ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಕ] bಜನಾಥ ೩೬೧ ಅಚ್ಯುತರಾಯನು ಸಕಲಸಾಮಂತ ಪರಿವೃತನಾಗಿ ಒಡೋಲಗವನ್ನು ಕೊಡುತ್ತಿರುವಾಗ ಮುಖ್ಯಾಮಾತ್ಯನು ಎದ್ದು ಬಂದು ಪರಾಕು ! ಜೀಯಾ! ಚೋಳ ರಾಜನು ಯಾವುದೋ ಸಂಧಿಕಾರ್ಯಕ್ಕಾಗಿ ತನ್ನ ರಾಜ್ಯವನ್ನು ಬಿಟ್ಟು ನ್ಯಾಯ ವಿಹೀನನಾಗಿ ವಾಂಡ್ಯರಾಜನ ರಾಜ್ಯವನ್ನು ಕಸಿದುಕೊಂಡ ಚೇರರಾಜನ ಆಶ್ರಯ ವನ್ನು ಹೊಂದಿರುವುದಾಗಿ ಬಿನ್ನವಿಸಿದುದನ್ನು ಕೇಳಿ ಒಂದಾನೊಂದು ಶುಭ ಮುಹೂರ್ತದಲ್ಲಿ ಸಸ್ಯನಾಗಿ ಹೊರಟು ದಕ್ಷಿಣಾಭಿಮುಖವಾಗಿ ಪ್ರಯಾಣಮಾಡಿ ಚಂದ್ರಗಿರಿಯನ್ನು ಸೇರಿ ಅಲ್ಲಿಂದ ತಿರುಪತಿಯನ್ನು ಹೊಕ್ಕು ಅಲ್ಲಿ ಕೆಲವುದಿವಸ ಗಳಿದ್ದು ಶ್ರೀನಿವಾಸನಂ ಸೇವಿಸಿ ಅನಂತರ ಕಾಳಹಸ್ತಿ, ವಿಷ್ಣು ಕಂಚಿ, ತಿರುವಣ್ಣಾ ಮಲೆಯ ಮೂಲಕ ಶ್ರೀರಂಗಕ್ಕೆ ಬಂದು ಅಲ್ಲಿ ತನ್ನ ಪಾಳಯವನ್ನು ಹೂಡಿ ಚೇರ ರಾಜನನ್ನು ದಂಡಿಸುವುದಕ್ಕೆ ಸಾಕಾದಷ್ಟು ಸೈನ್ಯವನ್ನು ಕೊಟ್ಟು ತನ್ನ ಮೈದುನ ನನ್ನು ಕಳುಹಿಸಿದನು. ಅದರಂತೆ ಸಲಗರಾಜನ ಕುವರನು ರಾಜಾಜ್ಞೆಯಂ ಶಿರಸಾ ವಹಿಸಿ ಮಧುರೆಯಮೂಲಕ ತಾಮ್ರ ಪರ್ಣಿನದಿಯ ದಡದಲ್ಲಿಳಿದುಕೊಂಡು ಚೇರರಾಜನಮೇಲೆ ದಂಡೆತ್ತಿ ಹೋಗಲು ತನ್ನ ಸೈನ್ಯಾಧಿಕಾರಿಯನ್ನು ಕಳುಹಿಸಿದನು. ಇದನ್ನು ಚಾರರಮುಖದಿಂದ ಕೇಳಿದ ತಿರುವಾಂಕೋಡು ರಾಜನು (ಇವನಿಗೆ ತಿರುವಡಿಯೆಂಬ ಬಿರುದು) ವಿಜಯನಗರದ ಸೈನ್ಯವನ್ನೆದುರಿಸಲು ಸೈನ್ಯದೊಡನೆ ಸುಸಜ್ಜಿತನಾಗಿ ತನ್ನ ವರ್ಣೀನದಿಯ ದಡದಲ್ಲಿ ಬಂದುನಿಂತನು, ಯುದ್ದವು ನಡೆದುದು, ವಿಜಯನಗರದ ಸೈನ್ಯವು ಗೆದ್ದು ದು, ಇದನ್ನು ತಿಳಿದಕೂಡಲೇ ಚೇರರಾಜನು ಹರಾಜಯವನ್ನು ಒಪ್ಪಿಕೊಂಡು ಕೂಡಲೆ ತನ್ನ ಬಳಿಯಲ್ಲಿದ್ದ ಚೋಳರಾಜನನ್ನು ಸಲಗರಾಜ ಕುಮಾರನಿಗೆ ಒಪ್ಪಿಸಿ ಶರಣಾಗತನಾಗಲು, ಸಲಗ ರಾಜಕುಮಾರನು ಅವನನ್ನು ಮನ್ನಿಸಿ ಅವನಿಂದ ಕಿತ್ತುಕೊಂಡ ರಾಜ್ಯಗಳನ್ನು ಪುನಃ ಅವನಿಗೆ ಕೊಟ್ಟು ಅನಂತರ ಪದ್ಮನಾಭನ ದರ್ಶನೋತ್ಸುಕನಾಗಿ ಮಲಯ ಪರ್ವತದ ಸಾನುಪ್ರದೇಶವನ್ನು ಸೇರಿದನು ಎಂಬುದು ಪ್ರಕೃತ ದೊರೆತಿರುವ ಅಚ್ಯುತರಾಯಾಭ್ಯುದಯದ ಆರುಸರ್ಗದ ಕಥೆಯ ತಿರಳು, ಚಾರಿತ್ರಿಕ ದೃಷ್ಟಿಯಿಂದ ಈ ಗ್ರಂಥವು ಹೆಚ್ಚಿನದೆಂದು ಹೇಳಬಹುದಾದರೂ ಇತರ ವಿಚಾರಗಳಲ್ಲಿ ಸಾಧಾರಣ ವಾಗಿರುವುದೆಂದು ಹೇಳುವುದರಿಂದ ಕೊರತೆಯಾಗದು, ವಿಜಯನಗರದ ಅರಸ ಮುಖ್ಯನಾದ ಕೃಷ್ಣರಾಯನ ವೈಭವ ಪರಾಕ್ರಮಾತಿಶಯಗಳನ್ನು ಹೇಳಿಕೇಳಿ ಬಹು ತೆರ ಬರೆದಿಟ್ಟಿರುವ ಕಾವ್ಯ ಕಥೆಗಳನ್ನೋದಿ ಈಗಣ ಪರಿಸ್ಥಿತಿಯ ನೆನಿಸಿಕೊಂಡು ಕಣ್ಣೀರಿಡದ ಕನ್ನಡಿಗರಿಲ್ಲ. ಅವನ ವೈಭವಕ್ಕೆ ತಲೆದೂಗದ ಅನ್ಯದೇಶೀಯರಿಲ್ಲ, ಸರ್ವಭಾಷಾಶ್ರಯನಾಗಿದ್ದ ಅವನ ಕಲಾಪೂರ್ಣತೆಯನ್ನು ಮೆಚ್ಚಿನೆಚ್ಚಿ ನಲಿ ದಾಡದ ಭಾರತೇಯರಿಲ್ಲವಾದರೂ, ಅಚ್ಯುತರಾಯನ ವಿಚಾರವಾಗಿ ಹೇಳುವ ಕಾವ್ಯ (46)