ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಣ್ಫರೆ ೫೯


ಮೂಡುವ ಪ್ರತಿಬಿಂಬ ಅಸ್ಪಷ್ಟವಾಗುತ್ತದೆ.ಕೆಲವರಿಗೆ ಕಣಿ ಕಣ್ಣಿನ ಮುಂದೆ ಸ್ವಲ್ಪ ದೂರದಲ್ಲಿ ಸ್ಥಿರವಾದ ಕಪ್ಪು ಚುಕ್ಕೆಗಳಿರುವಂತೆ ಭಾಸವಾಗುತ್ತದೆ;ಒಂದೇ ಸಾರಿಗೆ ಒಂದೇ ವಸ್ತುವಿನ ಎರುಡು-ಮೂರು ಪ್ರತಿಬಿಂಬಗಳನ್ನು ಕಂಡಂತಾಗುತ್ತದೆ.ದೃಶ್ಯದ ಸುತ್ತ ಕಾಮನ ಬಿಲ್ಲಿನ ಬಣ್ಣಗಳ ಪಟ್ಟಿ ಇರುವಂತೆ ಅನುಭವವಾಗುತ್ತದೆ.ಮಸೂರದ ವಿವಿಧ ಭಾಗಗಳಲ್ಲಿ ಬೇರೆ ಬೇರೆ ಹಂತದ ಬೆಳವಣಿಗೆಯಲ್ಲಿರುವ ಪರೆಗಳಿರುವಲ್ಲಿ ಬೆಳಕಿನ ಕಿರಣಗಳು ವಕ್ರೀಭವಿಸುವುದರಿಂದ ಈ ತೆರೆನ ದೃಷ್ಟಿ ದೋಷಗಳಾಗುತ್ತವೆ. ಮುಂದೆ ಪರೆ ಬಲಿಯುತ್ತಾ, ಹೋದಂತೆಲ್ಲಾ "ದೂರದೃಷ್ಟಿ" ಕಡಿಮೆಯಾಗುತ್ತದೆ .ಆ ತನಕ ಹತ್ತಿರದಿಂದ ಬರೆದು, ಓದಲು ಕಷ್ಟವಾಗಿ "ಚಾಳೀಸ್" ಬಂದಿದೆಯೆಂದು ಕನ್ನಡಕ ಧರಿಸುತ್ತಿದ್ದವರಿಗೆ ಹಠಾತ್ತಾಗಿ ಕನ್ನಡಕಗಕ ಅವಶ್ಯಕ ಕಂಡುಬರುವುದಿಲ್ಲ. ತಮಗೆ ಎರಡನೆಯ ದೃಷ್ಟಿ ಬಂದಿದೆಯಂದು ಖುಷಿ ಪಡುತ್ತಾರೆ! ಆದರೆ ನಿಜಸ್ಥಿತಿಯೇ ಬೇರೆ.ಕಂಪರೆಯ ಬೆಳೆವಣೆಗೆಯ ಪ್ರಗತಿಯಲ್ಲಿ ಇದೊಂದು ಹಂತವೆಂಬ ಅರಿವು ಅವರಿಗುಂಟಾಗಲು ಬಹಳ ಕಾಲ ಬೇಕಾಗಲಾರದು. ಕೆಲ ಸಮಯದಲ್ಲೇ ಪರೆ ಬಲಿತು ಕಣ್ಣು ಕಾಣೆಸದಾದಾಗ ಅವಾಕ್ಕಾಗುತ್ತಾರೆ. ಈ ರೀತಿ ಕನ್ಪರೆ ಬಲಿತು ಕಣ್ಣು ಕಾಣಿಸದಂತಾಗುವುದಕ್ಕೆ ಹಲವು ವರ್ಷಗಳ್ಳೇ ಹೆಡ್ಡಿಯಬಹುದು. ಈ ಅವಧಿಯಲ್ಲಿ ಅವರ ವಿವಿಧ ದರ್ಚೆಯ ಕುರುಡುತನವನ್ನು ಅನುಭವಿಸಬೇಕಾಗುತ್ತದೆ.

    ಕಣ್ಣನ್ನು ಬಹಳ ಹತ್ತಿರದಿಂದ ವೀಕ್ಷಿಸಿದಾಗ ಪಾಪೆಯ ರಂದ್ರದ ಹಿಂದೆ ಅಚ್ಚ ಬಿಳಿಯ ಪರದೆ(ಪರೆ) ತಂತಾನೆ ಗೋಚರಿಸುತ್ತದೆ. ಬ್ಯಾಟರಿಯ ಬೆಳಕಿನ್ನು ಹಾಯಿಸಿದಾಗ ಬಿಳುಪು ಇನ್ನೂ ಎದ್ದು ಕಾಣಿಸುತ್ತದೆ ಸಂಪೂರ್ಣವಾಗಿ ಬಲಿಯದ ಪರೆ ಭೂದು ಬಣ್ಣದ್ದಾಗಿರುತ್ತದೆ. ನೇತ್ರ ವೈದ್ಯರು "ನೇತ್ರ ಧರ್ಶಕ ಬ್ಯಾಟರಿ" (ophtalmo scope)ಯಿಂದು ನೋಡಿದಾಗ ಕೆಂಪು ಹಿನ್ನೆಲೆಯಲ್ಲಿ ಪರೆ ಕಪ್ಪಾಗಿ ಕಾಣಿಸುತ್ತದೆ.

ಚಿಕಿತ್ಸಾ ವಿಧಾನಗಳು :

         ಕಣ್ಣರೆಯ ಚಿಕಿತ್ಸೆಗೆ ಇತಿಹಾಸದ ವಿವಿಧ ಕಾಲಗಳಲ್ಲಿ ನಾನಾ ತರಹೆಯ 

ಚಿಕಿತ್ಸಾ ವಿಧಾನಗಳು ಪ್ರಚಾರದಲ್ಲಿದ್ದವು. ವೈದ್ಯಕೀಯ ಕ್ಷೇತ್ರದಲ್ಲಿ ವೈಜ್ನ್ಯಾನಿಕ ನಿಯಮಗಳು ಚಾರಿಗೆ ಬರುವವರೆಗೂ ಇಂತಹ ಚಿಕಿತ್ಸೆಗಳಿಂದ ಉಪಕಾರಗಳಿಗಿಂತ, ಆನಾಹುತಗಳೇ ಹೆಚ್ಚಾಗಿರುತ್ತಿದ್ದುದೇ ಹೆಚ್ಚೆನ್ನಬೇಕು.

        ವೈದ್ಯಕೀಯ ರಂಗದ ವಿವಿಧ ಕ್ಷೇತ್ರಗಲ್ಲಿ ಅಗಾಧ ಪ್ರಗತಿಯುಂಟಾಗಿರುವುದಾದರೂ, ಔಷಧಗಳ ಪ್ರಯೋಗದಿಂದ ಪರೆಗಳನ್ನು