ಇ೬೬ ಸಂಸ್ಕೃತಕವಿಚರಿತ ರಾ ಜ ನಾ ಹ ಇವನು ಅರುಣಗಿರಿನಾಥನ ಮಗನು, ಬ್ರಾಹ್ಮಣನು ಎಂಬದು ಹೊರ್ತು ಇತರ ವಿಚಾರಗಳು ತಿಳಿಯವು. ಕಾಲ:-ಇವನು ಕ್ರಿ. ಶ. ೧೫೩೦-೧೫೪೨ ರವರೆಗೆ ವಿಜಯನಗರದಲ್ಲಿ ಆಳಿದ ಅಚ್ಯುತರಾಯನ ಆಶ್ರಯದಲ್ಲಿದ್ದವನೆನ್ನಬಹುದಾದುದರಿಂದ ಇವನು ಕ್ರಿ. ಶ. ೧೬ನೆಯ ಶತಮಾನದವನು, ಗ್ರಂಥ:-ಇವನು ೧೨ ಸರ್ಗಗಳಲ್ಲಿ ಬರೆದಿರುವುದಾಗಿ ಹೇಳುವ (ಅಚ್ಯುತ ರಾಯಾಭ್ಯುದಯ' ಎಂಬ ಕಾವ್ಯದ ಆರು ಸರ್ಗಗಳು ಪ್ರಕೃತ ಅಚಾಗಿ ದೊರೆಯು ವುವು. ಗ್ರಂಥವು ಅಚ್ಯುತರಾಯನ ವಂಶಾವಳಿಯನ್ನು ಮೊದಲು ಮಾಡಿಕೊಂಡು ಅವನ ದಿಗ್ವಿಜಯವಿಚಾರಗಳನ್ನು ಹೇಳುವುದಾಗಿದೆ. ಅದು ಹೀಗಿರುವುದು:- ವಿಜಯನಗರವನ್ನಾಳಿದ ತುಳುವ ಅರಸರಲ್ಲಿ 'ತಿಮ್ಮ' ಎಂಬವನು ಮುಖ್ಯನು. ಇವನು 'ದೇವಕಿ' ಎಂಬವಳಲ್ಲಿ ಈಶ್ವರನೆಂಬ ಮಗನನ್ನು ಪಡೆದನು. ಈಶ್ವರನು ಕಾಲ ಕ್ರಮದಲ್ಲಿ ವಿವಾಹಿತನಾಗಿ ಬುಕ್ಕಮ್ಮ ಎಂಬವಳಲ್ಲಿ ನರಸಿಂಹ ಮತ್ತು ತಿಮ್ಮನೇಬ ರಾಜಕುಮಾರರನ್ನು ಪಡೆದನು. ಮೊದಲನೆಯವನಾದ ನರಸಿಂಹನು ಚಕ್ರವರ್ತಿ ಯೆನಿಸಿಕೊಂಡು ಮಾನವದುರ್ಗದ ಕೋಟೆಯನ್ನು ಹಿಡಿದು ಅಲ್ಲಿದ್ದ ನಿಜಾನು ನನ್ನು ಪರಾಜಿತನನ್ನಾಗಿ ಮಾಡಿ, ಶರಣುಬಂದ ಅವನಿಗೆ ಪುನಃ ಕೋಟೆಯನ್ನು ಬಿಟ್ಟು ಕೊಟ್ಟು ಶ್ರೀರಂಗಪಟ್ಟಣವನ್ನು ಜೈಸಿ ಮಾರವರನ್ನು ಸ್ವಾಧೀನಪಡಿಸಿಕೊಂಡು ಮಧುರೆಯ ಕೊನೇಟ ರಾಜನನ್ನು ನಿರ್ನಾಮಮಾಡಿ ಕೊನೆಗೆ ವಿಜಯನಗರವನ್ನು ತನ್ನ ರಾಜಧಾನಿಯಾಗಿ ಮಾಡಿಕೊಂಡನು. ಇವನಿಗೆ ಮೂವರು ರಾಣಿಯರು ಮೂವರು ರಾಣಿಯರಿಗೂ ಮೂರುಜನ ಮಕ್ಕಳು, ಕ್ರಮಶಃ ಈ ಮೂವರೂ ರಾಜ ರಾಗಿ ರಾಜ್ಯವಾಳಿದರು, ಇವರಲ್ಲಿ ಕೊನೆಯವನು. ಅಚ್ಯುತರಾಯ. 'ವರದಾಂಬಾ' ಎಂಬವಳೇ ಈತನ ಗೃಹಿಣಿ. ಅಚ್ಯುತರಾಯನು ರಾಜನಾಗಿ ತನ್ನ ಮಗನಾದ ಚಿನ್ನ ವೆಂಕಟಾದ್ರಿಗೆ ಯುವರಾಜ ಪದವಿಯನಿತ್ತನು. ಇವನ ವಂಶಾವಳಿಯನ್ನು ಹೀಗೆ ಹೇಳಬಹುದು:- ತಿಮ್ಮ + ದೇವಕಿ ಈಶ್ವರ + ಬುಕ್ಕಮ್ಮ ನರಸ ಅಥವಾ ನರಸಿಂಹ + ತಿಪ್ಪಾಂಬಾ, ನಾಗಾಂಬಾ, ಓಬಮಾಂಬಾ. (ಸುಮಾರು ಕ್ರಿ. ಶ. ೧೪೯೮ರಲ್ಲಿ ಸಿಂಹಾಸನವನ್ನು ತೆಗೆದುಕೊಂಡನು.) ತಿಪ್ಪಾಂಬುಗರ್ಭಸಂಭೂತ ನಾಗಾಂಬಗರ್ಭಸಂಭೂತ ಓಬಮಾಂಬುಗರ್ಭಸಂಭೂತ ವೀರನೃಸಿಂಹರಾಯ ಕೃಷ್ಣರಾಯ * ಅಚ್ಯುತರಾಯ + ವರದಾಂಬಾ (ಕ್ರಿ. ಶ. ೧೫೩೦-೧೫೪೨) ಚಿನ್ನವೆಂಕಟ (ವೆಂಕಟಾದಿ)
ಪುಟ:ಸಂಸ್ಕೃತ ಕವಿ ಚರಿತೆ ದ್ವಿತೀಯ ಸಂಪುಟ.djvu/೩೭೬
ಈ ಪುಟವನ್ನು ಪರಿಶೀಲಿಸಲಾಗಿಲ್ಲ.