ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪ್ರಸಾರದ ಅವಶ್ಯಕತೆ ಬಹಳಷ್ಟಿದೆ....ಈ ದೃಷ್ಟಿಯಿಂದಲೂ ಅತ್ಯಂತ ಉಪಯುಕ್ತವಾದುದು. ಅಲ್ಲದೆ ಲೇಖಕರು....ಆಧುನಿಕ ಕೌಶಲ್ಯವನ್ನೂ, ಹಳೆಗಾಲದ ಮೌಢ್ಯವನ್ನೂ ಕುರಿತು ವಿವೇಚಿಸುತ್ತಾರೆ....ಇದರಲ್ಲಿ ಯಾವುದೇ ಬಗೆಯ ಪಾರಿಭಾಷಿಕ ಕ್ಲಿಷ್ಟತೆಗೆ ಅವಕಾಶ ಕೊಡದಿರುವುದನ್ನು ವಿಷೇಶವಾಗಿ ಹೇಳಬೇಕು. ಈ ಬಗೆಯ ಪುಸ್ತಕಗಳ ಲೇಖಕರು ಮರೆಯಬಾರುದ ವಿಚಾರವೆಂದರೆ ತಾವುಯಾರಿಗಾಗಿ ಇದನ್ನು ಬರೆಯುತ್ತಿದ್ದೇವೆಂಬುದನ್ನು ; ಇದನ್ನು ಮರೆಯುವುದರಿಂದಲೇ ಕೆಲವು ಪುಸ್ತಕಗಳನ್ನು ನಿಷ್ಪ್ರಯೋಜಕವಾಗುತ್ತವೆ....ಅವರ ಬರವಣಿಗೆ ಯಾವುದೇ ಕಾರಣದಿಂದಲೂ ಜಡುಕಾದುದಲ್ಲ ; ಕ್ಲಿಷ್ಟವಾದುದಲ್ಲ ; ಅದು ಸಂವಹನವನ್ನು ಕಳೆದುಕೊಳ್ಳುವುದೂ ಇಲ್ಲ. ಪ್ರಕಟವಾದ ಸಮಯದಲ್ಲಿ ಪುಸ್ತಕಕ್ಕೆ ಅಪಾರ ಬೇಡಿಕೆಯೂ ಇತ್ತು. ಆದರೆ ಕಾರಣಾಂತರಗಳಿಂದ ಮರುಮುದ್ರಣ ಸಾಧ್ಯವಾಗಿರಲಿಲ್ಲವೆನಿಸುತ್ತದೆ. ಇದೀಗ ಕನಾ‍೯ಟಕ ಸಕಾ೯ರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯವರು ಹಮ್ಮಿಕೊಂಡಿರುವ ಕನ್ನಡದ ಮೇರುಕೃತಿಗಳ ಮರು-ಮುದ್ರಣ ಯೋಜನೆಯಡಿಯಲ್ಲಿ ಈ ಕೃತಿಯೂ ಆಯ್ಕೆಯಾಗಿರುವುದು ಒದಗಿಬಂದ ಸುಯೋಗವೆಂದೇ ಭಾವಿಸುತ್ತೇನೆ. ಕೆಲವು ವಷ೯ಗಳ ಹಿಂದೆ ಪ್ರಥಮ ಮುದ್ರಣ ಕಂಡಿದ್ದ ಕನ್ನಡದ ಮೇರು ಕೃತಿಗಳಲ್ಲೊಂದೆಂದು ಪರಿಗಣಿಸಿ ಮರುಮುದ್ರಣಕ್ಕೆ ಅನುವು ಮಾಡಿಕೊಟ್ಟಿರುವ ಕನಾ೯ಟಕ ಸಕಾ೯ರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಆಯ್ಕೆ ಸಮಿತಿಯವರಿಗೆಲ್ಲಾ ನನ್ನ ಹೃತ್ಪೂವ೯ಕ ವಂದನೆಗಳನ್ನು ಸಲ್ಲಿಸುತ್ತೇನೆ.

ಶಿವಮೊಗ್ಗ ಡಾ||ಎಚ್.ಡಿ. ಚಂದ್ರಪ್ಪಗೌಡ