ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೮ ಸಾಮಾನ್ಯ ಶಸ್ತ್ರವೈದೈದ ಕಾಯಿಲೆಗಳು

ಪ್ರಸ್ತಾಪಿಸಲಾಗಿದೆ. ನ್ಯೂನ ಪೋಷಣೆ ಮತ್ತು ಉರಿಬಿಸಿಲಿನಲ್ಲಿರುವ ಅತಿ ನೇರಳೆ ಕಿರಣಗಳ ಜಳಕದಿಂದ, ಹಳ್ಳಿಗಾಡುಗಳಲ್ಲಿ ಕಾರ್ಯ ನಿರತರಾದ ಬಡಜನರಲ್ಲೇ ಈ ತರೆಹೆಯ ಕಣ್ಫರೆಗಳಾಗುವುದು ಅತಿ ಹೆಚ್ಚು.ಇತರ ದೇಶಗಳ ಜನರಲ್ಲಿ ಸುಮಾರು ೬೫-೭೦ ವರ್ಷಗಳಾದವರಲ್ಲಿ ಈ ರೀತಿಯ ಕಣ್ಫರೆ ಉದ್ಭವಿಸಿದರೆ ನಮ್ಮಲ್ಲಿ ೫೦-೫೫ ವರ್ಷದವರಲ್ಲೇ ಅವು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ.

  ಏಣಿನ ಕಣ್ಫರೆ : ಕಣ್ಣಿಗೆ ಏಟು ಬೀಳುವುದು, ಕಣ್ಣೊಳಗಡೆ ಲೋಹದ ವಸ್ತುಗಳು ಸೇರಿಕೊಳ್ಳುವುದು, ಬಾಣ ಬಿರುಸುಗಳ ಹೊಡೆತ, ಹೆಚ್ಚು ಶಾಖವಿರುವ ವಾತಾವರಣದಲ್ಲಿ ಕಣ್ಣೊಡ್ಡಿ ಕೆಲಸ ಮಾಡುವುದು (ಉದಾ: ಬಿಸಿ ಗಾಜಿನ ಕೊಳವೆ ಊದುವವರು) ಎಕ್ಸರೇ ಮತ್ತಿತ್ತರ ವಿಕಿರಣತೆಗೊಳಗಾಗುವವರಲ್ಲಿ ಈ ತರಹೆಯ ಕಣ್ಫರೆಗಳಾಗುತ್ತವೆ. ಇಂತಹ ಕೈಗಾರಿಕೆಗಳಲ್ಲಿ ಕೆಲಸ ಮಾಡುವವರು ಕಣ್ಣಿಗೆ ರಕ್ಷಣೆ ನೀಡುವ ಕನ್ನಡಕಗಳನ್ನು ಧರಿಸುವುದರಿಂದ ಅವು  ಉದ್ಭವವಾಗುವುದನ್ನು  ತಡೆಯಲು ಸಾಧ್ಯ. ಏಟುಗಳಿಂದ ಉರಿಯೂತ ಹತೋಟಿಗೆ ಬಂದಾಕ್ಷಣ ಕಣ್ಫರೆ ತೆಗೆಯುವ ಶಸ್ತ್ರ ಚಿಕಿತ್ಸೆ ಜರುಗಿಸುವುದು ಒಳ್ಳೆಯದು.
     ಡಯಾಬಿಟಿಸ್, ಪ್ಯಾರಾ-ಥೈರಾಯಿಡ್ ಕಣ್ಫರೆ : ಡಯಾಬಿಟಿಕರಲ್ಲಾಗುವಂತೆಯೇ ಪ್ಯಾರಾ-ಥೈರಾಯಿಡ್  ಗ್ರಂಥಿಗಳು  ಚೋದನಿ  ಅತಿಯಾಗಿ ಸ್ರವಿಸುವ ಪರಿಸ್ಥಿತಿ ಇರುವವರಲ್ಲಿ ರಕ್ತದಲ್ಲಿ ಕ್ಯಾಲ್ಸಿಯಂ ಪ್ರಮಾಣ ಹೆಚ್ಚಾಗುತ್ತದೆ. ಅದು ಮಸೂರದಲ್ಲಿ ಹೆಚ್ಚಾಗಿ ಶೇಖರಣೆಯಾಗುವುದರಿಂದ ಮಬ್ಬಾಗಿ ಕಣ್ಫರೆ ಗೋಚರಿಸುತ್ತದೆ. ಈ ಎರಡೂ ಪರಿಸ್ಥಿತಿಗಳನ್ನು ಹತೋಟಿಗೆ ತಂದು ಕಣ್ಫರೆಗಳಿಗೆ ಚಿಕಿತ್ಸೆ ಜರುಗಿಸಬೇಕಾಗುತ್ತದೆ.
          ಮದ್ದುಗಳ ಸೇವನೆಯ ಕಣ್ಫರೆ: ಅಸ್ತಮಾ ಸಂಧಿವಾತಗಳಂತಹ ಬೇನೆಗಳ ಉಪಶಮನಕ್ಕಾಗಿ ದೀರ್ಘಕಾಲ ಕಾರ್ಟಿಸೋನ್ ಮದ್ದುಗಳನ್ನು ಸೇವಿಸುವವರಲ್ಲಿ ಕಣ್ಫರೆಗಳ ಪ್ರಮಾಣ ಹೆಚ್ಚಾಗಿರುತ್ತದೆ.

ರೋಗ ಲಕ್ಷಣಗಳು

      ಕಣ್ಫರೆಗಳು ಉದ್ಭವಿಸುವ ಆರಂಭದ ಹಂತದಲ್ಲಿ ಮಂದ ಬೆಳಕಿನ ಕಿರಣಗಳು ಕಣ್ಣಿನ ಮೇಲೆ ಬಿದ್ದಾಗಲೂ ಕಣ್ಣು ಕೋರೈಸುವ  ಅನುಭವ ಉಂಟಾಗುತ್ತದೆ. ಮಸೂರದ ಮಸುಕು  ಹೆಚ್ಚಾದಂತೆಲ್ಲಾ ಅದರ ಮೂಲಕ ಹಾಯ್ದು ಹೋಗುವ ಬೆಳಕಿನ ಕಿರಣಗಳ ಪ್ರಮಾಣ ಕಡಿಮೆಯಾಗುತ್ತದೆ. ಮಬ್ಬಾದ ಮಸೂರವನ್ನು ತಾಕಿದ ಕಿರಣಗಳು ಅಡ್ಡಾದಿಡ್ಡಿಯಾಗಿ ಚದುರುತ್ತವೆ. ಅದರಿಂದ ಅಕ್ಷಿ ಪಟಲದಲ್ಲಿ