ಶಕ] ಧನದ (ಧನದರಾಜ), ಪಟ್ಟು ಭಟ್ಟ, ಚಂದ್ರಚೂಡ ೩೨೩ ಈಗ ಕರ್ಮಚೋದನವನ್ನು ಮಾಡಿಕೊಂಡು ಮುಕ್ತಿ ಹೊಂದುವುದಕ್ಕೋಸ್ಕರ ಈ ತಾಪತ್ರಯ ದೂರವಾಗಿರುವ ಯಾವುದಾದರೊಂದು ಗುಹೆಯಲ್ಲಿ ವಾಸಮಾಡಬೇ ಕೆಂದು ಆಶಿಸುತ್ತೆನೆ (ಎಂದರೆ ತಪಸ್ಸಿಗಾಗಿ ವನಾಂತರವನ್ನು ಹೊಂದಲಾಶಿಸು ತೆನೆಂದು ಭಾವವು. ನಿರ್ವಣಂ ಗಂತುಕಾಮಸ್ವಮಸಿ ಯದಿ ತದಿನಿ ವಂಚ ಕರ್ಮಾಣ ದೂರಾ ದೇಕು ಅದೃಹ್ಮ ಚಿತ್ರ ಕುರುಸಪದಿ ಮಹಾಮೋಹ ಸಂದೋಹಹಾರಿ ಬೋಧೇ ಯಸ್ಯಾಸ್ಯ ಸಮ್ಮೋ ವಿಷಯವಿಷಧರೋನ್ನತಿ ಪಾಶ್ಚ೯೦ಕದಾಚಿ ನೈವಂ ನೈವ ಪ್ರಭಾವಂ ಪ್ರಕಟಯತಿ ನಿಜಂ ಸತಂ ದಷ್ಯ ತಂ ಚ||೮L ಎಲೈ ! ಮನುಷ್ಯನೆ! ನೀನು ಮೋಕ್ಷವನ್ನು ಹೊಂದಲಿಚ್ಚಿಸುವೆಯಾದರೆ, ನೀನು ಮಾಡುತ್ತಿರುವುದಾದ ಎಲ್ಲಾ ಕರ್ಮಗಳನ್ನೂ ದೂರಮಾಡಿ ಅಜ್ಞಾನನಾಶಕ ವಾದ ಬ್ರಹ್ಮ (ವಿದ್ಯ) ನಲ್ಲಿ ಮನಸ್ಸಿಡು, ಅದರಿಂದ ಸತ್ಕಾರ್ಯವಾಗಲಿ, ದುಷ್ಕಾ ರ್ಯವಾಗಲಿ ಯಾವುದೂ ನಿನ್ನ ಸವಿಾಪದಲ್ಲಿ ಸುಳಿಯದು. ಅದರಿಂದ ನೀನು ಮುಕ್ತಿಯನ್ನು ಹೊಂದಬಹುದು, ಪಟ್ಟು ಭಟ್ಟ ಇವನು ಮಚಲಿಪಟ್ಟಣದ ಬಳಿ ಇರುವ ಕಾಕಮ್ರಣಿ ಎಂಬ ಗ್ರಾಮದಲ್ಲಿ ಹುಟ್ಟಿದನು. ವಾಧೂಲ ಕುಲಾವತಂಸನು, ಇವನು ಪ್ರಸಂಗ ರತ್ನಾವಳಿ: ? ಎಂಬ ಗ್ರಂಥವನ್ನು ಶಾ. ಶ. ೧೩೩೮ ಅಥವಾ ಕ್ರಿ. ಶ. ೧೪೧೬ ರಲ್ಲಿ ಬರೆದನು. ಇದು ಹೆಸರಿಗೆ ತಕ್ಕಂತೆ ನೀತಿ, ಆಚಾರ, ವ್ಯವಹಾರ, ರಾಜನೀತಿಗಳಿಂದ ಕೂಡಿ ಸುಭಾಷಿತ ಗ್ರಂಥವೆಂದೆನಿಸಿಕೊಂಡಿರುವುದು. ಇದರ ೭೭ ನೆಯ ಅಧ್ಯಾಯದಲ್ಲಿ ವಿಕ್ರಮಾದಿತ್ಯನನ್ನು ಮೊದಲುಮಾಡಿಕೊಂಡು ಪೈತಾಪುರದ ಸಿಂಹಭೂಪತಿಯು ವರೆ ಗಿನ ರಾಜಕುಮಾರರ ಹೆಸರುಗಳು ಹೇಳಲ್ಪಟ್ಟಿರುವುವು. ಗಾಧೆಗಳು ಹೇರಳ ವಾಗಿವೆ. ಅಭಿಪ್ರಾಯವು ಸೂತ್ರದಂತೆ ಚಿಕ್ಕ ಚಿಕ್ಕವಾಗಿವೆ. ಇದರಲ್ಲಿ ಚಾರಿತ್ರಿಕ ವಿಷಯಗಳು ಯಾವುವೂ ಇರುವುದಿಲ್ಲ. ಚ ೦ – ಚೂಡ ಇವನು ಪುರುಷೋತ್ತಮ ಭಟ್ಟನ ಮಗನು, ಕ್ರಿ. ಶ. ೧೫ ನೆಯ ಶತಮಾನಾಂತ್ಯದಲ್ಲಿ ಕಾಶಿಯ ಬಳಿಯಲ್ಲಿದ್ದು ದಾಗಿ ತಿಳಿಯಬರುತ್ತದೆ. ಇವನು (ಕಾರ್ತಿವೀರವಿಜಯ' ಎಂಬ ೧೪ ಸರ್ಗಗಳುಳ್ಳ ಕಾವ್ಯವನ್ನು ಬರೆದಿರುವನು. ಇದರಲ್ಲಿ ಕಾರ್ತಿವೀರನ ಚರಿತವು ಹೇಳಲ್ಪಟ್ಟಿರುವುದು. ಇವನ ವರ್ಣನೆಯ ಮತ್ತು ಶೈಲಿಯೂ ಹರ್ಷನ ಚರಿತೆಯನ್ನು ಹೋಲುವುದು,
ಪುಟ:ಸಂಸ್ಕೃತ ಕವಿ ಚರಿತೆ ದ್ವಿತೀಯ ಸಂಪುಟ.djvu/೩೩೯
ಈ ಪುಟವನ್ನು ಪರಿಶೀಲಿಸಲಾಗಿಲ್ಲ.