ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬೪

                                          ಸಾಮಾನ್ಯ ಶಸ್ತ್ರವೈದ್ಯದ ಕಾಯಿಲೆಗಳು
    
   ಗುದನಾಳ ಮತ್ತು ಗುದ(ಮಲ)ದ್ವಾರದ ಆಸು-ಪಾಸಿನಲ್ಲಿ ಹಲವಾರು ರೋಗಗಳು ಪ್ರಕಟವಾಗುತ್ತವೆ.ಗುದದ್ವಾರದೊಳಗಡೆಯ ರಕ್ತನಾಳ ಮತ್ತು ಲೋಳ್ಪರೆಗಳು ಉಬ್ಬಿಕೊಂಡು,ಹೊರಚಾಚಿ ಮಲವಿಸರ್ಜನೆಯ ಸಮಯದಲ್ಲಿ ರಕ್ತಸ್ರಾವವನ್ನುಂಟು ಮಾಡುವ ಪರಿಸ್ಥಿತಿಗೆ "ಮೊಳೆ ರೋಗ" (Piles) ಎನ್ನಲಾಗುತ್ತದೆ.ಪರ್ಯಾಯವಾಗಿ  ಇದಕ್ಕೆ ಮೂಲವ್ಯಾಧಿ ಎಂದು ಸಹ ಹೇಳಬಹುದು.ಮಲದ್ವಾರದ ಅಂಚಿನಲ್ಲಿ ಸೀಳಾಗಿ ಭೀಕರ ಸ್ವರೂಪದ ಬೇನೆ ಮತ್ತು ರಕ್ತಸ್ರಾವಕ್ಕೆ "ಸೀಳುರೋಗ" (Fissure in Ano) ಎಂದು ಹೆಸರು.ಗುದದ್ವಾರದ ಸುತ್ತ ಕೆಲವು ಕಡೆ ಬಾವು ಅಥವ ಕುರ (Perianal Abscess) ಏಳಬಹುದು.ಇಂಥ ಬಾವುಗಳೇ ಸರಿಯಾಗಿ ಒಡೆದು ವಾಸಿಯಾಗದಿದ್ದಾಗ ಸದಾ ಕೀವು ಸುರಿಯುವ 'ಪಿಸ್ಟುಲಾ (Fistula in Ano)ಗಳಾಗಬಹುದು.ಗುದನಾಳದ ಒಡಗಡೆಯಿಂದ ನೇತಾಡಿ ರಕ್ತ ಸುರಿಸುವ "ಹಲಗಾಲಿ" (Polyps) ಎಳೆಯರಲ್ಲಿ ಸಾಮಾನ್ಯವಾಗಿ ಪ್ರಕಟವಾಗುತ್ತವೆ.ಜನಸಾಮಾನ್ಯರು ಇಂಥ ಎಲ್ಲಾ ಪರಿಸ್ಥಿತಿಗಳಿಗೆ ಮೂಲವ್ಯಾಧಿಯಾಗಿದೆಯೆಂದು ಹೇಳುವುದು ರೂಢಿಯಾಗಿ ಬಿಟ್ಟಿದೆ.

ಮೊಳೆ ರೋಗ ಸಂಭಾವ್ಯ ಕಾರಣಗಳು

  ಮೊಳೆರೋಗ ಉದ್ಭವವಾಗುವ ವಿಷಯದಲ್ಲಿ ಹಲವು ಜಿಜ್ಞಾಸೆಗಳಿವೆ.ಮಾನವನ "ನೆಟ್ಟನೆಯ ನಿಲುವು" (Erect Posture) ಮತ್ತು ಗುದನಾಳದ ಶಿರೆಗಳಲ್ಲಿ ಕವಾಟಗಳಿಲ್ಲದಿರುವುದು ಮೊಳೆರೋಗದ ತಳಹದಿಳಾಗಿವೆಯೆಂದು ಇತ್ತೀಚಿನವರೆವಿಗೂ ನಂಬಲಾಗಿತ್ತು.ಜೊತೆಗೆ ಬಹುದಿನಗಳ ಮಲಬದ್ಧತೆ ಹಾಗೂ ಮಲವಿಸರ್ಜನೆಯ ಸಮಯದಲ್ಲಿ ಉಸಿರುಕಟ್ಟಿ ತಿಣುಕುವುದು ಮೊಳೆರೋಗದ ಮೂಲ ಕಾರಣವೆಂದು ಹೇಳಲಾಗುತ್ತಿತ್ತು.ಎರಡನೆಯ ಅಭಿಪ್ರಾಯಕ್ಕೆ ಈಗ ಹೆಚ್ಚಿನ ಸಮ್ಮತಿ ಇರುವಂತಿರುವುದಾದರೂ ಮೊದಲನೆಯದರ ಬಗೆಗೆ ಈಗ  ಅಭಿಪ್ರಾಯ ಬದಲಾಗುತ್ತಿದೆ.ಈ ವಾದದ ಪ್ರಕಾರ : ಮೊಳೆ ರೋಗದ ವಿಶಿಷ್ಟ ಲಕ್ಷಣವಾದ ಉಬ್ಬಿದ ರಕ್ತನಾಳಗಳು ಮತ್ತು ಸಡಿಲ ಲೋಳ್ಪರೆಗಳು ಜನಿಸುವಾಗಲೇ ಗುದನಾಳದಲ್ಲಿ ನೈಸರ್ಗಿಕವಾಗಿ ಇರುತ್ತವೆ; ಮಲ ವಿಸರ್ಜನೆ ಸಲೀಸಾಗಿ ಜುರುಗುವುದಕ್ಕೆ ಅವು ಒಂದು ಕುಷನ್ (Cushion) ಹಾಗೆ ವರ್ತಿಸುತ್ತವೆ.ಪ್ರತಿಸಾರಿ ಮಲವಿಸರ್ಜನೆಯಾಗುವುದು ಗುದನಾಳದ ಲೋಳ್ಪರೆಯ ಸ್ವಲ್ಪಭಾಗ ಸ್ವಾಭಾವಿಕವಾಗಿ ಕೆಳಗೆ ಜರಿಯುತ್ತದೆ.ಬಹಳ ಸಮಯ ಅತಿಸಾರದಿಂದ ಬಳಲುವ ಮಕ್ಕಳಲ್ಲಿ ಲೋಳ್ಪರೆ ಸಂಪೂರ್ಣವಾಗಿ ಹೊರಗೆ ಜರುಗುವುದು (Prolapse)