ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜನನಾಗಂಗಳ ರಚನೆ ಮತ್ತು ಕಾರ್ಯವಿಧಾನ

ಸಾರಿ ಅಂಡಾಶಯದಿಂದ ಹೊರಬಿದ್ಧು ದಿಂಬಾನಾಳದ ಮೂಲಕ ಗರ್ಭಕೋಶಕ್ಕೆ ಪ್ರವಹಿಸುತ್ತದೆ.ಸ್ತ್ರಿಯ ಲೈಂಗಿಕ ಚಟುವಟಿಕೆಗಳಿಗೆ ಪ್ರಚೋದನೆ ನೀಡುವ ಚೋದನಿಗಳು ಅಂಡಾಶಯದಲ್ಲಿ ಸ್ರವಿಸಿ ರಕ್ತಗತವಾಗುತ್ತವೆ.

ಗರ್ಭಕೋಶ:

    ಮೂರು ಪದರಗಳ ದಪ್ಪಭಿತ್ತಿಯ ಗರ್ಭಕೋಶ  ತಲೆಕೆಳಗಾದ ಪೇರಲೆ ಹಣ್ಣಿನ ಆಕಾರ (pear shaped)ದ್ಧಾಗಿದ್ದು  ವಸ್ತಿಕುಹರದ ನಡುವೆ ನೆಲೆಯಾಗಿದೆ.ಸಹಜ ಸ್ಥಿತಿಯಲ್ಲಿ ಸುಮಾರು ಮೂರು ಅಂಗುಲ ಉದ್ದ ಮತ್ತು ಎರಡು ಅಂಗುಲದಷ್ಟು ಅಗಲವಾಗಿರುವ ಈ ಅವಯವ,ಈ ಅಳತೆಗಳ ಆರರಷ್ಟು ಗರ್ಭವಸ್ಥತೆಯಲ್ಲಿ ಹಿರಿದಾಗುತ್ತದೆ.ಅದನ್ನು ಮುಂಡ,ದೇಹ ಮತ್ತು ಗರ್ಭಕಂಠಗಳೆಂಬ ಮೂರು ಭಾಗಗಳಾಗಿ ವಿಂಗಡಿಸಬಹುದು.ಅದರ ಮೇಲ್ಭಾಗದ ಮುಂಡವನ್ನು ಹೊರತುಪಡಿಸಿದರೆ ಅದರ ದೇಹ ೨ ಅಂಗುಲ ಮತ್ತು ಗರ್ಭಕಂಠ ಒಂದು ಅಂಗುಲದಷ್ಟಿರುತ್ತವೆ.ಮುಂಡದ ಕೆಳಗೆ ಗರ್ಭಕೋಶದ ಇಕ್ಕೆಲಗಳಲ್ಲಿ ದಿಂಭನಾಳಗಳು (Fallopian tubes) ಉದ್ಭವಿಸಿ, ಅಂಡಾಶಯಗಳತ್ತ ಚಾಚುತ್ತವೆ.ಗರ್ಭಕೋಶದ ಕೆಳಗಿನ ಗರ್ಭಕಂಠ ಯೋನಿಯ ಮೇಲ್ಭಾಗಕೇ ಹೊಂದಿಕೊಂಡಿದೆ.ಗರ್ಭಕಂಠದಿಂದ ಗುದ ಮುಂದಾಣದ ಕಡೆ ಇಳಿದು ಬಾಯಿ ತೆರೆದುಕೊಳ್ಳುತ್ತದೆ.ಸುಮಾರು ೫-೬ ಅಂಗುಲದಷ್ಟು ಉದ್ದವಿರುವ ಯೋನಿಯಲ್ಲಿ ಸಂಭೋಗ ಸಮಯದಲ್ಲಿ ಪುರುಷನ ಶಿಶ್ನದಿಂದ ವಿಸರ್ಜಿಸಲ್ಪಟ್ಟ ವೀರ್ಯವನ್ನು ಸ್ವೀಕರಿಸುತ್ತದೆ.