ಶಕ ಭಾಸ್ಕರ ೩೧೩ ವನಾಂತರದಲ್ಲಿ ಪುಷ್ಪಾವಚಯವನ್ನು ಮಾಡುತ್ತ ಅನೇಕಾಶ್ರಮ ನದಿನದಂ ಗಳನ್ನು ಕಳೆದು, ಪುಷ್ಪಾವಚಯಕ್ಕಾಗಿ ಅಗಾಶ್ರಮವನ್ನು ಹೊಂದಿ ಅದೃಶ್ಯಳಾಗಿ 'ಹರಿಣಿಯರೂಪವನ್ನು ಧರಿಸಿದ ಜಾನಕಿಯನ್ನು ಜ್ಞಾನದೃಷ್ಟಿಯಿಂದ ಅರಿತವನಾದಾ ಕುಂಭಸಂಭವನು ಶಾಪವಿಮುಕ್ತಳನ್ನಾಗಿಮಾಡಿ ಸೀತೆಯನ್ನು ಹುಡುಕಿಕೊಂಡು ತಿರುಗುತ್ತಿರುವ ಶ್ರೀರಾಮನಿಗೆ ತಂದೊಪ್ಪಿಸಿದನೆಂಬುದೇ ಕಥಾವಸ್ತು, ಶೈಲಿಯು ಸುಲಭವಾಗಿದ್ದು ಲಕ್ಷಣನೊಡನೆ ಸೀತೆಯನ್ನು ಹುಡುಕುತ್ತಿರುವ ರಾಮನ ದುಃಖೋದ್ಗಾರವು ವಾಚಕರನ್ನು ಕಣ್ಣೀರಿಡುವಂತೆ ಮಾಡುತ್ತದೆ. ಇದರಲ್ಲಿ ಕರುಣರಸವು ಮೂರ್ತಿಮತ್ತಾಗಿ ತೋರಿಸಲ್ಪಟ್ಟಿದೆ. ಗ್ರಂಥವು ಬಲ) ಚಿಕ್ಕದಾ ದರೂ ಗಂಭೀರಭಾವದಿಂದ ಕೂಡಿ ರಸಪೋಷಣೆಯು ಚೆಲುವಾಗಿದೆ, ಮಾದರಿ ಗಾಗಿ ಕೆಲವನ್ನು ಬರೆಯುವೆವು. ವಸಂತಸಮಯವರ್ಣನ:- ಮಾಕಂದಾಳಿಂಮಲಯಸವನಾಮಂದಮಾಂದೋಳಯಂತೇ ಮಜ್ಜ ತ್ಯಸಾ ಮಧುಕ ರಯವಾಮಂಜರೀಣಾಂಮರಂದೇ ಆಸೇವಂತೇ ಮುಕುಳನಿಕರಾನಾಸಮಂತಾದಶೋಕಾ ವಕ್ತುಂವತ್ತಾಃ ಪಿಕಯುವತಯಃ ಪಂಚಮಂಪ್ರಾರಭಂತೇ || ರಾಮನ ದುಃಖೋದ್ಗಾರವು ಹೀಗಿರುವುದು:- ಜೈಲು ಪಾರಾಗ್ನಿಕಣೋಪಮಾನಿ ಸೀತಾನದೃಷ್ಟೇತಿದುರಕ್ಷ ರಾಣಿ ಕರ್ಣಂಪ್ಪದಿಷ್ಟಾನಿಹಠಾದಮೂನಿ ಸರ್ವಾಂಗತಾಪಂಜನಯಂತಿಹಂತ || ಪಿರಹಂಮನಸೋಢುಮಕ್ಷಮತ್ವಂ ವನವೀ ಧೀಘ್ರವಿಮಾಮನುದ್ರು ತಾಸಿ ಅಕ್ಕ ತಶಗಸಮನಮದ್ಯಮುಕ್ತ: ವದಕುತ್ರಾಸಿಕುರಂಗಶಾ ಬನೇ ತೇ || ಪ್ರಾಣಪ್ರಿಯಾಂಪ್ರಾಪ್ತವತೀಂಕಠೋರಾಮಕೀರ್ತಿತವಾ೦ಪದವೀಮಕಾಂಡೇ ತ್ರೈಲೋಕ್ಯ ಲಾವಣ್ಯ ಲಲಾಮಭೂತಾಂಹಾ! ಜಾನಕೀಂಕುತ್ರವಿಲೋಕಯಮಿ|| ಎಂಬ ಈ ದುಃಖೋದ್ಧಾ ರಮೇಳನವು ಭವಭೂತಿಯ ಉತ್ತರಗಾಮಿಚರಿತ ವನ್ನು ಸ್ಮರಣೆಗೆ ತರುವುದಿಲ್ಲವೆ ? (40)
ಪುಟ:ಸಂಸ್ಕೃತ ಕವಿ ಚರಿತೆ ದ್ವಿತೀಯ ಸಂಪುಟ.djvu/೩೩೧
ಈ ಪುಟವನ್ನು ಪರಿಶೀಲಿಸಲಾಗಿಲ್ಲ.