ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಸ್ಕೃತಕವಿಚರಿತ YAL - -- -- ಗ್ರಂಥ-ಇವನು ಅದ್ಭುತದರ್ಪಣ'ಎಂಬ ನಾಟಕವನ್ನು ಬರೆದಿರುವನು. ಇದರಲ್ಲಿ ಹತ್ತು ಅಂಕಗಳಿರುವುವು. ರೂಪಕಭೇದವಾದ ಪ್ರಕರಣ ಜಾತಿಗೆ ಸೇರಿ ದದು. ಸೀತಾನ್ವೇಷಣಕ್ಕಾಗಿ ಲಂಕೆಗೆಹೋಗಿದ್ದ ಆಂಜನೇಯನು ಬಂದನಂತರ ರಾಮನು ಯುದ್ಧ ನಡೆಯಿಸಿದ ವಿಚಾರವೇ ಇದರ ಕಥಾವಸ್ತು, ರಚನೆಯು ಸಾಧಾ ರಣ, ವಿಷಯವು ಅದ್ಭುತವಾಗಿರುವಂತೆ ಹೇಳಿ ಪಾತುಗಳ ವೇಷಾಂತರ ರೂಪಾಂತರ ನಾಮಾಂತರಗಳಿಂದ ಕೂಡಿ ಅದ್ಭುತದರ್ಪಣವೆಂಬ ಹೆಸರನ್ನು ಸಾರ್ಥಕವಾಡುವು ದಾಗಿದೆ. ಇವನ ತಂದೆಯ ಹೆಸರು ಲೋಕನಾಥಸ್ಸುಧಿ, ತಾಯಿ ಹೆಸರು ಅಂಬಾ ಎಂದು, ಈ ವಿಚಾರವ:- ಯಂಸನುಂ ಜನಾಂಬಭೂವಸಹಿತಃಶ್ರೀಲೋಕನಾಥಸುಧೀಃ ಖ್ಯಾತಂ ಚಕ್ರಕವಿಂ ಸತಿ:ಸಮುದ ಸಂಮಾಸಿತಾಂಬಾಭಿದಾ || ಎಂಬುದರಿಂದ ವ್ಯಕ್ತವಾಗುತ್ತದೆ. ಕಾಲ:-ಇವನು ದೀಕ್ಷಿತನಿಲಕಂಠನ ಸಮಕಾಲಿ?ನನು ಎಂದರೆ ಕ್ರಿ. ಶ. ೧೭ನೆಯ ಶತಮಾನದವನು, ಗ್ರಂಥ-ಇವನು:-- ರುಕ್ಕಿಣೀ ಜಾನಕೀಗೌರೀದ್ಪದೀ ಪರಿಣೇತಯಃ ಕೃತಯೋ ಯಸ್ಯ ತಸ್ಯೆ ಷಾಕೃತಿಶ್ಚಕ್ರಕವಃ ಶುಭಾ || ಎಂಬುದರಿಂದ ಇವನು ರುಕ್ಷ್ಮಿಣಿ” ಪರಿಣಯ, ಜಾನಕಿ-ಪರಿಣಯ, ಸಾರ್ವತೀ ಪರಿಣಯ, ದೌಪದಿ' ಪರಿಣಯ ಎಂಬ ನಾಲ್ಕು ಕಾವ್ಯಗಳನ್ನು ಬರೆದಿರುವನು. ಇದಲ್ಲದೆ ಚಿತ್ರರತ್ನಾಕರ ಎಂಬ ಶಬ್ದಾಲಂಕಾರ ವಿಚಾರಗ್ರಂಥವನ್ನೂ ಬರೆದಿರುವು ದಾಗಿಹೇಳಿದೆ. ಇವನ ಕಾವ್ಯವು ಲಲಿತವೂ, ಭಾವಯುಕ್ತವೂ, ಸುಲಭವೂ, ಹೃದ ಯಂಗಮವಾಗಿರುವುದು. ಜಾನಕೀಪರಿಣಯ:-ಇದು ೮ ಸರ್ಗಗಳುಳ್ಳ ಕಾವ್ಯ, ಹೆಸರಿಗೆ ತಕ್ಕಂತೆ ಸಿತಾಕಲ್ಯಾಣವನ್ನು ಹೇಳುವುದಾಗಿದೆ. ಉಳಿದ ಗ್ರಂಥಗಳು ದೊರೆಯುವು, ಇದರ ಕೆಲವು ಶ್ಲೋಕಗಳು:- ಪ್ರಮದಯಾ ಖಲು ಯಃ ಪ್ರಿಯದುರ್ಲಭ. ಸ್ಟುಟಮಸೂಜಿ ಯದಾ ಪದತಾಡನ್ನೆ