ್ತಿ ಉತ್ಸೆ ಕೈ ಇವು ಹೇರಳವಾಗಿವೆ. ಹೀಗೆ ಇರುವುದಾದರೂ ಶೈಲಿ ಮತ್ತು ಶಬ್ದರಚನೆಯಲ್ಲಿ ಅತ್ಯಂತ ಕೌಶಲವು ತೋರ್ಪಡುವು ದಾದರೂ ಸಂದರ್ಭಕ್ಕೆ ಮಾರಿ ಅರ್ಥವನ್ನುಂಟುಮಾಡುವುದಲ್ಲದೆ ರಚನಾಕ್ರಮ ದಲ್ಲಿಯೂ ವ್ಯಾಕರಣ ವಿಷಯಗಳಲ್ಲಿ ತನ್ನ ಪ್ರೌಢಿಮೆಯನ್ನೆಲ್ಲಾ ವೆಚ್ಚಮಾಡಿರು ವನು. ಇವನ ಗ್ರಂಥದ ವ್ಯಾಕರಣ ವಿಷಯಗಳನ್ನು ಅನೇಕ ವೈಯಾಕರಣರು ಉದಾಹರಿಸಿಕೊಂಡಿರುವರು, ವೃತ್ತಗಳು ಬಹಳ ದೊಡ್ಡವು. ಕೆಲವು ವರ್ಣನೆ ಗಳು ಬಹು ಚೆಲುವಾಗಿವೆ,