ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕೆಳಗಿಳಿಯದ ವೃಷಣ

                                                                                            ೨೩೩

ಕೆಳಿಗಿಳಿಯದ ವೃಷಣಗಳಿಗೆ ಶಸ್ತ್ರಚಿಕಿತ್ಸೆಯನ್ನು ಕೈಗೊಳ್ಳಬಹುದಾದ ವಯಸ್ಸಿನ ಬಗೆಗೆ ಮೊದಲು ಭಿನ್ನಾಭಿಪ್ರಾಯಗಳಿದ್ದವು. ಹದಿ ಹರಯದ ವಯಸ್ಸು (೧೩-೧೪ ವರ್ಷ) ಆರಂಭವಾಗುವುದರೊಳಗೇ ಕೆಳಗಿಳಿಯದ ವೃಷಣಗಳನ್ನು ಶಸ್ತ್ರಚಿಕಿತ್ಸೆ ಜರುಗಿಸಿ ಕೆಳಗೆ ಇಳಿಸಬೇಕೆಂಬ ಹಿಂದೆ ಇದ್ದ ಅಭಿಪ್ರಾಯ, ನಂತರ ೭ ರಿಂದ ೧೦ ವರ್ಷಗಳೊಳಗೇ ಮಾಡಬೇಕೆಂದಾಯಿತು. ಇತ್ತೀಚೆಗೆ ಮಗುವುನ ಎರಡನೇ ವರ್ಷ ಮುಗಿಯುವುದರೊಳಗೇ ವೃಷಣಗಳನ್ನು ಕೆಳಗಿಳಿಸಲು ಕಾರ್ಯಕ್ರಮಗಳನ್ನು ಜರುಗಿಸಬೇಕೆಂಬ ಸ್ಪಷ್ಟಭಿಪ್ರಾಯ ಮೂಡಿಬಂದಿದೆ. ಮಗುವಿನ ಮೂರನೇ ವರ್ಷದಲ್ಲಿ ವೃಷಣದ ಅಂಗಾಂಶಗಳಲ್ಲಿ ಕಂಡು ಬಂದಿದೆ. ಅಷ್ಟರೊಳಗೇ ವೃಷಣಗಳು ವೃಷಣ ಚೀಲದಲ್ಲಿ ನೆಲೆಯೂರುವಂತೆ ಮಾಡುವುದರಿಂದ ಮುಂದುಂಟಾಗಬಹುದಾದ ಬರಡುತನ ಮತ್ತು ಕ್ಯಾನ್ಸರ್ ಪರಿವರ್ತನೆಗಳೆರಡನ್ನು ಇದರಿಂದ ನಿವಾರಿಸಬಹುದಾಗಿದೆ.

ಕೆಳಗಿಳಿಯದ ಬಹುಪಾಲು ವೃಷಣಗಳನ್ನು ಒಂದೇ ಹಂತದ ಶಸ್ತ್ರಚಿಕಿತ್ಸೆಯಿಂದ ವೃಷಣ ಚೀಲಕ್ಕೆ ತಂದು ನೆಲೆಯೂರಿಸಲು ಸಾದ್ಯವಾಗುತ್ತದೆ. ಇನ್ನು ಕೆಲವು ಸಂದರ್ಭಗಳಲ್ಲಿ ಎರಡು ಹಂತಗಳಲ್ಲಿ ಈ ಕಾರ್ಯಕ್ರಮ ಜರುಗಿಸಬೇಕಾಗಬಹುದು. ವೃಷಣಕ್ಕೆ ಸಂಬಂದಿಸಿದ ರಕ್ತನಾಳಗಳು ಮತ್ತು ಕೆಲವು ನಿಲುವುಗಟ್ಟುಗಳು ಸಂಪೂರ್ಣವಾಗಿ ಕೆಳಗಿಳಿದು ಬರುವಷ್ಟು ಉದ್ದವಾಗಿ ಬೆಳೆಯಲಾರವಾದ್ದರಿಂದ ಈ ಕ್ರಮ ಅಗತ್ಯವಾಗಬಹುದು. ಮೊದಲ ಹಂತದಲ್ಲಿ ವೃಷಣ ಚೀಲದ ಮೇಲ್ಭಾಗ ಇಲ್ಲವೆ ತೊಡೆಯ ಮೇಲ್ಭಾಗದಲ್ಲಿ ಕೆಳಗಿಳಿದ  ವೃಷಣವನ್ನು ಇರಿಸಲಾಗುತ್ತದೆ. ಮುಂದಿನ ಕೆಲವು ತಿಂಗಳುಗಳಲ್ಲಿ ಅದನ್ನು ಬಿಡಿಸಿ ವೃಷಣ ಚೀಲದ ತಳಕ್ಕೆ ತಂದು ನೆಲೆ ಮಾಡಿ ನಿಲ್ಲಿಸಲಾಗುತ್ತದೆ.

ಹರಯದ ವಯಸ್ಸಿನ ನಂತರ ಕೆಳಗಿಳಿಯದ ವೃಷಣಗಳ ಪ್ರಯೋಜನಕ್ಕಿಂತ ಅಪಾಯವೇ ಹೆಚ್ಚು ಎನ್ನುವ ಅಭಿಪ್ರಾಯವಿರುವುದರಿಂದ, ಅವನ್ನು ವೃಷಣ ಚೀಲಕ್ಕೆ ಕೆಳಗಿಳಿಸುವುದಕ್ಕಿಂತ ಕತ್ತರಿಸಿ ತೆಗೆದುಹಾಕುವುದೇ ಕ್ಷೇಮಕರ ಎನ್ನುವುದು ಈಗ ಬಹುಜನ ತಜ್ನರ ಅಭಿಮತ. ಎರಡೂ ವೃಷಣಗಳು ಹೊಟ್ಟೆಯ ಒಳಗಡೆಯೇ ಉಳಿದುಕೊಂಡಿದ್ದ ಪ್ರಕರಣಗಳಲ್ಲಿ ಒಂದನ್ನು ಕೆಳಗಿಳಿಸಿ ಅವನನ್ನು ಎಚ್ಚರಿಕೆಯಿಂದ ಪರಿಶೀಲಿಸಬಹುದೆಂಬ ಅಭಿಪ್ರಾಯವಿದೆ. ಅಂತಹವರು ಸಂತಾನೋತ್ಪತ್ತಿ ಕಾರ್ಯದಲ್ಲಿ ವಿಫಲವಾಗಬಹುದಾದರೂ, ಪುಲ್ಲಿಂಗಕಾರಿ ಚೋದನಿಗಳ ಉತ್ಪಾದನೆಗೆ ಸಹಾಯಕವಾಗಬಹುದು.