ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೨ ಸಂಸ್ಕೃತಕವಿಚರಿತೆ [ಕ್ರಿಸ್ತ ದೀಕ್ಷಿತನಿಂದ ಬರೆಯಲ್ಪಟ್ಟು ದಾದ (ಆತ್ಮಾರ್ಪಣಸ್ತುತಿ”ಗೆ ಶಿವಾನಂದ ವಿರ ಚಿತ ವ್ಯಾಖ್ಯಾನದಲ್ಲಿಯೂ ಮೇಲಣ ಶ್ಲೋಕಗಳು ಕಂಡುಬರುತ್ತವೆ. ದೀಕ್ಷಿತನ “ಸಿದ್ಧಾಂತ ಲೇಶಸಂಗ್ರಹ'ಕ್ಕೆ ಮುನ್ನುಡಿಯನ್ನು ಬರೆದಿರುವ ಭಟ್ಟ ಶ್ರೀನಾರಾಯಣ ಶಾಸ್ತ್ರಿಗಳು ದೀಕ್ಷಿತನ ಕಾಲವನ್ನು ಕ್ರಿ. ಶ. ೧೫೮೭-೧೬೬೦ ಎಂದು ಹೇಳಿರುವರು. (ನೀಲಕಂಠವಿಜಯ” ಚ೦ಪೂ ಕಾರನಾದ ದೀಕ್ಷಿತ ನೀಲಕಂಠನು ಕ್ರಿ. ಶ. ೧೬೩೬ರಲ್ಲಿ ಗ್ರಂಥವನ್ನು ಬರೆದು ಮುಗಿಸಿದುದಾಗಿ ಹೇಳಿರುವನು, ಇವೆರಡನ್ನೂ ಹೆಗ್ಗುರುತಾಗಿಟ್ಟುಕೊಂಡು ಜನಜನಿತ ಕಥಾಧಾರಗಳನ್ನು ಬಿಡಲೊಪ್ಪದೆ ದೀಕ್ಷೆ ತನಕಾಲವು ಕ್ರಿ. ಶ ೧೫೬೪-೧೬೩೬ ಎಂದು ಕೆಲವರೂ, ಉಳಿದವರು ಕ್ರಿ. ಶ. ೧೫೫೦, ೧೬೨೩ ರವರೆಗೆಂದೂ ಹೇಳುವರು. ಶ್ರೀರಂಗನಿಂದ ಕೊಡಲ್ಪಟ್ಟುದಾದ ಅರಿವಿಲಿಮಂಗಳಂ ' ಶಾಸನಗಳ (Plates) ನ್ನು ಪ್ರಸಿದ್ಧಿಗೊಳಿಸಿದ ಸಂಪಾದಕರು ದೀಕ್ಷಿತನ ಕಾಲವು ಕ್ರಿ. ಶ. ೧೫೫೪-೧೬೨೭೬ ಎಂದು ಒಕ್ಕಣಿಸಿರುವರು.' ಕುವಲಯಾನಂದ”ಕ್ಕೆ ಕ್ರಿ. ಶ. ೧೮೯೨ ರಲ್ಲಿ ಮುನ್ನುಡಿಯನ್ನು ಬರೆದಿರುವ ಪಂಡಿತಹಾಲಾಸ್ಯ ಶಾಸ್ತ್ರಿಗಳು ದೀಕ್ಷಿತನ ಕಾಲವು ಕ್ರಿ. ಶ. ೧೫೫೨ ಎಂದು ಹೇಳಿ ಕೊಂಡಿರುವರು. ಹೇಗೂ ದೀಕ್ಷಿತನ ಕಾಲವು ಕ್ರಿ. ಶ. ೧೫೫೩ರ ಮೊದಲು ೧೬೨೬ ರ ವರೆಗೆಂದು ಹೇಳಿದಂತಾಗುತ್ತದೆ. ಆದರೆ ಇತ್ತೀಚಿನ ವಿಚಾರಶೂಧನದಿಂದ, ಚರಿತ್ರೆ ಶಾಸನ ಮೊದಲಾದ ಆಧಾರಗಳಿಂದ ದಿಕ್ಷಿತನಕಾಲವು ಕ್ರಿ. ಶ. ೧೫೨೦೧೫೯೩ರವರೆಗೆಂದು ಸ್ಪಷ್ಟಪಡುತ್ತದೆಯಾದರೂ ಅಚ್ಚಾಗಿರುವ ದೀಕ್ಷಿತನ ಗ್ರಂಥಗಳನೇಕಗಳಲ್ಲಿ ಕ್ರಿ. ಶ ೧೫೨೩-೧೬೨೬ ಎಂದು ಹೇಳಿರುವದು ಕಂಡು ಬರುತ್ತದೆ. ದಿಕ್ಷಿತನ ಕಾಲನಿರ್ಣಯಕ್ಕೆ ಬಹುದೂರ ಪರಿಶ್ರಮಿಸಬೇಕಾದುದಿಲ್ಲ. ತಾನು ಯಾವ ಯಾವ ರಾಜಾಶ್ರಯದಲ್ಲಿದ್ದ ನೋ ಆಯಾ ರಾಜರ ಹೆಸರನ್ನೂ ಅವರ ಆಶ್ರಯದಲ್ಲಿ ಬರೆದ ಗ್ರಂಥಗಳನ್ನೂ ದೀಕ್ಷಿತನೇ ಹೇಳಿ ಸ್ಪಷ್ಟ ಪಡಿಸಿರುವನು. ಈ ರಾಜರು ಯಾರು ಯಾರೆಂಬುದನ್ನು ತಿಳಿಯಹೇಳುವ ಮೊದಲು ಕ್ರಿ. ಶ. ೧೬ನೆಯ ಶತಮಾನದಲ್ಲಿ ದಕ್ಷಿಣ ಇಂಡಿಯಾದೇಶದ ಪರಿಸ್ಥಿತಿಯು ಹೇಗೆ ಇದ್ದಿತೆಂಬುದನ್ನು ಬರೆಯಬೇಕಾಗಿದೆ. ವಿಜಯನಗರದ ಸರ್ವಾಧಿಕಾರವು ತುಂಗಭದ್ರೆಯಿಂದ ತಾಮ್ರಪರ್ಣಿಯವರೆಗೆ ವಿಸ್ತರಿಸಿದ್ದು ದಲ್ಲದೆ ಜಿಂಜಿ, ನೆಲ್ಲೂರು, ಮೈಸೂರು, ತಂಜಾವೂರು ತಿರುವಾಂಕೂರು

  • Epigraphica Indica Vol 12