ಶಕ] ಅಪ್ಪಯ್ಯ ದೀಕ್ಷಿತ ೩೪೧ ಬರೆದಿರುವನು, ಅದರಲ್ಲಿ ದೀಕ್ಷಿತನ ಕಾಲವನ್ನು ಸೂಚಿಸುವುವಾದ ಎರಡು ಶ್ಲೋಕ ಗಳಿರುವುವು. ೧) ವೀಣಾತyಸಂಖ್ಯಾ (೪೬೫೪) ಲಸಿತಕಲಿಸಮಾಭಾಕೃಮಾತೀಚವರ್ಷ ಕನ್ಯಾ ಮಾಸೇಧಕೃಷ್ಣಾ ಪ್ರಥಮತಿಥಿಯುತೇsಶರಪೋವಾಲ್ಮೀ ಕನ್ಯಾಲಗೋsದ್ರಿಕನ್ಯಾ ಪತಿರಮಿತದಯಾಶೇವರ್ಧಿ ದಿಕೇಷು $ ೨) ಶ್ರೀದೇವ್ ಪ್ರಾಗ್ಯಭೋಕ್ತಂ ಸಮಜನಿ ಹಿ ಸಮಾಸೇsತ್ರಕಾಂಚೀನಗರಾ: ಮತ್ತೊಂದು ಶ್ಲೋಕದಲ್ಲಿ:- ಲಗೇ ರವೀಂದುಸುತಯೋರ್ಮಕರೇ ಚ ಮಾಂದ್ - ಮಾನೇ ಶಶಿಥ ವೃಷೇ ರವಿಜೇ ಚ ರಾಹೌ | ಚಾಪೇ ಗುರೌಕ್ಷಿತಿಸುತೇ ಮಿಥುನ ತುಲಾಯಾಂ - ಶುಕ್ರ ಶಿಖಿನ್ನಲಿಗಳೇ ಶುಭಲಗ್ನ ಏವಂ || ಎಂದು ಹೇಳಿ ರಾಶಿಕುಂಡಲಿಯನ್ನು ಕೊಟ್ಟಿರುವುದು.- ಮೊದಲನೆಯ ಶ್ಲೋಕದಂತೆ ಕಲಿ ೪೬೫೪ ಶಕ ೧೪೭೫ ವಿಕ್ರಮಶಕೆ ೧೬೧೦ ಕೊಲ್ಲಂ ೭೨೯ ಆಗುತ್ತದೆ. ಇದರ ಜತೆಗೆ ಕ್ರಿಸ್ತಶಕವನ್ನು ಸೇರಿಸಿದರೆ ಸುಮಾರು ೧೮ನೆಯ ಸೆಪ್ಟಂಬರು ೧೫೫೩ ಆಗುತ್ತದೆ. ಎರಡನೆಯ ಶ್ಲೋಕದಂತೆ ರಾಶಿಕುಂಡ ಲಿಯು ಹೀಗಿರುವುದು:- ಚಂದ್ರ ಶನಿ ಮತ್ತು ರಾಹು ಕುಜ ಗುರು ರಾಶಿ ಕುಂಡಲಿ ಮಾಂದ ಲಗ್ನ ಕೇತು | ರವಿ ಬುಧ ಕೆಲವುಕಡೆ ಕ್ರಿ. ಶ. ೧೫೫೦ ಎಂದೂ ಅದು ಕಲಿ ೪೬೫೪ಕ್ಕೆ ಸರಿಹೋಗುವು ದಾಗಿ ಹೇಳಿದೆ. (ಯಾದವಾಭ್ಯುದಯದ ಮುನ್ನುಡಿ ಪುಟ ೩೦) ಇದೇ ಗ್ರಂಥದ ಮತ್ತೊಂದೆಡೆ ಕ್ರಿ. ಶ. ೧೫೫೨ ಎಂದು ಹೇಳಿದೆ. $ ಇದು ದೀಕ್ಷಿತನನಿಜವಾದ ಕಾಲವಲ್ಲ, ಈ ಕಾಲವೂ ಮತ್ತು ರಾಶಿಕುಂಡಲಿಯೂ ಜನಜನಿತ ಕಥಾಧಾರಗಳಿಂದ ಸ್ಪುಟೀಕರಿಸಿ ಬರೆದುದಾಗಿ ನಮಗೆ ತೋರುತ್ತದೆ.
ಪುಟ:ಸಂಸ್ಕೃತ ಕವಿ ಚರಿತೆ ದ್ವಿತೀಯ ಸಂಪುಟ.djvu/೩೫೭
ಈ ಪುಟವನ್ನು ಪರಿಶೀಲಿಸಲಾಗಿಲ್ಲ.