9
ಆದರೆ ಈ ಸುವರ್ಣಸ್ಪರ್ಶದಿಂದ ನಿನ್ನ ಮನಸ್ಸು ತೃಪ್ತಿಗೊಳ್ಳುವುದೆ?" ಎಂದನು. ಅದಕ್ಕೆ ಸುವರ್ಣಶೇಖರನು, "ತೃಪ್ತಿಗೊಳ್ಳದೆ ಹೋಗುವುದು ಹೇಗೆ?" ಎಂದು ಪ್ರತ್ಯುತ್ತರ ಕೊಟ್ಟನು. ಹಾಗಾದರೆ ಅಂತಹ ಶಕ್ತಿಯೊಂದು ನಿನಗೆ ಬಂದರೆ ನೀನು ಬೇರೆ ದುಃಖಪಡುವುದಿಲ್ಲವಲ್ಲವೆ?" ಎಂದು ಆ ಮಹಾತ್ಮನು ಪುನಃ ಕೇಳಲು, ಅದಕ್ಕೆ ಸುವರ್ಣಶೇಖರನು "ಎಲೈ ಮಹಾತ್ಮನೆ, ಇದೇನು ಹೀಗೆ ಹೇಳುವೆ. ಸುವರ್ಣ ಸ್ಪರ್ಶವು ಹೇಗೆತಾನೆ ನನಗ ವ್ಯಸನವನ್ನುಂಟುಮಾಡೀತು. ಇದು ಒಂದು ಇರುವ ಪಕ್ಷಕ್ಕೆ ನನಗೆ ಸಂಪೂರ್ಣ ಸುಖಹೊಂದುವುದಕ್ಕೆ ಬೇರೇ ಯಾವುದೂ ಬೇಡ?" ಎಂದು ಉತ್ತರ ಕೊಟ್ಟನು. ಆಗ ಆ ಮಹಾಪುರುಷನು ಆತನನ್ನು ಕುರಿತು, "ಹಾಗೋ, ಆದರೆ ನಿನ್ನ ಇಷ್ಟದಂತಾಗಲಿ ನಾಳೆಯ ದಿನ ಸೂರ್ಯೋದಯದ ಕಾಲಕ್ಕೆ ನಿನಗೆ ಸುವರ್ಣ ಸ್ಪರ್ಶದ ವರವು ಸಿದ್ಧಿಸುವುದು?" ಎಂದು ಹೇಳಿ ಕಯ್ಗಳನ್ನು ತೂಗುತ್ತ ಅಂತರ್ಧಾನನಾದನು. ಹೀಗೆ ಆತನು ಅಂತರ್ಧಾನವಾಗುವ ಸಮಯದಲ್ಲಿ ಕೊರಡಿಯಲ್ಲಿ ವಿವರಿತವಾಗಿ ಬೆಳಕು ಹೆಜ್ಜೆ ನೋಡಲಾಗದೆ ಸುವರ್ಣಶೇಖರನು ಕಣ್ಣುಗಳನ್ನು ತಟಕ್ಕನೆ ಮುಚ್ಚಿಕೊಂಡನು. ಪುನಃ ಕಣ್ಣನ್ನು ತೆರೆಯುವ ಹೊತ್ತಿಗೆ ತನ್ನ ಚಿನ್ನದ ರಾಶಿ ವಿನಾ ಬೇರೆಯೇನೂ ಕಾಣಲಿಲ್ಲ.
ಆದಿನರಾತ್ರಿ ಸುವರ್ಣಶೇಖರನು ನಿದ್ರೆ ಹೋದನೋ, ಎಚ್ಚತ್ತಿದ್ದನೋ ಗೊತ್ತಾಗಲಿಲ್ಲ. ಮಗುವಿಗೆ ಮಾರನೆಯ ದಿವಸ ಏನಾದರೂ ಆಟದ ಸಾಮಾನನ್ನು ಕೊಡುತ್ತೇನೆಂದು ಹೇಳಿದರೆ ಅದು ಹೇಗೆ ರಾತ್ರಿಯಲ್ಲಾ ಅದರ ಧ್ಯಾನದಲ್ಲಿ ಇರುವುದೋ ಹಾಗೆಯೇ ಸುವರ್ಣಶೇಖರನೂ ಆರಾತ್ರಿ ಇದ್ದನು. ಹಾಗೂ ಹೀಗೂ ರಾತ್ರಿ ಕಳೆಯಿತು. ಅರುಣೋದಯವಾಗುವ ಹೊತ್ತಿಗೆ ಸುವರ್ಣಶೇಖರನು ಎಚ್ಚತ್ತು ಹಾಸುಗೆಯ ಮೇಲೆ ಮಲಗಿದ್ದ ಹಾಗೆಯೇ