15
ಎಂದು ಸಮಾಧಾನವನ್ನು ಹೇಳಿದನು. ಅದಕ್ಕೆ ಆ ರಾಜಗುವರಿ "ನನಗೆ ಈ ಹೂಗಳಂತೂ ಬೇಡ. ಇವಕ್ಕೆ ವಾಸನೆಯೇ ಇಲ್ಲ. ಮೂಸಿನೋಡಿದರೆ ಮೂಗಿಗೆ ಗಟ್ಟಿಯಾದ ರೇಖುಗಳು ಚುಚ್ಚಿಕೊಳ್ಳುತ್ತವೆ. ಹಾಳು ಹೂಗಳಿಂದ ಏನು ಪ್ರಯೋಜನ? ಎಂದು ಅವುಗಳನ್ನು ಬಿಸುಟುಬಿಟ್ಟಳು.
ಈ ಗುಲಾಬಿ ಹೂವಿನ ಗಲಾಟೆಯಲ್ಲಿ ಗಾಜಿನ ಬಟ್ಟಲು ಚಿನ್ನದ ಬಟ್ಟಲಾದುದು ಕೂಡ ಸುವರ್ಣಸುಂದರಿಗೆ ಗೊತ್ತಾಗಲಿಲ್ಲ. ಗೊತ್ತಾಗದಿದ್ದುದೂ ಒಳ್ಳೆಯದೇ ಆಯಿತು. ಏಕೆಂದರೆ, ಬಟ್ಟಲಿನ ಮೇಲೆ ಚಿತ್ರಿತವಾಗಿದ್ದ ಗಿಡ ಒಳ್ಳಿಗಳನ್ನೇ ಯಾವಾಗಲೂ ನೋಡು ತಿರುತ್ತಿದ್ದವಳಿಗೆ ಈಗ ಚಿನ್ನವೇ ಕಾಣಿಸುವುದರಿಂದ ಮತ್ತಷ್ಟು ಅಳುವುದಕ್ಕೆ ಕಾರಣವಾಗುತ್ತಿದ್ದಿತು.
ಸುವರ್ಣಶೇಖರನು ತುಪ್ಪದ ಬಟ್ಟಲನ್ನು ಎತ್ತಿಟ್ಟನು. ಅದು ಕೂಡಲೆ ಚಿನ್ನದ ಬಟ್ಟಲಾಯಿತು. ಬಾಳೆಯೆಲೆಯನ್ನು ತನ್ನ ಮುಂದಕ್ಕೆ ಎಳೆದುಕೊಂಡನು. ಅಗೂ ಚಿನ್ನದ ಎಲೆಯಾಯಿತು. ಇದನ್ನು ನೋಡುತ್ತಲೆ ಅರಸನು ಆಶ್ಚರ್ಯಪಟ್ಟು ಹೀಗಾದರೆ ಮುಂದೇನು ಗತಿ! ಈ ಪಾತ್ರೆಗಳನ್ನು ಇಡುವುದೆಲ್ಲಿ? ಇದನ್ನು ಜೋಪಾನವಾಗಿ ನೋಡಿಕೊಳ್ಳುವರು ಯಾರು?" ಎನ್ನುತ್ತಾ, ಬಟ್ಟಲಲ್ಲಿದ್ದ ಹಾಲನ್ನು ಸ್ವಲ್ಪ ಕುಡಿದನು ಆದರೆ ಅದು ಬಾಯಿಗೆ ಬಿದ್ದ ಕೂಡಲ ಸುವರ್ಣ ದ್ರಾವಕವಾ) ಕಡೆಗೆ ಚಿನ್ನದ ಗಟ್ಟಿಯಾಯಿತು. ಅನ್ನವನ್ನು ಮುಟ್ಟಿದನು. ಅದು ತಕ್ಷಣವೇ ಚಿನ್ನದ ಅಗುಳಾಯಿತು. "ಅಯ್ಯೋ! ಇನ್ನೇನು ಗತಿ! ನನಗೆ ಹೊಟ್ಟೆಗೆ ಆಹಾರ ದೊರೆಯುವ ಬಗೆ ಹೇಗೆ? ನಾನು ಜೀವಿಸುವುದು ತಾನೆ ಹೇಗೆ? ಒಳ್ಳೆಯ ಸಂಕಟ ಪ್ರಾಪ್ತವಾಯಿತಲ್ಲಾ!" ಎಂದುಕೊಂಡು ಸುವರ್ಣಶೇಖರನು ಎಲೆಯಲ್ಲಿದ್ದ ಬೂಂದಿಲಾಡು ಗಳನ್ನು ತೆಗೆದುಕೊಂಡನು ಅವೂ ಕೂಡಲೆ ಚಿನ್ನದ ಕಾಳಿನ