ಈ ಪುಟವನ್ನು ಪರಿಶೀಲಿಸಲಾಗಿಲ್ಲ.

X೧೧ ಮರು ಮುದ್ರಣ ಕುರಿತು ಎರಡು ಮಾತು

    'ಸಾಮಾನ್ಯ ಶಸ್ತ್ರವೈದ್ಯದ ಕಾಯಿಲೆಗಳು' ಕೃತಿಯನ್ನು ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಪ್ರಸಾರಾಂಗವು ೧೯೯೩ರಲ್ಲಿ ಪ್ರಕಟಿಸಿತ್ತು. ಆ ಸಮಯದಲ್ಲಿ ಶಸ್ತ್ರವೈದ್ಯದ (ಸಜ೯ರಿ)ವಿಷಯ ಕುರಿತು ಕನ್ನಡದಲ್ಲಿ ಗಮನಾಹ೯ ಮೊದಲ ಜನಪ್ರಿಯ ಶಸ್ತ್ರವಯದ್ಯಗ್ರಂಥವೆಂಬ ಅಭಿಪ್ರಾಯ ಮೂಡಿಬಂದಿತ್ತು. ಅದರ ಒಳಾಂಶ, ಪಠ್ಯ ವಿಷಯಗಳ ಆಳ ವಿಸ್ತಾರ, ಯೋಜನಾ ಸ್ವರೂಪ, ಜನಸಾಮಾನ್ಯರಿಗೆ ಅದರ ಉಪಯುಕ್ತತೆ ಬಗೆಗೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದುಂಟು. ವಿಜ್ಞಾನಕ್ಕೆ ಸಂಬಂಧಿಸಿದ ಕೃತಿಗಳನ್ನು ರಚಿಸುವಲ್ಲಿ ಎದುರಿಸುತ್ತಿದ್ದ ಪಾರಿಭಾಷಿಕ ಪದಗಳ ಕೊರತೆ, ವಿಷಯ ನಿರೂಪಣೆ ಮುಂತಾದವು ಅಡ್ಡಿಯಾಗುತ್ತಿವೆಯೆಂಬ ಸೋಗು ಅಂದು ವ್ಯಾಪಕವಾಗಿತ್ತು. ಈ ಹಿನ್ನೆಲೆಯಲ್ಲಿ ಕನ್ನಡದಲ್ಲಿ ಹನಪ್ರಿಯ ವೈದ್ಯಕೀಯ ಸಾಹಿತ್ಯವನ್ನು ರಚಿಸುವಲ್ಲಿ ಹಲವು ಅಡಚಣೆಗಳಿರುವುದು ಸಹಜವೆ. ಸೃಜನ ಶೀಲ  ಸಾಹಿತಿಗಳಾದವರಿಗೆ ವೈದ್ಯಕೀಯ ವಿಷಯಗಳಲ್ಲಿ ಆಳವಾದ ಪರಿಜ್ಞಾನವಿರಲಾರದು; ವಿಷಯದ ಬಗೆಗೆ ಹೆಚ್ಚಿನ ತಿಳುವಳಿಕೆ ಇರುವ ವೈದ್ಯರಲ್ಲಿ ಸಾಹಿತ್ಯಿಕ ಭಾಷೆಯ ಪ್ರಾವೀಣ್ಯತೆ ಇರುವವರು ಅಪರೂಪ. ಅಂದರೆ 'ವೈದ್ಯ ಲೇಖಕರು ನಿಪುಣರು ಮತ್ತು ವಿಷಯ ತಜ್ಞರಾಗಿರಬಹುದಾದರೂ, ಇಲ್ಲಿ ತಮ್ಮ ತಿಳುವಳಿಕೆಯನ್ನು ಕನ್ನಡದಲ್ಲಿ ಎಷ್ಟು ಸಮಥ೯ವಾಗಿ ಅಭಿವ್ಯಕ್ತಿ ಮೂಡುತ್ತಾರೆಂಬುದು ಪ್ರಾಮುಖ್ಯತೆ ಪಡೆಯುತ್ತದೆ. ಕೆಲಸಾರಿ ಪಾರಿಭಾಷಿಕ ಪದಗಳ ಬಳಕೆಯ ಬಗ್ಗೆ ಆಕ್ಷೇಪವೆತ್ತದೆ ರಾಜಿಯಾಗಬಹುದು. ಆದರೆ ವಿವರಣೆಗಳಲ್ಲಿ ವಾಕ್ಯ ರಚನೆಯ ಸ್ವರೂಪವೇ ಇಂಗ್ಲಿಷಿನ ಜಾಡು ಬಿಟ್ಟು ಬರದಿದ್ದರೆ, ಕನ್ನಡದಾಗದಿದ್ದರೆ, ಸಂವಹನದ ತೊಡಕುಗಳು ಎದುರಾಗುತ್ತವೆ. 'ಸಾಮಾನ್ಯ ಶಸ್ತ್ರ ವೈದ್ಯದ ಕಾಯಿಲೆಗಳು' ಇಂತಹ ಸಮಸ್ಯೆಗಳನ್ನು ಎದುರಿಸಿದೆಯೆನ್ನಬಹುದು. ಇಲ್ಲಿಯ ವಸ್ತು ಸಾಕಷ್ಟು ಸಂಕೀಣ೯ವಾದ ತಾಂತ್ರಿಕ ವಿವರಗಳನ್ನೂ, ಪಾರಿಭಾಷಿಕ ಪದಗಳನ್ನು ಹೊಂದಿರುವಂಥದು... 'ಜನಪ್ರಿಯ ವಿಜ್ಞಾನ ಸಾಹಿತ್ಯ' ಎಂಬ ಗುಂಪಿಗೆ ಸುಲಭವಾಗಿ ಸೇರಿಸಲಾಗದ ಇಂಥ ವಸ್ತುವನ್ನು ಕನ್ನಡದಲ್ಲಿ ಹೇಳುವುದರಲ್ಲಿ ಲೇಖಕರು ಸಮಥ೯ರಾಗಿದ್ದಾರೆ.' 
      ಇನ್ನೂ ಮುಂದುವರಿದು ವಿಮಷ೯ಕರೊಬ್ಬರು ದಾಖಲೆ ಮಾಡಿರುವಂತೆ...ಕಾಯಿಲೆಗಳು ಉದ್ಭವಿಸುವ ರೀತಿ-ನೀತಿಗಳು ಪ್ರಕಟವಾಗುವ ಲಕ್ಷಣ ಹಾಗೂ ಚಿಕಿತ್ಸಾ ವಿಧಾನಗಳನ್ನು ಜನಸಾಮಾನ್ಯರಿಗೆ ಮನದಟ್ಟಾಗುವ ಹಾಗೆ ತಿಳಿಸುವ ಆರೋಗ್ಯ ಶಿಕ್ಷಣ ಕಾಯ೯ಕ್ರಮಗಳು ವ್ಯಾಪಕವಾಗಿ ಜರುಗಬೇಕಾಗಿದೆ; ಅದಕ್ಕಾಗಿ ಕನ್ನಡ ಮತ್ತಿತರ ಪ್ರಾದೇಶಿಕ ಭಾಷೆಗಳಲ್ಲಿ ಜನಪ್ರಿಯ ವೈದ್ಯಕೀಯ ಸಾಹಿತ್ಯ