ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೨೦ ಸಂಸ್ಕೃತಕವಿಚರಿತ [ಕಿಸ್ತ ಪ್ರತಿಶತಕಾಂತ್ಯದಲ್ಲಿ:- ( ಇತಿ ತಪಃ ಸಿದ್ದತರಖರತರಾಮ್ಯಾಯಸೋನವಂಶಾವತಂಸಮಾಲಕುಲ ತಿಲಕಸಂಘಪಾಲಶ್ರೀಮದ್ದೇಹಡಾತ್ಮಜವಿವಿಧಬಿರುದರಾಜೀವಿರಾಜಮಾನ ಶ್ರೀಧನರಾಜವಿರಚಿತೇ ಶತಕತ್ರಯೇ................ ” ಎಂದು ಹೇಳಿರು ವುದರಿಂದ ಇವನು ವಿಕ್ರಮ ಸಂ. ೧೪೯೦ ಕ್ರಿ. ಶ ೧೪೩೪ರಲ್ಲಿ ಈ ಶತಕತ್ರಯವನ್ನು ಬರೆದುದಾಗಿಯೂ, ಸೋನಕುಲ ಅಥವಾ ಶ್ರೀಮಾಲ ಕುಲದವನೆಂದೂ, ದೇಹ ಡನ ಮಗನೆಂದೂ ತಿಳಿಯಬರುತ್ತದೆ. ಧನದರಾಜವಿರಚಿತೇ ಎಂದು ಹೇಳಿರುವು ದರಿಂದ ರಾಜನಾಗಿರಬಹುದೇ ? ಎಂಬ ಶಂಕೆಯು ತಲೆದೋರುತ್ತದೆ, ಸಂದೇಹವು ಸರಿಯೆನ್ನುವುದಾದರೆ ಯಾವದೇಶಕ್ಕೆ ರಾಜನಾಗಿದ್ದನೆಂಬುದು ತಿಳಿಯದಾಗಿದೆ. ಗ್ರಂಥ:-ಇವನು ನೀತಿಧನದ, ಶೃಂಗಾರಧನದ, ವೈರಾಗ್ಯ ಧನದ ಎಂಬ ಶತಕತ್ರಯವನ್ನು ಬರೆದಿರುವನು. ಇದು ಭರಪರಿಯ ಶತಕತ್ರಯದಂತೆ ಲಲಿತ ವಾಗಿಲ್ಲ ಮತ್ತು ರೂಢಿಯಲ್ಲಿಲ್ಲ. ಕವಿಯು ಹೇಳುವ ಅಥವಾ ಮಾಡುವ ಪ್ರತಿ ಜ್ಞೆಯು ಗ್ರಂಥದ ಮೊದಲಿನಲ್ಲಾಗಲಿ, ಅಥವಾ ಕೊನೆಯಲ್ಲಾಗಲಿ ಇರುವುದು ರೂಢಿ. ಇದರಲ್ಲಿ ಪ್ರತಿಜ್ಞೆಯು ಎರಡನೆಯದಾದ ನೀತಿಧನದಶತಕದ ಕೊನೆ ಯಲ್ಲಿ ಹೇಳಿದೆ, ಪ್ರತಿಶತಕದಲ್ಲಿಯೂ ನೂರು ಶ್ಲೋಕಗಳಿಗಿಂತ ಹೆಚ್ಚಾಗಿವೆ. ಇದರ ಕೆಲವು ಶ್ಲೋಕಗಳು:- ಮಾ ಗಾಃ ಕಾಂತ ನಿಶಾಮುಖೇ ಪರಗೃಹಂ ಮ ಗಾ ತೋsಹರ್ಮುಖೇ ವೇಶ್ಯಾಸ್ಮಾಕಮಿದಂ ದ್ವಯಂ ವಿತನುತೇ ಚಾಯುಃ ಕೃತಿರ್ಯೋಷಿತಾಂ ಮಾಭೂತ್ಯಾಂಚನ ವಂಚಿತೇತಿ ರಮಣೀ ಮಾ ಭೂರಹೋ ಖಂಡಿತ ಮುಗ್ಗಾ ಭಾವನಪಾಚಕಾರ ರಮಣೀಂ ನಾರಯಂತೀ ಪತಿಂ || - ಶೃಂಧ, ಶ. (೭೯) ಪ್ರತಿದಿವಸವೂ ಪ್ರಾತಃಸಂಧ್ಯಾ ಕಾಲಗಳಲ್ಲಿ ಪರಸ್ತ್ರೀ ಗೃಹದಲ್ಲಿ ಅಲೆಯು ತಿರುವ ಪತಿಯನ್ನು ನೋಡಿ ಮುಗ್ಗಳಾದ (ವಿಚಕ್ಷಣಳಾದ) ಪತ್ನಿಯು ಎಲ್ಲೆ ! ಪತಿಯೆ! ನೀನು ಪರಸ್ತ್ರೀ ಗೃಹದಲ್ಲಿರುವುದಾದರೆ ಅದು ಸ್ತ್ರೀಯರಿಗೆ ಆಯುಃ ಕ್ಷೀಣವನ್ನುಂಟುಮಾಡುತ್ತದೆ, ನಿನಗೆ ಸರಗೃಹದಲ್ಲಿ ಯಾವಾಗಲೂ ಯಾವ ಯಾವ ಸುಖಗಳು ಉಂಟಾಗುವುವೋ ಅವುಗಳೆಲ್ಲವೂ ಇಲ್ಲಿಯೇ ಉಂಟಾಗುತ್ತದೆ. ಆದುದರಿಂದ ಎಲೆ ! ರಮಣ ! ನಾನು ಆಭರಣಾದ್ಯಲಂಕಾರ ಧನಗಳಿಂದ, ವಂಚಿ ತಳೂ, ಇತರರ ಅವಮಾನಕ್ಕೆ ಪಾತ್ರಳೂ ಆಗಬಾರದೆಂದು ನಿನಿಗೆ ಇಷ್ಟವಿರುವು ದಾದರೆ ಇತಃಪರ ಪರಸ್ತ್ರೀಯರ ಗೃಹಗಳಿಗೆ ಹೋಗದಿರು. (ಎಂದು ತನ್ನ ಮನೋಭಾವವನ್ನು ವ್ಯಕ್ತಪಡಿಸುತ್ತಾ ಪತಿಯು ಇತರರ ಮನೆಗೆ ಹೋಗುವುದನ್ನು ವಾರಣಮಾಡುತ್ತಿದ್ದಳು.)