ಸೌ ತೇ ವ ಶ್ರೀ ಚ ರಿ ತೆಲಿ. ಒಂದನೆಯ ಪ್ರಕರಣ, ಮಾರ್ಗಶೀರ್ಷ ಮಾಸ ಬಂತು. ಸತ್ಯವತಿ ಯು ಜನವರಿಯ ವಿಶ್ರಾಂತಿ ದಿನಗಳನ್ನು ಜ್ಞಪ್ತಿಗೆ ತಂದು ಕೊಂಡು ಪತಿಯ ಆಗಮನವನ್ನೇ ಇದಿರು ನೋಡು ತಿದ್ದಳು. ಆಗ ಆಕೆಗೆ ನಿಮಿಷವೆ' ಒಂದು ಯುಗವಾಗಿದ್ದಿತು. ' ಎಲ್ ನಾರೀ ಮಣಿಗಳಿರಾ! ಈ ಮಾತು ನಿಮ್ಮ ಕಿವಿಗೆ ಸೋಕಿದೊಡನೆಯೇ ಸತ್ಯವತಿ ಯಾರೊ ? ಆಕೆಯ ಪತಿ ಯಾರೊ ? ತಿಳಿದುಕೊಳ್ಳಬೇಕೆಂಬ ಕುತೂಹಲವುಂಟಾಗಬಹುದು. ಅದನ್ನು ನಿಮಗೆ ತಿಳಿಸುತ್ತೇನೆ, ಆದರೆ ನಮ್ಮ ಪುರಾಣಗಳಲ್ಲಿರುವಂತೆ ಹತ್ತು ತಲೆ ಗಳುಳ್ಳವರೂ, ಸಾವಿರಕೈಯುಳ್ಳವರೂ, ಸಮುದ್ರವನ್ನು ಒಂದು ತೊಟ್ಟು ನೀರೂ ಇಲ್ಲದಂತೆ ಕುಡಿದವರೂ, ಭೂಮಿಯನ್ನೆಲ್ಲಾ ಚಾಪೆ ಯಂತೆ ಸುತ್ತಿದವರೂ, ಅದ ರಲ್ಲಿ ಒಬ್ಬರೂ ಇಲ್ಲ, ಅಂತಹ ಅದ್ಭುತಗಳು ಹುಟ್ಟುವ ಕಾಲವೂ, ಅವುಗಳ ನೈಲಾ ನಂಬವ ಕಾಲವೂ, ಬಹು ವರ್ಷಗಳ ಹಿಂದೆಯೇ ಕಳೆದುಹೋಯಿತು. ನವ ಶೃಂಗರಪ್ರಬಂಧಗಳಂತೆ ವನವಿಹಾರ, ಜಲಕ್ರೀಡೆ, ವಧೂವರರು ಒಬ್ಬ ರನ್ನೊಬ್ಬರು ವರಿಸುವುದು, ಮುಂತಾದ ವರ್ಣನೆಗಳೂ ಅದರಲ್ಲಿ ಎಲ್ಲಿಯೂ ಕಾಣ ಬರುವುದಿಲ್ಲ. ಸ್ತ್ರೀಯರು ಸ್ವತಂತ್ರಿಸಿ ತಮ್ಮ ಒಡನಾಡಿಯರ ಸಂಗಡ ವನವಿಹಾರ ಮಾಡುವ ಮಾತು ಈಗ ಕನಸಿನ ಸುದ್ದಿಯಾಯಿತು. ಜಲಕ್ರೀಡೆಯು ಪುಸ್ತಕ ದಲ್ಲಿದೆ. ಯಾವಚ್ಚೇವವೂ ಸುಖದುಃಖಗಳಿಗೆ, ಭಾಗಿಗಳಾಗಿರಬೇಕಾದ ಕನ್ಯಾ ವರರ ಇಚ್ಛಾನುಸಾರ ಮದುವೆಯಾಗುವ ಕಾಲ ಹೋಗಿ ಮಾತನಾಡುವುದಕ್ಕೂ ಚೆನ್ನಾಗಿ ತಿಳಿಯದ ಹಸುಳೆಗಳಿಗೆ ತಮ್ಮ ವಿನೋದಾರ್ಥವಾಗಿ ಮದುವೆಮಾಡಿ ಅವರನ್ನು ಪಾಲಕ್ಕಿಗಳಲ್ಲಿ ಕುಳ್ಳಿರಿಸಿ ಮೆರವಣಿಗೆ ಮಾಡಿಸಿ ಆಮರಣಾಂತವಾಗಿ ದುಃ ಖವೆಂಬ ಸೆರೆಗೆ ಸಿಕ್ಕಿಸುವ ಕಾಲ ಬಂದಿತು, ಸುಲಭವಾದ ಹೊಸಗನ್ನಡದಿಂದ ಬರೆ ಯಲ್ಪಟ್ಟಿರುವ ಈ ಚರಿತ್ರೆಯಲ್ಲಿ ಪ್ರತಿದಿನವೂ ನೀವು ಎಲ್ಲಾ ಕುಟುಂಬಗಳೊಳಗೆ ಸರ್ವಸಾಧಾರಣವಾಗಿ ನೋಡುತ್ತಲೂ, ಅನುಭವಿಸುತ್ತಲೂ ಇರುವ ಸಾಮಾನ್ಯ
ಪುಟ:ಸತ್ಯವತೀ ಚರಿತ್ರೆ.djvu/೧೦
ಈ ಪುಟವನ್ನು ಪರಿಶೀಲಿಸಲಾಗಿಲ್ಲ.