೩೪ ಸಂಸ್ಕೃತಕವಿಚರಿತ ನೋಡಿ ಅದನ್ನು ಪರಿವರ್ತಿಸಲು ಕೈಕೊಂಡಿರಬೇಕು. ಎಂದರೆ ಕ್ರಿ. ಶ. ೧೫ನೆಯ ಶತಾಬ್ದದ ಉತ್ತರಾರ್ಧದಲ್ಲಿರಬೇಕು. (೪) ಶ್ರೀವ (ಧುರ ಎಂಬ ಹೆಸರಿನ ವಿಚಾರದಲ್ಲಿ ಅಕ್ಷರಸ್ಟಾಲಿತ್ಯವೇ ಹೊರ್ತು ಮತ್ತಾವುದೂ ಇರದು. ಇದು ಲೇಖಕರ ಪ್ರಮಾದ ಜನಿತವಿರಬಹುದು. ಕಥಾ ಕೌತುಕವು ೧೫ ಕೌತುಕಗಳಿಂದೊಡಗೂಡಿ, ಮೊದಲಿನ ೧೩ ಕೌತುಕಗಳಾಂತ್ಯದಲ್ಲಿ ಶಿವರನೆಂದಿದ್ದು, ಮಿಕ್ಕೆರಡರಲ್ಲಿ ಮಾತ್ರ ಶ್ರೀಧ (ವ) ರ ನೆಂದಿರುವುದು. ಶಿಧರನೇ ಆಗಿದ್ದರೆ ಉಳಿದ ೧೩ ಕೌತುಕಗಳಲ್ಲಿಯೂ ಹೀಗೆಯೇ ಬರೆದಿರಬೇಕಾಗಿದ್ದಿತು. ಹಾಗಿಲ್ಲದುದರಿಂದ ಅಕ್ಷರಸ್ಟಾಲಿತ್ಯವೆಂಬುದನ್ನು ಸಹಜರೀತಿಯೆಂದೊಪ್ಪ ಬೇಕು. ಉಳಿದ ಸಂದೇಹಗಳು ನಿರಾಧಾರವೆನ್ನ ಬೇಕಾಗುವುದು, ಕವಿಯನ್ನು ಕ್ರಿ. ಶ. ೧೫ನೆಯ ಶತಮಾನಾನಂತರದವನೆಂದು ಹೇಳುವುದು ಅಸಂಬದವಾಗಿ ತೋರುವುದ ರಿಂದಲೂ ಕವಿಯು ತನ್ನ ಕಾಲವನ್ನು ತಾನೇ ಸ್ಪಷ್ಟಪಡಿಸಿಕೊಂಡಿರುವುದರಿಂದಲೂ ಕ್ರಿ. ಶ. ೧೫ ನೆಯ ಶತಮಾನದ ಉತ್ತರಾರ್ಧದವನೆನ್ನುವುದರಲ್ಲಿ ಯಾವ ಅಭ್ಯಂತರವೂ ತೋರದು. (೧) ಗ್ರಂಥಗಳು:-ಮೂರನೆಯ ರಾಜತರಂಗಿಣೀ-ಇದರಲ್ಲಿ ಕಲ್ಲಣನ ರಾಜತರಂಗಿಣಿಯಂತೆ ವಿವಿಧರಾಜರ ಜೀವನಚರಿತೆಯು ಸಂಗ್ರಹಿಸಲ್ಪಟ್ಟಿರುವುದು. (೨) ಕಥಾಕೌತುಕ:-ಮೋಹ, ರೂಪ, ವಿರಹಸಮಾಗಮ, ಆನಂದಾದಿಗಳು ಪ್ರತಿಯೊಬ್ಬರೂ ತಲೆದೂಗುವಂತೆ, ಪ್ರಣಯವೆಂತಹುದೆಂಬುದು ಸ್ಪಷ್ಟವಾಗಿ ತಿಳಿ ಯುವಂತೆ, ವಿರಹದ ದುರ್ಧರ ಪ್ರಸಂಗವು ಕಣ್ಣೀರಿಡುವಂತೆ, ಅನಂತರೂಪವು ಉನ್ಮಾದಕರವೆಂಬಂತೆ, ಮೊಹವು ವ್ಯಾಮೋಹಗೊಳಿಸುವಂತೆ ಸಮಾಗಮವು ಆನಂದ ಪದವಾಗಿರುವಂತೆ, ಸುಲಭರೀತಿಯಲ್ಲಿ ವರ್ಣಿತವಾಗಿರುವುದು, ನೀತಿ, ಕೌಶಲ, ಪ್ರಣಯ ವ್ಯಾಪಾರಗಳು ಮೂರ್ತಿಮತ್ತಾಗಿರುವುವು. ಇವನೆ: ಯುಸೂಫ್ ಜುಲೇಖೆಯರ ಚರಿತವನ್ನು ಗಿಡ್ವಾಣಭಾಷೆಗೆ ಪರಿವರ್ತಿಸಿ ಪದ್ಯರೂಪವಾಗಿ ಬರೆದ ನೆಂಬುದಕ್ಕೆ:- ಮಲಾಚ್ಯಾಮೇನ ಯೇ ಸೋಹ ಜೋಲೇಖಾನಾಮವಿಶ್ರುತಃ || . ರಚಿತೋSಜ್ಯದ್ಭುತಃ ಪೂರ್ವಗ್ರಂಥೋದೇವಮುಖೋದ್ದತಃ || ೧-೩೯ ತಸ್ಮಿನ್ಮಯಾಪಂಡಿತಜೋನ ಕಖ್ಯ ನಾಗುರುಂಪಂಡಿತವರೇಣ | ಭೂಪಾಲಪುಷ್ಪ ಸುರಲೋಕವಾಸ್ಮಾ ರಂಭೋಧನಾಕಾಂಶ ಮನೋಹರೋಯಂ || ೧-೪೦ (ಆಫ್ರಿಕಾರಾಜನಾದ ತಾಯಮಸ್‌ನ ಮಗಳಾದ ಜುಲೇಖೆಯು ಯಾವ ನೋ ಓರ್ವ ಅಪರಿಚಿತ ಸುಂದರವ್ಯಕ್ತಿಯನ್ನು ಸ್ವಪ್ನದಲ್ಲಿ ನೋಡಿ ಅವನ ಸೌಂದ
ಪುಟ:ಸಂಸ್ಕೃತ ಕವಿ ಚರಿತೆ ದ್ವಿತೀಯ ಸಂಪುಟ.djvu/೩೫೦
ಈ ಪುಟವನ್ನು ಪರಿಶೀಲಿಸಲಾಗಿಲ್ಲ.