ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಸ್ಕೃತಕವಿಚರಿತೆ ಬರೆದನು. ಶಿವಾರ್ಕಮಣದೀಪಿಕಾ ಮೊದಲಾದ ಶಿವಾಚಾರ ಚರಿತ್ರೆಗಳಲ್ಲಿ ಚಿನ್ನ ಬೊಮ್ಮನ ಹೆಸರನ್ನು ಸ್ಪಷ್ಟವಾಗಿ ಹೇಳಿಕೊಂಡಿರುವನು ಶಿವಾಚಾರಚಂದ್ರಿಕೆಯು ಮುಖ್ಯವಾಗಿ ಚಿನ್ನ ಬೊಮ್ಮನನ್ನು ಶೈವಾರಾಧಕನನ್ನಾಗಿ ಮಾಡುವುದಕ್ಕಾಗಿ ಬರೆಯ ಲ್ಪಟ್ಟುದಾಗಿದೆ, ಶಿನಾರ್ಕಮಣಿದೀಪಿಕೆಯನ್ನು ಬರೆದು ಮುಗಿಸಿದ ಸಂತೋಷಕ್ಕಾಗಿ ಚಿನ್ನ ಬೊಮ್ಮನು ದೀಕ್ಷಿತನಿಗೆ ಕನಕಾಭಿಷೇಕವನ್ನು ಮಾಡಿದುದಾಗಿ ಹೇಳಿದೆ. ' ಇದು ಸುಮಾರು ಕ್ರಿ. ಶ. ೧೫೮೨ ರಲ್ಲಿ ನಡೆದಿರಬೇಕಾಗಿ ತೋರುತ್ತದೆ. ಈ ಕೆಳಗೆ ಹೇಳುವ ಪ್ರಮಾಣಗಳಿಂದ ಚಿನ್ನ ಬೊಮ್ಮನ ಬಳಿ ದೀಕ್ಷಿತನ ಸಂಬಂಧವು ಸ್ಪಷ್ಟಪಡುತ್ತದೆ (0) IC ಶಿವಾರ್ಕಮಣಿದೀಪಿಕಾವಸಾನಲಬ್ಧ ಕನಕಸ್ನಾನಃ ಪ್ರಶಂಸಿತಸ್ಸಮರ ಪುಂಗವಯನಾ ” ಯಥಾ:- ಹೇಮಾಭಿಷೇಕಸಮಯೇ ಪರಿತೋ ನಿಷಣ್ಣಾ ಸೌವರ್ಣಸಂಹತಿ ಮಿಷಾಚಿನ ಬೋಮ್ಮ ಭೂಪಃ | ಅಪ್ಪಯ್ಯ ದೀಕ್ಷಿತ ವಣ್ರನವದ್ಯ ವಿದ್ಯಾ ಕಲ್ಪದ್ರುಮಸ್ಯ ಕುರುತೇ ಕನಕಾಲವಾಲಂ | ಎಂದೂ, (೨) ನೀಲಕಂಠನ ನಳಚರಿತ' ನಾಟಕದಲ್ಲಿ: ನಾನಾದೇಶನರೇಂದ್ರಮಂಡಲಮಹಾಯಾತಿದೂರೀಭವ ತ್ಯಾ ದಾಚಿ ಪದಾರವಿಂದವಿನತೇ ರಪ್ಪಯ್ಯ ಯಜ್ಞಪ್ರಭೋ ಶಿವೋತ್ಕರ್ಷಪರಿಷ್ಕ ತ್ವರಹರಹಸ್ಯ ಸುಧಾಲಾಲಿತ್ಸೆ: ಫುಲ್ಲತ್ಕರ್ಣಪುಟಸ್ಯ ಬೋಮ್ಮನೃಪತೇಃ ಪುಣ್ಯಾನಿ ಗಣ್ಯಾ ನಿಕಿಂ || ಎಂದೂ, (೩) ಬೇರೊಬ್ಬನಿಂದ:- ಯೇನ ಚಿನ್ನ ಬೋ೬ ತಿಪವಲಭಿದಃ ಕೀರವ್ಯಾಹತಾSSಸೀತ್ || -ಕ್ರಿ. ಶ. ೧೫೮೨ರ ಅಡಿಯಾಪಲಂ ಶಾಸನ. ಎಂದೂ ಹೇಳಿರುವುದು ಕಂಡುಬರುತ್ತದೆ. ಈ ಅಡಿಯಾಪಲಂ ಶಾಸನದ ಮುಖ್ಯಾಭಿಪ್ರಾಯವು ಅಪ್ಪಯ್ಯ ದೀಕ್ಷಿತನು ಕ್ರಿ. ಶ. ೧೫೮೨ರಲ್ಲಿ ಸ್ವಗ್ರಾಮವಾದ ಅಡಿಯಾಗಲಂನಲ್ಲಿ ಕಾಲಕಂಠೇಶ್ವರನ ದೇವಾ ಲಯವನ್ನು ಕಟ್ಟಿಸಿದನೆಂದು ಹೇಳಿರುವದನ್ನು ನೋಡಿದರೆ, ದೀಕ್ಷಿತನು ಕನಕಾಭಿ ವೇಕಾನಂತರ ಈ ಸುವರ್ಣಗಳನ್ನು ತೆಗೆದುಕೊಂಡುಹೊಗಿ ಈ ದೇವಾಲಯವನ್ನು ಕಟ್ಟಿಸಿರಬೇಕಾಗಿ ಬೋಧೆಯಾಗುತ್ತದೆ. ಅಪ್ಪಯ್ಯ ದೀಕ್ಷಿತನ ಮೂರನೆಯ ಆಶ್ರಯದಾತನು ಪೆನಗೊಂಡೆಯ ವೇಂಕಟ ಪತಿ ದೇವರಾಯ. ಇವನು ಕ್ರಿ. ಶ. ೧೫೮೫ರಲ್ಲಿ ಸಿಂಹಾಸನಕ್ಕೆ ಬಂದನು.