ಎರಡನೆಯ ಪ್ರಕರಣ /1/*/* ಒಳಗೆ ಮಾತಾಡಬೇಕೆಂದಿದ್ದರೂ ಮಾತಾಡದೆ ಸುಂದರಮ್ಮನು ಕಣ್ಣೆರೆದು ನೋಡುತ್ತಿದ್ದಳು. ಆಗ ಇಬ್ಬರೂ ಒಂದು ಕೈಯನ್ನು ಹಿಡಿದುಕೊಂಡು ಊಟ ಕೇಳೆಂದು ಎಬ್ಬಿಸಿ ಬಲಾತ್ಕಾರದಿಂದ ಕರೆ ತಂದು ಮಣೆಯ ಮೇಲೆ ಕುಳ್ಳಿರಿಸಿದರು, ಅವಳು ಮೇಲೆ ಸ್ವಲ್ಪ ಸಂಕೋಚತೋರಿಸಿದಾಗ್ಯೂ ಒಳಗೆ ಹಸಿವೆಂಬ ದೇವರು ಹೊತ್ತಾರೆಯಿಂದಲೂ ಎದ್ದು ಉಟಮಾಡೆಂದು ಬಾಧಿಸುತ್ತಿದ್ದುದರಿಂದ ಅಭಿಮಾನ ವನ್ನು ಮರೆತುಹೋಗಿ ಅಷ್ಟರಲ್ಲೇ ಯಾರಾದರೂ ಬಲಾತ್ಕರಿಸಿದರೆ ಏಳೋಣ ಎಂದು ಯೋಚಿಸುತ್ತಿದ್ದುದರಿಂದ ಅವರು ನಿಮಿತ್ತ ಮಾತ್ರಕ್ಕೆ ಕೈಯನ್ನು ಹಿಡಿದು ಕೊಂಡುದೇಹೊರತು ಹಸಿವೇ ಆಕೆಯನ್ನು ಎಬ್ಬಿಸಿ ಮಣೆ ಹತ್ತಿರಕ್ಕೆ ಕರೆ ತಂದಿತು. ಆಗ ಸತ್ಯವತಿ ಎಲೆಹಾಕಿ ಬಡಿಸಿದಳು, ಸುಂದರಮ್ಮನ ಬಲಗೈ ಮೆಲ್ಲ ಮೆಲ್ಲನೆ ಅನ್ನ ದಮೇಲೆ ಹೋಗಿ ಕೆಲಸಮಾಡಲಾರಂಭಿಸಿದೊಡನೆಯೇ ಪಲ್ಲೆ ಯವೂ, ತೊವ್ವ ಯ, ಅನ್ನ ವೂ ಒಂದಾದಮೇಲೊಂದು ಮಾಯವಾಗುತ್ತಾ ಬಂದುವು. ಸ್ವಲ್ಪ ಹೊತ್ತಿನಲ್ಲಿ ಎಲೆವೆಲ್ಲಾ ಒಂದಾಯಿತು. “ ಇಷ್ಟು ಹೊತ್ತೂ ಕೋಪಮಾಡಿಕೊಂಡಿದ್ದು ಒಂದು ನಿಮಿಷದೊಳಗಾಗಿ ಎಲೆಯಲ್ಲಿದ್ದ ಅನ್ನ ವನ್ನೆಲ್ಲಾ ಮಾಯಮಾಡಿ ಇಂದ್ರಜಾಲವನ್ನು ತೋರಿಸಿದೆ ಋಲ್ಲ ?"- ಎಂದು ನಾರಾಯಣ ಮೂರ್ತಿ ನಕ್ಕು, ಅತ್ತಿಗೆಯಾದುದರಿಂದ ಸ್ವಲ್ಪ ಪರಿಹಾಸಮಾಡಿ ತನ್ನ ಶಯನಗೃ ಹಕ್ಕೆ ಹೋದನು. ಸತ್ಯವತಿ ಒರಗಿತ್ತಿಗೆ ನಿದ್ದೆ ಬಂದಮೇಲೆ ತನ್ನ ಆಗಮನವನ್ನೇ ನಿರೀಕ್ಷಿಸುತ್ತಿದ್ದ ಪತಿಯನ್ನು ಸೇರಿ ಕಿರುಮನೆಯ ಕದವನ್ನು ಮುಚ್ಚಿದಳು. -@@೯ ಮೂರನೆಯ ಪ್ರಕರಣ. ಮರುದಿನದಿಂದ ಅಮ್ಮಂದಿರು, ಅಕ್ಕಂದಿರು, ಎಲ್ಲೆಲ್ಲಿ ನೋಡಿದರೂ ಗುಂಪು ಕಟ್ಟಿ ಕೊಂಡು, ಸತ್ಯವತಿಯಮೇಲೆ ದೋಷಾರೋಪಣೆಮಾಡುತ್ತಾ, ಮಗಿನಮೇಲೆ ಬೆರಲಿಟ್ಟು ಕೊಂಡು, ಆಶ್ಚರ್ಯಪಡತೊಡಗಿದರು. ಅವರು ಆಕೆಯಲ್ಲಿ ಮೊಟ್ಟ ಮೊ ದಲು ಕಂಡುಹಿಡಿದ, ದೊಡ್ಡ ತಪ್ಪು ನಡುಹಗಲಲ್ಲಿ ಅವಳು ಗಂಡನೊಂದಿಗೆ ಮಾಶಾ ಡಿದುದೇ, ಅಯ್ಯೋ ! ಇದೇನು ! ಕೇಡುಗಾಲ ! ಯಶೋದಮ್ಮನ ಎರಡ ನೆಯ ಸೊಸೆ ನೆನ್ನೆ ಮಾವನ ಇದಿರಾಗಿಯೇ ಗಂಡನ ಸಂಗಡ ಮಾತನಾಡುವುದಕ್ಕೆ ಮೊದಲು ಮಾಡಿದಳಂತೆ! ಎಂದೊಬ್ಬ ಭೂ, ಯಾವಾಗಲೂ ಇಲ್ಲದ ಇಂತಹ ವಿರುದ್ಧ
ಪುಟ:ಸತ್ಯವತೀ ಚರಿತ್ರೆ.djvu/೧೮
ಈ ಪುಟವನ್ನು ಪರಿಶೀಲಿಸಲಾಗಿಲ್ಲ.