ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೩೪

ಸಾಮಾನ್ಯ ಶಸ್ತ್ರವೈದ್ಯದ ಕಾಯಿಲೆಗಳು

ಅತ್ಯಂತ ಸರಳ ಪರಿಸ್ಥಿತಿಯಂತೆ ಭಾಸವಾಗಬಹುದಾದ ಕೆಳಗಿಳಿಯದ ವೃಷಣದಿಂದ ಉಂಟಾಗುವ ಪರಿಣಾಮಗಳು ಅದೆಷ್ಟು ಭೀಕರ ! ಮಗು ಜನಿಸುವಾಗಲೇ ಸೂಲಗಿತ್ತಿ ಮತ್ತಿತರ ಸಹಾಯಕರು ಈ ಬಗೆಗೆ ಗಮನಹರಿಸುವಂತೆ ಅವರಲ್ಲಿ ತಿಳುವಳಿಕೆಯುಂಟು ಮಾಡಬೇಕು. ಮಗುವನ್ನು ಸ್ನಾನ ಮಾಡಿಸುವ ತಾಯಿ ಮತ್ತಿತರ ಸಂಬಂಧಿಗಳು ಈ ಬಗೆಗೆ ಗಮನಹರಿಸದಿರುವುದು ಹಲವು ವರ್ಷಗಳಾದ ನಂತರ ಆಶ್ಚರ್ಯ ಪಟ್ಟುಕೊಳ್ಳುವಂತಹ ನಿದರ್ಶನಗಳೆಷ್ಟೋ ! ಎಳೆಯ ಶಿಶುಗಳನ್ನು ಯಾವುದೇ ಕಾಯಿಲೆಗಾಗಿಯಾದರೂ ಪರೀಕ್ಷಿಸುವ ಸಂಧರ್ಭಗಳಲ್ಲಿ ವೈದ್ಯರು ಅವರ ಈ ಕಡೆಗೂ ಗಮನಹರಿಸಬೇಕು. ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳನ್ನು ಮಾಮೂಲಾಗಿ ಪರೀಕ್ಷೆ ಮಾಡುವ ವೈದ್ಯರು ಅವರ ಜನನಾಂಗಗಳನ್ನು ಪರೀಕ್ಷಿಸುವುದು ಕಡ್ಡಾಯವಾಗಬೇಕು. ಪರಿಸ್ಥಿತಿ ಆಗಲೇ ತಡವಾಗಿದ್ದರೂ ಈ ಪ್ರದೇಶದಲ್ಲಿ ತೀರಾ ಸಾಮಾನ್ಯ ಪರಿಸ್ಥಿತಿಗಳೆನಿಸಿದ ಕೆಳಗಳಿಯದ ವೃಷಣ, ವೃಷಣ ನೀರ್ಬಾವು, ಹರ್ನಿಯ, ಶಿಶ್ನದ ಬಿಗಿ ಮುಂದೊಗಲು ( ಫೈಮೋಸಿಸ್)ಗಳಂತಹ ಹಲವಾರು ನೂನತೆಗಳನ್ನು ಎಳೆಯ ವಯಸ್ಸಿನಲ್ಲೇ ಪತ್ತೆ ಹಚ್ಚಬಹುದು. ಅವರು ದೊಡ್ಡವರಾದ ಮೇಲೆ ಎದುರಿಸಬೇಕಾದ ಗಂಭೀರ ಪರಿಸ್ಥಿತಿಗಳಿಗೆ ಎಳೆಯ ವಯಸ್ಸಿನಲ್ಲೇ ಸೂಕ್ತ ಚಿಕಿತ್ಸೆಗಳಪಡಿಸುವುದು ಒಳ್ಳೆಯದು.

  • * * *