ಶe] ಶ್ರೀವರಪಂಡಿತ -- -- - ರಕ್ಕೆ ಲುಬ್ಧಳಾಗಿ ಅವನನ್ನೇ ನೋಡುತ್ತ ಅವನೇ ಸಾಕ್ಷಾತ್ತಾಗಿ ಬಂದಂತೆಯೂ, ಅವನು ಈಜಿಪ್ಟಿನ ವಜೀರನೆಂದೂ ಹೇಳಿದಂತೆ ಸುಖಾನುಭವವನ್ನು ಹೊಂದಿದಳು. ಹೀಗಿರುತ್ತಿರಲು ಫರೋಯರ ಅರಸನಾದ ಪಾತಿಫರನು ಜುಲೇಖೆಯ ರೂಪರೇಖಾ ವಿಲಾಸ ಚತುರತೆಯನ್ನು ಕೇಳಿ ಅವಳನ್ನು ಮದುವೆಯಾಗುವನು. ಆದರೆ ಜುಲೇ ಖೆಗೆ ತನ್ನ ಸ್ವಪ್ನದಲ್ಲಿ ಕಂಡ ಜೊಸೆಫನೇ ಇವನಾಗಿರಬೇಕೆಂದು ತಿಳಿದು ಯಾರ ಮೊಗವನ್ನೂ ನೋಡದಿದ್ದ ಜುಲೇಖೆಯು ಪಾತಿಫರನಿಗೆ ಹೆಂಡತಿಯಾದಳು ಕಾಲಕ್ರಮದಲ್ಲಿ ಜೋಸೆಫನು ಈಜಿಪ್ಟಿನಲ್ಲಿ ಗುಲಾಮನಾಗಿ ಮಾರಲ್ಪಟ್ಟು ಪಾತಿ ಫರನು ಅವನನ್ನು ಕೊಂಡು ಕೊಂಡನು. ಜುಲೇಖೆಯು ಅವನನ್ನು ಮೋಹಿಸಿ ತನ್ನ ಹಾವಭಾವವಿಲಾಸಚಾತುರದಿಂದ ವಶಪಡಿಸಿಕೊಳ್ಳಲೆತ್ನಿಸುತ್ತಿರುವುದನ್ನು ನೋಡಿ ಅವನನ್ನು ಕಣ್ಮರೆಯಾಗಿ ಸೆರೆಯಲ್ಲಿರಿಸಿದನು. ಕೆಲವು ಕಾಲದ ಅನಂತರ ಜೋಸೆಫನು ಹೇಗೋ ಕಾರಾಗೃಹಮುಕ್ತನಾಗಿ ಮುಖ್ಯಾಮಾತ್ಯ ಪದವಿಯನ್ನು ಹೊಂದಿದನು. ಕಾಲಾನಂತರದಲ್ಲಿ ಪಾತಿಫರನು ರಾಜ್ಯಭ್ರಷ್ಟನಾಗಿ ಅವಮಾನ ದಿಂದ ಪಾರ್ಥಿವಶರೀರವನ್ನು ನೀಗಿದನು. ಹೆಂಡತಿಯಾದ ಜುಲೇಖೆಯು ಗಂಡನ ಮರಣಾನಂತರ ಕಂಡುದುಃಖಿತಳಾಗಿ ದಾರಿದ್ರದೆಸೆಗೀಡಾಗಿ ಅತ್ತತ್ತು ಕಣ್ಣನ್ನು ಕಳೆದುಕೊಂಡಿರುವುದನ್ನು ನೋಡಿ ಜೋಸೆಫನು ಮನಮುರುಗಿ ಅವಳಿಗೆ ಪೂರ್ವ ದಂತೆ, ಕಡುಸೌಂದರವನ್ನೂ ಕಣ್ಣುಗಳನ್ನೂ ಕೊಟ್ಟು ಕಾಪಾಡಬೇಕಾಗಿ ದೇವರನ್ನು ಪ್ರಾರ್ಥಿಸಿದನು. ಭಗವಂತನು ಅ೦ತಾಗಲೆಂದು ಅನುಗ್ರಹಿಸಿದನು. ಈ ವೇಳೆಗೆ ದಾರಿ ದ್ರ ದದೆಸೆಯಿಂದ ಕಂಗಾಲಾಗಿರುವ ಜುಲೇಖೆಯು ಇಸ್ಲಾಂಮತವನ್ನು ಕೈಗೊಂಡಿ ದ್ದಳು. ಜೋಸೆಫನು ಶಾಸ್ತ್ರ ರೀತ್ಯಾ ಗೇಬ್ರಿಯಲನ ಅಪ್ಪಣೆಯಂತೆ ಅವಳನ್ನು ಮದುವೆಯಾಗಿ ೪೦ ವರ್ಷಗಳ ಕಾಲ ಅವಿಚ್ಛಿನ್ನವಾದ ಭೋಗಭಾಗ್ಯ ಪರಂಪರೆ ಗಳನ್ನನುಭವಿಸಿ ಮೃತನಾದನು ಜುಲೇಖೆಯೂ ಬಹುದಿವಸ ಈ ವಿಯೋಗ ದುಃಖವನ್ನನುಭವಿಸದೆ ಸ್ವಲ್ಪ ಕಾಲದಲ್ಲಿ ಈ ಜಡಕಳೇಬರದಿಂದ ಬೇರೆಯಾದಳು, ” ಇದೇ ಕಥಾನಾರಾಂಶ. ಯುಸೂಫ್ ಅಥವಾ ಜೋಸೆಫ ಮತ್ತು ಜುಲೇಖೆಯರ ಪ್ರಣಯ ಲೀಲಾ ವಿಚಾರವು ಕೌತುಕಕಥಾವಿಶಿಷ್ಟವಾಗಿರುವುದರಿಂದ ಕವಿಯು ಗ್ರಂಥಕ್ಕೆ (ಕಥಾಕೌತುಕ' ಎಂದು ಅನ್ವರ್ಥನಾಮವನ್ನು ಕೊಟ್ಟಿರುವನು. ಇದನ್ನು ರಾಲ್ಪ ಟಿ. ಹೆಚ್, ಗ್ರಿಫಿತ್‌ರವರು ಕ್ರಿ. ಶ. ೧೮೮೨ರಲ್ಲಿ ಆಂಗ್ಲ ಭಾಷೆಗೆ ಪರಿವರ್ತಿಸಿರುವರು. ಮೂಲಕಥಾಕಾರನಾದ ಜಾಮಿಯ ಜೀವನವನ್ನು ಹೇಳಿದ ಹೊರ್ತು ವಿಷಯವು ಪೂರ್ಣವಾಗದು. ಜಾಮಿಯು ಕ್ರಿ. ಶ. ೧೪೧೪ರಲ್ಲಿ ಖುರಾರ್ಸಾಪ್ರಾಂತ್ಯಕ್ಕೆ ಸೇರಿದ ಜಾಂ ಎಂಬ ಊರಿನಲ್ಲಿ ಜನ್ಮವೆತ್ತಿದನು. ಜಾಂ ಎಂಬೂರಿನಲ್ಲಿ ಹುಟ್ಟಿದನಾದುದರಿಂದ ಜಾಮಿ
ಪುಟ:ಸಂಸ್ಕೃತ ಕವಿ ಚರಿತೆ ದ್ವಿತೀಯ ಸಂಪುಟ.djvu/೩೫೧
ಈ ಪುಟವನ್ನು ಪರಿಶೀಲಿಸಲಾಗಿಲ್ಲ.