ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೨೮ ಸಾಮಾನ್ಯ ಶಸ್ತ್ರವೈದ್ಯದ ಕಾಯಿಲೆಗಳು

ವೀರ್ಯಾಣುಗಳು ಅಲ್ಲಿಂದ ಗರ್ಭಕಂಠದ ಮೂಲಕ ಗರ್ಭಕೋಶದತ್ತ ಸಾಗಿ, ಮುಂದೆ ಡಿಂಭನಾಳದಲ್ಲಿರುವ ಅಂಡಾಣುವನ್ನು ಸಂಪರ್ಕಿಸಿ, ಅವುಗಳಲ್ಲಿ ಕೇವಲ ಒಂದು ವೀರ್ಯಾಣು ಅದನ್ನು ಫಲಿತಗೊಳಿಸುವಲ್ಲಿ ಯಶಸ್ವಿಯಾಗುತ್ತದೆ. ಹೀಗೆ ಫಲಿತಗೊಂಡ ಅಂಡಾಣು ಮತ್ತೆ ಗರ್ಭಕೋಶಕ್ಕೆ ಬಂದು ಮುಂದೆ ಭ್ರೂಣವಾಗಿ ಬೆಳವಣೆಗೆ ಹೊಂದುತ್ತದೆ.

     ಜನನಾಂಗಗಳು ಇರುವ ಪ್ರದೇಶ ಅದರಲ್ಲೂ ಪುರುಷರ ಗೆಜ್ಜೆ, ಬಾಹ್ಯ ಜನನಾಂಗಗಳ ಜಾಗ, ಗುದಮುಂದಾಣಗಳು ಶರೀರದ ಮರ್ಮಸ್ಥಾನಗಳಾಗಿರುವುದಲ್ಲದೆ, ಆಯಕಟ್ಟಿನ ಪ್ರದೇಶಗಳೆಂದು ಹೇಳಬಹುದು. ಈ ಕಿರು ಪ್ರದೇಶದಲ್ಲೇ ಕೆಳಗಿಳಿಯದ ವೃಷಣ, ವೃಷಣ ನಿರ್ಬಾವು, ಹರ್ನಿಯ, ಶಿಶ್ನದ ಬಿಗಿ ಮುಂದೂಗಲು ಗಳಂತಹ ಪ್ರಮುಖ ವ್ಯಾಧಿಗಳು ಉದ್ಭವಿಸುತ್ತವೆ. ವ್ಯಕ್ತಿಯ ರಹಸ್ಯ ಸ್ಥಾನವೆಂಬ ತಪ್ಪು ಗ್ರಹಿಕೆಯಿಂದ ಅವನೂ ಇಲ್ಲಾಗಬಹುದಾದ ವ್ಯತ್ಯಾಸಗಳಿಗೆ ಉದಾಸೀನ ಅಥವಾ ಅಂಜಿಕೆಯ ಮನೋಭಾವ ತಾಳುವುದುಂಟು. ಪೋಷಕರು ಅಥವಾವೈದ್ಯರು ಪರೀಕ್ಷೆ ಮಾಡ ಬಯಸಿದಾಗಲೂ ಸುಲಭವಾಗಿ ಅವುಗಳನ್ನು ತೋರಿಸಲು ಒಪ್ಪುವವರೂ ವಿರಳ. ಶಾಲಾ ಕಾಲೇಜುಗಳ ಮಾಮೂಲು ವೈದ್ಯಕೀಯ ತಪಾಸಣೆಯ ಸಂದರ್ಭದಲ್ಲಿ ಮರ್ಮಸ್ಥಾನವನ್ನು ತೋರಿಸಲು ನಾಚಿಕೆ ಪಟ್ಟು ಬಹಳಷ್ಟು ಜನ ಪರೀಕ್ಷೆಯಿಂದ ತಪ್ಪಿಸಿಕೊಳ್ಳುತಾರೆ. ಮುಂದಿನ ಅಧ್ಯಾಯದಲ್ಲಿ ಈ ಪ್ರದೇಶದ ಆವಯವಗಳಲ್ಲಿ ಉದ್ಭವಿಸುವ ಕಾಯಿಲೆಗಳು ಮತ್ತು ಅವುಗಳ ತೊಡಕುಗಳನ್ನು ಅವಲೋಕಿಸಿದರೆ ಅವುಗಳ ಬಗೆಗೆ  ನಾವೆಷ್ಟು ಕಾಳಜಿವಹಿಸಬೇಕಾಗುತ್ತದೆಂಬುದರ ಅರಿವಾಗುತ್ತದೆ.