44L ಸಂಸ್ಕೃತಕವಿಚರಿತ fಕ್ರಿಸ ಎಂಬ ಹೆಸರಾಯಿತು. ಇವನ ಹೆಸರು ನೂರುರ್ದ್ದೀಅಬ್ದುರ್ರಹಿರ್ಮಾ, ಇವನಿಗೆ ೫ ವರ್ಷಗಳಾದನಂತರ ನೂರುರ್ದ್ದೀ ಎಂದು ನಾಮಕರಣವಾಗಿದ್ದು ಕಾಲಕ್ರಮದಲ್ಲಿ ಮಲಾನಾ ಎಂಬ ಆಚಾರಪದವಿಯು ದೊರೆತುದು, ಇವನ ವಿದ್ಯಾಭ್ಯಾಸವು ಹೀರಾತ್ ಮತ್ತು ಸಾಮರ್ಕಂಡ್‌ನಲ್ಲಿ ನಡೆಯಿತು. ಆ ಕಾಲದವಿದ್ಯಾಧಿಕರಲ್ಲಿ ಪ್ರತಿ ಭಾಸಂಪನ್ನನಾದನು. ಇವನ ವಿದ್ಯಾತಿಶಯಗಳು ಪರ್ಷಿಯಾದೇಶದಲ್ಲೆಲ್ಲೆಲ್ಲಿಯೂ ಹರಡಿದುದಲ್ಲದೆ ಬಹುದೂರದ ಇತರ ದೇಶಗಳಲ್ಲಿಯೂಹರಡಿ ತೈಮೂರಿನ ತೈಮೂರ ಲಂಗ್) ಚಿಕ್ಕಪ್ಪನಾದ ಸುಲ್ತಾ೯ ಅಬೂಸೈಯ್ಯದನು ಕ್ರಿ. ಶ. ೧೪೭೨ರಲ್ಲಿ ಹೀರಾತಿ ನಲ್ಲಿರುವ ತನ್ನ ಸಭೆಗೆ ಬರಮಾಡಿಕೊಂಡನು. ಜಾಮಿಯು ಮಕ್ಕಾ ಯಾತ್ರೆಯನ್ನು ಮಾಡಿ ಬಾಗ್ದಾದಿನಲ್ಲಿ ಕೆಲವುದಿವಸಗಳಿದ್ದು ಮಾರನೆಯವರ್ಷ ಹಿರಾತಿಗೆಬಂದು ಕ್ರಿ. ಶ. ೧೪೯೨ರಲ್ಲಿ ಪರಲೋಕವನ್ನೈದಿದನು. ೧೬ನೆಯ ಶತಮಾನ ಜ ಯ ದ ವ (೨) ಇವನು ವಿದರ್ಭದೇಶದವನು, ವಂಗದೇಶೀಯನೆಂದು ಕೆಲವರು ಹೇಳು ವರು, ಬ್ರಾಹ್ಮಣನು, ಕೌಂಡಿನ್ಯ ಗೋತ್ರದವನು. ಮಹಾದೇವ ಸುಮಿತ್ರೆ ಯರು ಈತನ ತಂದೆ ತಾಯಿಗಳು ಎಂಬದು:- ವಿಲಾಸೋಯಚಾಮಸವರಸನಿಷ್ಕ೦ದವರಃ ಕುರಂಗಾಕ್ಷಿಬಿಂಬಾಧರಮಧರಭಾವಂಗಮಯಂತಿ ಕವೀಂದ್ರ: ಕೌಂಡಿನ್ಯ ಸತವ ಜಯದೇವಶ್ರರ್ವಯೋ ರಯಾಸೀದಾತಿಥ್ಯ೦ನಕಿಮಿಹನುಹಾದೇವತನಯಃ || ಅಸಿಚ:- ಲಕ್ಷಣವಯಸ್ಕಾಸ್ಯ ಸುಮಿತ್ರಾ ಗರ್ಭಜನ್ಮನಃ || ಎಂಬ ಶ್ಲೋಕಗಳಿಂದ ಸ್ಪಷ್ಟವಾಗುತ್ತದೆ. ಈತನು ಕವಿತ್ವ, ಪ್ರಿಯನೆಂಬ ದನ್ನು:- ನಬ್ರಹ್ಮವಿದ್ಯಾನಚರಾಜ್ಯಲಕ್ಷ್ಮಿ ಸೃಥಾಯಧೇಯಂಕವಿಕವೀನಾಂ ಲೋಕೋತ್ತರೇಪುಂಸಿನಿವೇಶಮಾನಾ ಪುತ್ರೀವಹರ್ಷಂಹೃದಯೇಕರೋತಿ ||
ಪುಟ:ಸಂಸ್ಕೃತ ಕವಿ ಚರಿತೆ ದ್ವಿತೀಯ ಸಂಪುಟ.djvu/೩೫೨
ಈ ಪುಟವನ್ನು ಪರಿಶೀಲಿಸಲಾಗಿಲ್ಲ.