೩೧೨ ಸಂಸ್ಕೃತಕವಿಚರಿತ ಎಲೈ! ಹನುಮನೆ ! ಲೋಕದಲ್ಲಿ ಜನರಿಗೆ ಉಂಟಾಗುವ ಕಷ್ಟಗಳನ್ನು ಪರಿ ಹರಿಸಿ ಅವರಿಗೆ ಉಪಕಾರಮಾಡಬೇಕೆಂಬ ಉದ್ದೇಶದಿಂದ ನೀನು ಜನ್ಮವನ್ನೆತಿರುವೆ. ಎಲೈ! ವೀರ! ನಿನ್ನಿಂದ ಆ ನೀಚ ರಾಕ್ಷಸರನೇಕರು ಹತಗೊಳಿಸಲ್ಪಟ್ಟರು. ಇಂತಹ ಅತುಲ ಭುಜಬಲ ಪರಾಕ್ರಮಿಯಾದ ನಿನ್ನನ್ನು ಪಡೆದ ತಂದೆಯಾದ ವಾಯು ವನ್ನು ಸುಪುತ್ರವಂತರಲ್ಲಿ ಅಗ್ರಗಣ್ಯನೆಂದೆನಬೇಕಾಗುವುದು, ಭೀಮನು ಯಕ್ಷಭಟರನ್ನು ಕುರಿತು:- ಸಾಕಂ ಸ್ತ್ರೀಭಿರರಣ್ಯ ಸೀಮಿ ಮದಿರಂ ಪೀತಾ ಮದಾಂಧಸ್ಥಿತ ರ್ಯುಸ್ಮಾ: ಕೈವಿಲೋಕಿತಾ ರಣಭುವೋ ಧೀರೆಕಗವಾಕ್ರಮಃ ಶರಾಶ್ಚದಪಿ ಯಯಮಾದಶ ಇಮೇ ಶಸ್ತ್ರರಂ ದೋಷಂ ನಿಷ್ಕಾಣಾಯ ಭವಪಿ ಸ್ಥಿತವತೇ ಶೌರ್ಯಾಯದತ್ತಂಜಲಿಃ || ೧೫ ಅರಣ್ಯದಲ್ಲಿ ಸ್ತ್ರೀಯರೊಡನೆ ಕೂಡಿ ವಿಹರಿಸುತ್ತ ಸ್ವಚ್ಛಂದವೃತ್ತಿಯಿಂದ ಮದ್ಯಪಾನ ಮಾಡುತ್ತಿರುವ ನಿಮಿಗೆ ಯುದ್ಧರಂಗದಲ್ಲಿ ಪರಾಕ್ರಮಿಗಳ ಸಾಮ ರ್ಥ್ಯವು ಹೇಗೆತಾನೇ ತಿಳಿದೀತು! ನೀವು ಪರಾಕ್ರಮಿಗಳೇ ಆಗಿ ಭುಜಬಲವುಳ್ಳವ ರಾಗಿದ್ದರೆ ಈ ಶಸ್ತ್ರಂಗಳಿಂದೇನುಪಯೋಜನ! ವೃಥಾಜೀವಿಸುತ್ತಿರುವ ನಿಮ್ಮ ಶೌರಕ್ಕೆ ಜಲಾಂಜಲಿ ಛ! ತಿಳಿಯೆತೆ ! ಭಾ ಸ್ವರ ಇವನು ಬ್ರಾಹ್ಮಣನು, ಶ್ರೀವಿದ್ಯಾರಣ್ಯರ ಗೌರವಾರ್ಥ (homage)ವಾಗಿ ನೆರೆದ ವಿದ್ವನ್ಮಂಡಲಿಯ ಸಂತೋಷಾರ್ಥವಾಗಿ ಬರೆದುದಾಗಿ ಸೂತ್ರಧಾರನ ಹೇಳಿಕೆಯಿಂದ (ಅದ್ಯಖಾದಿಷ್ಟೊಸ್ಮಿವಿಮಲತರನಿಜಕೀರಿಕರ್ಪೂರಕರಂಡೀಕೃತ ನಿಖಿಲ ಬ್ರಹ್ಮಾಂಡೇನ ದಿಗಂತದಂತಾವಳ ಕುಂಭಮಂಡಲ ಮಂಡನಾಯಮಾನ ಪ್ರತಾಪಸಿಂಧೂರೇಣ ಸಕಲಕಲಾಕಲಾಸಕೋವಿದೇನ ವಿದ್ಯಾರಣ್ಯ ಚರಣಾರ ವಿಂದ ವಂದನಮಹೋತ್ಸವಮಿಳಿತೇನಾಮುನಾಸಾಮಾಜಿಕೇನ......ಎಂದು ಹೇಳಿ ರುವುದರಿಂದ ಇವನು ಕ್ರಿ. ಶ. ೧೪ನೆಯ ಶತಮಾನಕ್ಕೆ ಸೇರಿದವನೆಂದು ಹೇಳಿ ಬೇಕಾಗುವುದು, ಇವನು (ಉನ್ಮತ್ತರಾಘವ' ಎಂಬನಾಟಕವನ್ನು ಬರೆದಿರುವನು. ಇಮ ರೂಪಕಭೇದವಾದ 'ಪ್ರೇಕ್ಷಣಿಕ' ಜಾತಿಗೆಸೇರಿದುದು, ಸೀತಾವಿಯೋಗಸಂತಪ್ಪ ನಾದ ರಾಮನು ಸೀತೆಯನ್ನು ನೆನೆಸಿ ಮನಬಂದಂತೆ ಹಂಬಲಿಸಿ ಹುಡುಕಿಕೊಂಡು ತಿರುಗುತ್ತಿದ್ದ ನಾದುದರಿಂದ ಈ ಪ್ರೇಕ್ಷಣಿಕವನ್ನು ಉನ್ಮತ್ತರಾಘವ' ಎಂದೇ ಕರೆದಿರುವನು
ಪುಟ:ಸಂಸ್ಕೃತ ಕವಿ ಚರಿತೆ ದ್ವಿತೀಯ ಸಂಪುಟ.djvu/೩೩೦
ಈ ಪುಟವನ್ನು ಪರಿಶೀಲಿಸಲಾಗಿಲ್ಲ.