ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೮೮ ಸಾಮಾನ್ಯ ಶಸ್ತ್ರವೈದ್ಯದ ಕಾಯಿಲೆಗಳು

ತೆರೆದ ಗಾಯವನ್ನು ಮುಚ್ಚಿ ಹೊಲಿಯುವ, ಇಲ್ಲವೆ ಆ ಜಾಗದಲ್ಲಿ ಬೇರೆ ಕಡೆಯಿಂದ ತೆಗೆದ ಚರ್ಮವನ್ನು ಹೊದಿಸುವ ಪ್ರಯತ್ನಗಳು. ಇತ್ತೀಚಿನ ವರ್ಷಗಳಲ್ಲಿ ಕೆಲಕಡೆ ನಡೆಸುತ್ತದ್ದಾರೆ. ಬಹಳ ಮೇಲ್ಗಡೆಯಿಂದ ಬಿಗಿಸುತ್ತುಗಳ ಮೂಲಕ ಹಾಯ್ದು ಬರುವ ಪಿಸ್ಟುಲಾಗಳನ್ನು ಎರಡು-ಮೂರು ಹಂತಗಳಲ್ಲಿ ಶಸ್ತ್ರ ಚಿಕಿತ್ಸೆಗೊಳಪಡಿಸ ಬೇಕಾಗಬಹುದು.

ಪಿಸ್ಟುಲಾ ಸೀಳುರೋಗ ಮತ್ತು ಕುರುಗಳಂಥ ರೋಗಗಳಿಗೆ ಶಸ್ತ್ರ ಚಿಕಿತ್ಸೆ ಜರುಗಿಸದ ಗಾಯಗಳು ದೇಹದ ಇತರ ಕಡೆಯವುಗಳಂತೆ ಜಾಗ್ರತೆ ವಾಸಿಯಾಗುತ್ತವೆಂದು ನಿರೀಕ್ಷಿಸಲಾಗದು. ಚಿಕಿತ್ಸೆ ಜರುಗಿದ ಒಂದೆರಡು ವಾರಗಳಲ್ಲಿ ರೋಗಿ ತನ್ನ ದಿನನಿತ್ಯದ ಕೆಲಸ ಕಾರ್ಯಗಳಲ್ಲಿ ತೊಡಗಲು ಸಾಧ್ಯವಾಗಬಹುದಾದರೂ ಗಾಯಗಳು ಸಂಪೊರ್ಣವಾಗಿ ಮುಚ್ಚಿ ವಾಸಿಯಾಗಲು ಇನ್ನೂ ಕೆಲಸಮಯ ಹಿಡಿಯುತ್ತದೆ. ಈ ವ್ಯಾಧಿಗಳ ಚಿಕಿತ್ಸಾ ಫಲಿತಾಂಶಗಳು ಇತರ ಕಾಯಿಲೆಗಳ ಶಸ್ತ್ರಚಿಕಿತ್ಸಾ ಫಲಿತಾಂಶಗಳಷ್ಟು ತೃಪ್ತಿಕರವಾಗುತ್ತವೆಂಬುದನ್ನು ಪ್ರತಿಸಾರಿಯೂ ನಿರೀಕ್ಷಿಸಲಾಗಲಾರದು.ಬಹಳ ಕಾಲ ಅಂಡೂರಿ ಕುಳಿತುಕೊಳ್ಳುವುದು, ಬೈಸಿಕಲ್, ಮೊಪೆಡ್, ಮೋಟಾರ್ ಸೈಕಲ್ಗಳ ಸವಾರಿ, ಗಾಯಗಳು ಶೀಘ್ರವಾಗಿ ಗುಣವಾಗುವುದಕ್ಕೆ ಸಹಕಾರಿಯಾಗುವುದಿಲ್ಲ. ಕೆಲವು ಸಾರಿ ಅಂತಹ ವಾಹನಗಳ ಸವಾರಿಯನ್ನು ಕಡ್ಡಾಯವಾಗಿ ನಿಲ್ಲಿಸಬೇಕಾಗುತ್ತದೆ. ಗುದನಾಳದ ಇತರ ರೋಗಗಳಿಗೆ ಚಿಕಿತ್ಸಾ ನಂತರ ತೆಗೆದುಕೊಳ್ಳುವ ಮುಂಜಾಗ್ರತೆ - ಮಲದ ಗಾತ್ರ, ಹೆಚ್ಚಿಸುವ ಪಥ್ಯಾಹಾರ, ಮಲಬದ್ದತೆಯ ನಿವಾರಣೆ, ಬಿಸಿ ನೀರಿನ ಕಟಿಮಜ್ಜನ ಇತ್ಯಾದಿ ಕ್ರಮಗಳನ್ನು ಕೆಲ ಕಾಲ ಕಟ್ಟುನಿಟ್ಟಾಗಿ ಮುಂದುವರಿಸಬೇಕು.

                            *  *  *  *